Asianet Suvarna News Asianet Suvarna News

2020ರಲ್ಲಿ ತಪ್ಪಿಯೂ ಕೂಡಾ ಈ ಒಂದು ತಪ್ಪನ್ನು ಮಾಡಿ ಪರಿತಪಿಸದಿರಿ!

2019ಕ್ಕೆ ಗುಡ್‌ಬೈ, ಹೊಸವರ್ಷ 2020 ಸ್ವಾಗತಿಸಲು ರೆಡಿನಾ?| ಎಚ್ಚರ... ಹೊಸ ವರ್ಷದಲ್ಲಿ ನೀವು ಮಾಡುವ ಒಂದು ತಪ್ಪು ಜೀವನವಿಡೀ ನಿಮ್ಮನ್ನು ಪರಿತಪಿಸುವಂತೆ ಮಾಬಹುದು!| ರೂಡಿಯಲ್ಲಿ ಕೊಂಚ ಬದಲಾವಣೆ ಮಾಡಿ, ಸೇಫಾಗಿರಿ

Beware While Writing Date in 2020
Author
Bangalore, First Published Dec 30, 2019, 5:31 PM IST
  • Facebook
  • Twitter
  • Whatsapp

ನವದೆಹಲಿ[ಡಿ.30]: ಹೊಸ ವರುಷ ಸಮೀಪಿಸುತ್ತಿದೆ. ನ್ಯೂ ಇಯರ್ 2020 ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ನೂರಾರು ಕನಸುಗಳನ್ನು ಹೊತ್ತ ಮನಸ್ಸು ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಕಾಯುತ್ತಿದೆ. ಆದರೆ 2019 ನೇ ಇಸವಿಗೆ ವಿದಾಯ ಕೋರಿ 2020 ರ ವರುಷಕ್ಕೆ ಪಾದಾರ್ಪಣೆ ಮಾಡುವ ಉತ್ಸಾಹದಲ್ಲಿ ಈ ಒಂದು ತಪ್ಪು ಮಾಡಿ ಜೀವನವಿಡೀ ಪರಿತಪಿಸದಿರಿ. 

ಹೌದು ಎಲ್ಲರಿಗೂ ತಿಳಿದಿರುವಂತೆ ಹೊಸ ವರುಷ ಆರಂಭವಾದಾಗ ಇಸವಿಯೂ ಬದಲಾಗುತ್ತದೆ. ಆದರೆ 2020 ಇಸವಿ ನಮೂದಿಸುವಾಗ ನೀವು ಕಣ್ತಪ್ಪಿನಿಂದ ಮಾಡುವ ಸಣ್ಣ ತಪ್ಪು ಭವಿಷ್ಯದಲ್ಲಿ ನಿಮ್ಮನ್ನು ಇನ್ನಿಲ್ಲದಂತೆ ಕಾಡಬಹುದು. ವಿಶೇಷವಾಗಿ 2020ರಲ್ಲಿ ಕೊಂಚ ಎಚ್ಚರದಿಂದಿದಿರಿ. ಮುಂದಿನ ವರ್ಷ ಇಸವಿ ಬರೆಯುವಾಗ ನೀವು ಮಾಡುವ ಸಣ್ಣ ಬದಲಾವಣೆ ನಿಮ್ಮನ್ನು ಭವಿಷ್ಯದಲ್ಲಿ ಸೇಫಾಗಿರಿಸುತ್ತದೆ.

2020ನೇ ವರ್ಷದ ಸಾರ್ವತ್ರಿಕ ರಜೆ ಪಟ್ಟಿ ಬಿಡುಗಡೆ: 7 ರಜೆ ನಷ್ಟ!

ಸಾಮಾನ್ಯವಾಗಿ ದಿನಾಂಕವನ್ನು ಬರೆಯುವಾಗ ಇಸವಿಯ ಕೊನೆಯ 2 ಅಂಕಿಗಳನ್ನಷ್ಟೇ ನಮೂದಿಸುವ ರೂಡಿ ಹಲವರಿಗಿದೆ. ಉದಾಹರಣೆಗೆ ಜನವರಿ 01, 2019 ನ್ನು 01/01/19 ಎಂದು ನಮೂದಿಸುತ್ತೇವೆ. ಆದರೆ ಈ ವಿಧಾನವನ್ನು 2020 ರಲ್ಲಿ ಬಳಸದಿರಿ. ಯಾಕೆಂದರೆ ನೀವು ಕೇವಲ 01/01/20 ಎಂದು ಬರೆದರೆ ಮುಂದೆ ಅದನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವವರು, ಅವರವರ ಅನುಕೂಲಕ್ಕೆ ತಕ್ಕಂತೆ ಅದನ್ನು ಸುಲಭವಾಗಿ ಬದಲಾಯಿಸಿಕೊಳ್ಳುತ್ತಾರೆ.

ಉದಾಹರಣೆಗೆ ನೀವು 01/01/20 ನ್ನು 01/01/2000, 2008, 2010, 2019 ಹೀಗೆ ಅವರವರ ಅನುಕೂಲಕ್ಕೆ ಬೇಕಾದಂತೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜಾಗರೂಕರಾಗಿ ಹೊಸ ವರ್ಷವನ್ನು ಸ್ವಾಗತಿಸುವುದರೊಂದಿಗೆ, ದಿನಾಂಕ ನಮೂದಿಸುವಾಗ ಇಸವಿಯ ಎಲ್ಲಾ 4 ಅಂಕಿಗಳನ್ನು ಬರೆಯಲು ಮರೆಯದಿರಿ. ಅದರಲ್ಲೂ ವಿಶೇಷವಾಗಿ ಬ್ಯಾಂಕ್ ಚೆಕ್, ಪ್ರಮುಖ ದಾಖಲೆ, ಅರ್ಜಿ ಹೀಗೆ ಎಲ್ಲಾ ಕಡೆ ದಿನಾಂಕ ಸರಿಯಾಗಿ ನಮೂದಿಸಿ. ಅಂತೆಯೇ 2020ರಲ್ಲಿ ಕೇವಲ 20 ಎಂದು ನಮೂದಿಸಿರುವ ದಾಖಲೆಗಳನ್ನು ಸ್ವೀಕರಿಸಬೇಡಿ.

ಹೊಸ ವರ್ಷ 2020ರಲ್ಲಿ ಈ ಸಣ್ಣ ಬದಲಾವಣೆ ಹಾಗೂ ಎಚ್ಚರಿಕೆಯ ಕ್ರಮ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. 

ಹೊಸ ವರ್ಷ ಸಂಭ್ರಮಾಚರಣೆಗೆ ಪೊಲೀಸ್ ಫುಲ್ ರೆಡಿ!

"


 

Follow Us:
Download App:
  • android
  • ios