ಕೊಲ್ಕತ್ತಾ(ಏ.04): ತಮಗೆ ಅನುಕೂಲವಲ್ಲದ ಆದೇಶ ನೀಡಿದ ಕಾರಣ ನ್ಯಾಯಾಧೀಶರಿಗೆ ಕೊರೋನಾ ಸೋಕು ತಗುಲಲಿ ಎಂದು ವಕೀಲರೊಬ್ಬರು ಶಾಪ ಹಾಕಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ ಮಾಚ್‌ರ್‍ 15ರಿಂದ ತುರ್ತು ವಿಷಯಗಳನ್ನು ಮಾತ್ರ ಆಲಿಸುತ್ತಿದೆ. ವಿಜಯ್‌ ಅಧಿಕಾರಿ ಎಂಬ ವಕೀಲ ‘ಸಾಲ ಮರುಪಾವತಿಸದ ಕಾರಣ ರಾಷ್ಟ್ರೀಕೃತ ಬ್ಯಾಂಕ್‌ವೊಂದು ತಮ್ಮ ಕಕ್ಷೀದಾರರ ಬಸ್‌ ಹರಾಜು ಹಾಕುತ್ತಿದೆ. ಈ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಆದರೆ ಕೋರ್ಟ್‌ ತುರ್ತು ವಿಚಾರಣೆಗೆ ನಿರಾಕರಿಸಿದ ಕಾರಣ ವಕೀಲರು ಈ ರೀತಿ ಶಾಪ ಹಾಕಿದ್ದಾರೆ.

"

ವಕೀಲರ ವರ್ತನೆ ಕಂಡ ನ್ಯಾಯಾಧೀಶ ದೀಪಕ್‌ ದತ್ತಾ ನ್ಯಾಯಾಲಯದ ಘನತೆ ಎತ್ತಿಹಿಡಿಯುವ ರೀತಿ ವರ್ತಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.