ಕೋಲ್ಕತಾ(ಮಾ.23): ಉದ್ಯೋಗಕ್ಕಾಗಿ ದೂರದ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ಬಂದು, ಕೊರೋನಾ ಭೀತಿಯಿಂದ ಮತ್ತೆ ತವರಿಗೆ ಮರಳಿದ ಇಜರುಲ್‌ ಎಂಬಬ ಬಡಗಿಯೊಬ್ಬನಿಗೆ ಅದೃಷ್ಟಲಾಟರಿ ರೂಪದಲ್ಲಿ ಬಂದಿದೆ.

ಕೆಲ ದಿನಗಳ ಹಿಂದೆ ಕೇರಳಕ್ಕೆ ಬಂದಿದ್ದ ಇಜರುಲ್‌, ಕೇರಳದಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿದ್ದಂತೆ ಊರಿಗೆ ಮರಳಿದ್ದಾನೆ. ಸ್ಲೀಪರ್‌ ಕೋಚ್‌ನಲ್ಲಿ ಹೋಗಲು ಹಣವಿಲ್ಲದೇ, ತುಂಬಿದ ಸಾಮಾನ್ಯ ಡಬ್ಬಿ ಹತ್ತಿ ಎರಡು ದಿನಗಳ ಬಳಿಕ ಮನೆಗೆ ತಲುಪಿದ್ದ.

ಊರಿಗೆ ಮರಳಿದ ಬಳಿಕ ಕೆಲಸ ಇಲ್ಲದೇ, ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಇಜರುಲ್‌ ಮನೆ ಬಾಗಿಲಿಗೇ ಭಾಗ್ಯಲಕ್ಷ್ಮಿ ಬಂದಿದ್ದಾಳೆ. ಕೇರಳದಲ್ಲಿ ಕೆಲಸ ಮಾಡುತ್ತಿದ್ದಾಗ ಖರೀದಿ ಮಾಡಿದ್ದ ಹತ್ತು ಲಕ್ಷ ರುಪಾಯಿಯ ಲಾಟರಿ ಹೊಡೆದಿದೆ. ಕೊರೋನಾ ಭೀತಿಯಿಂದಾಗಿ ನಾನು ಊರಿಗೆ ಮರಳಿದ್ದೆ. ಗಳಿಸಿದ್ದ ಕಾಸು ಕರಗುತ್ತಲೇ, ಜೀವನ ನಡೆಸುವ ಬಗ್ಗೆ ಚಿಂತೆಯಾಗಿತ್ತು.

ಈ ವೇಳೆ ಗುರುವಾರ ನನ್ನ ಹೆಸರಿಗೆ ಲಾಟರಿ ಬಂದಿದ್ದು ಗೊತ್ತಾಯಿತು. ಹಾಗಾಗಿ ಭವಿಷ್ಯದ ಅನಿಶ್ಚಿತತೆ ಮಾಯವಾಗಿದೆ ಎನ್ನು ಎಂದು ಹೇಳುವಾಗ ಇಜರುಲ್‌ ಕಣ್ಣಲ್ಲಿ ನಗುವಿತ್ತು. ಬಾನಿನಷ್ಟುಹರ್ಷವಿತ್ತು. ವಿಷಯ ತಿಳಿದು ಮನೆ ಮುಂದೆ ಜನ ಜಂಗುಳಿಯೇ ನರರೆದಿತ್ತು.

ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ