ಜನರೇಷನ್ Z ಯುವತಿಯ ಅಪಹರಣದ ಸನ್ನಿವೇಶದಲ್ಲಿ ಆಕೆಯ ವರ್ತನೆ ಅಪಹರಣಕಾರರನ್ನು ಹೇಗೆ ಸುಸ್ತಾಗಿಸುತ್ತದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.ಇತರ ಹಿಂಸೆ ಕೊಟ್ರೆ ಯಾರು ಬದುಕ್ತಾರೆ ಗುರು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Generation Z girl: ಜನರೇಷನ್ Z ಯುವ ಸಮುದಾಯ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ತಾರೆ. ನಂತರ ಯಾವುದೇ ಫಿಲ್ಟರ್ ಇಲ್ಲದೆಯೇ ಮಾತನಾಡುತ್ತಾರೆ. ತಾವು ಪ್ರತಿದಿನ ಏನು ಮಾಡುತ್ತೇವೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡುತ್ತಾರೆ. ಮನೆಯಲ್ಲಿ ಯಾರಾದ್ರೂ ಏನೇ ಕೇಳಿದರೂ ಮೊದಲು ಗೂಗಲ್ ಮಾಡುವ ಅಭ್ಯಾಸ ಸಹ ಇವರಿಗಿರುತ್ತದೆ. ಸೋಶಿಯಲ್ ಮೀಡಿಯಾ ಮೂಲಕ ಎಲ್ಲವನ್ನು ತಿಳಿದುಕೊಂಡಿರುವ ಜಾಣರಾಗಿರುತ್ತಾರೆ. ಇತ್ತೀಚೆಗೆ ಜನರೇಷನ್ 'Z' ಯುವಕ ಮತ್ತು ಯುವತಿಯರ ತಮಾಷೆ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಜನರೇಷನ್ 'Z'ಯುವತಿ ಮದುವೆ ಬಳಿಕ ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕುತ್ತಾ ಹೇಳಿದ್ದ ಮಾತುಗಳನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದರು. ಗಂಡನ ಮನೆಗೆ ಹೋದ್ರೆ ಬಟ್ಟೆ ತೊಳೆಯಬೇಕು, ಅಡುಗೆ ಮಾಡಬೇಕು, ಚಿಕ್ಕ ಚಿಕ್ಕ ಬಟ್ಟೆ ಧರಿಸಲು ಆಗಲ್ಲ ಎಂದು ಅತ್ತಿದ್ದಳು.
ಇದೀಗ ಜನರೇಷನ್ 'Z' ಯುವತಿಯನನ್ನು ಅಪಹರಿಸಿದ್ರೆ ಅಪಹರಣಕಾರರೇ ಹೇಗೆ ಸುಸ್ತಾಗ್ತಾರೆ ಎಂಬ ವಿಡಿಯೋ ವೈರಲ್ ಆಗಿದೆ. 80-90-2000ರ ಸಿನಿಮಾಗಳಲ್ಲಿ ಕಿಡ್ನ್ಯಾಪ್ ಅಂದ್ರೆ ಭಯಗೊಳ್ಳುವಂತೆ ತೋರಿಸಲಾಗುತ್ತಿತ್ತು. ಅಪಹರಣ ಮಾಡುತ್ತಲೇ ನಟಿಯರನ್ನು ಕಟ್ಟಿ ಹಾಕಿ ಕಿರುಕುಳ ನೀಡಲಾಗತ್ತಿತ್ತು. ನಟಿಯರು ಸಹಾಯಕ್ಕಾಗಿ ಜೋರಾಗಿ ಕೂಗುತ್ತಾ ಕಣ್ಣೀರು ಹಾಕುತ್ತಿದ್ದರು. ಒಂದು ವೇಳೆ ಸದ್ಯದ ಜನರೇಷನ್ ಯುವತಿಯರು ಅಪಹರಣಕ್ಕೊಳಗಾದ್ರೆ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ.
ಈ ವಿಡಿಯೋವನ್ನು deesha.umesh ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಖಾತೆಯಲ್ಲಿ ವಿವಿಧ ರೀತಿಯ ತಮಾಷೆ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋಗೆ 2.38 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹಿಂಗ್ ಆದ್ರೆ ನಾವಂತೂ ನಿಮ್ಮನ್ನ ಕಿಡ್ನ್ಯಾಪ್ ಮಾಡಲ್ಲ. ತುಂಬಾ ಫನ್ನಿಯಾಗಿದ್ದು, ಯಾರೇ ನಿಮ್ಮನ್ನು ಅಪಹರಿಸಬೇಕಾದ್ರೆ ನೂರು ಸಾರಿ ಯೋಚಿಸಬೇಕಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನನಗೊಬ್ಬಳಿಗೆ ನಾಚಿಕೆ ಆಗ್ತಿದೆ? ಮದುವೆಯ ಮೊದಲ ದಿನದ ವಿಡಿಯೋ ಹಂಚಿಕೊಂಡ ದಂಪತ
ವೈರಲ್ ವಿಡಿಯೋದಲ್ಲಿ ಏನಿದೆ?
ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಕಾರ್ ಹಿಂಬದಿ ಸೀಟ್‌ನಲ್ಲಿ ಕೂರಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಯುವತಿ ನನಗೆ ಮುಂದೆ ಕುಳಿತು ಅಭ್ಯಾಸ, ಫ್ರಂಟ್ ಸೀಟ್‌ನಲ್ಲಿ ಕುಳಿತುಕೊಳ್ಳಲ್ಲಾ ಎಂದು ಕೇಳುತ್ತಾರೆ. ಮುಂದೆ ಕೈ ಮತ್ತು ಬಾಯಿಗೆ ಬಟ್ಟೆ ಕಟ್ಟಿದ್ರೂ ಎಂಥಾ ಕೆಟ್ಟ ಸಾಂಗ್ ಪ್ಲೇ ಮಾಡ್ತಿದ್ದೀರಾ. ನನಗೆ ಆಕ್ಸೆಸ್ ಕೊಡಿ ನನ್ನ ಬಳಿ ಒಳ್ಳೆಯ ಸಾಂಗ್ ಪ್ಲೇ ಲಿಸ್ಟ್ ಇದೆ ಎನ್ನುತ್ತಾಳೆ. ನಂತರ ಎಸಿ ತುಂಬಾ ಆಯ್ತು ಸ್ವಲ್ಪ ಕಡಿಮೆ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಾಳೆ.
ಅಣ್ಣಾ, ಪ್ಲೀಸ್ ಕಾರ್ ಸೈಡ್‌ನಲ್ಲಿ ನಿಲ್ಲಿಸು, ಸುಸು ಮಾಡಿ ನಾನೇ ಬರುತ್ತೇನೆ. ಅಣ್ಣಾ ಯಾವ ರೂಟ್ ತೆಗೆದುಕೊಳ್ಳುತ್ತಿದ್ದೀರಿ. ಸಿಲ್ಕ್ ಬೋರ್ಡ್ ರೂಟ್ ಬೇಡ, ಅಲ್ಲಿ ತುಂಬಾ ಟ್ರಾಫಿಕ್ ಇರುತ್ತೆ. ಓ ಇವಾಗ ಫ್ಲೈ ಓವರ್ ಆಗಿದೆ ಅಲ್ಲವಾ ಪರವಾಗಿಲ್ಲ ಹೋಗಬಹುದು. ಓ ಟೋಲ್ ಕಟ್ಟಬೇಕಾ? ನನ್ನ ಬ್ಯಾಗ್‌ನಲ್ಲಿ ಚೇಂಜ್ ಇದೆ ಬೇಕಿದ್ರೆ ತೆಗೆದುಕೊಳ್ಳಿ. ಇದೆಲ್ಲಾ ಓಕೆ, ರಾತ್ರಿ ಊಟಕ್ಕೆ ಏನು ವ್ಯವಸ್ಥೆ ಮಾಡಿದ್ದಿರಿ, ಹಸಿ ಈರುಳ್ಳಿ ಇರೋದೆಲ್ಲಾ ನಾನು ತಿನ್ನಲ್ಲ, ಸ್ವಲ್ಪ ನೋಡ್ಕೊಂಟು ಊರ ತೆಗೆದುಕೊಂಡು ಬನ್ನಿ ಅಂತಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ, ಇಷ್ಟೊಂದು ಜನರು ಇರುವಾಗ ನನ್ನನ್ನೇ ಏಕೆ ಕಿಡ್ನ್ಯಾಪ್ ಮಾಡಿದ್ರಿ ಎಂದು ಕೇಳುತ್ತಲೇ ಅಪಹರಣಕಾರರಿಗೆ ಸಿಟ್ಟು ಬಂದು ಕಾರ್ ನಿಲ್ಲಿಸುತ್ತಾರೆ. ನಂತರ ಆಕೆಯನ್ನು ಕೆಳಗೆ ಇಳಿಸಿ ಅಲ್ಲಿಂದ ಹೊರಡುತ್ತಾರೆ. ಈ ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು
