ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ನಿಂದ ಆದೇಶ ಬರುವ ಒಂದು ದಿನ ಮುಂಚೆ. ತಮ್ಮ ಗುರುದ್ವಾರದಲ್ಲಿ ಇಬ್ಬರು ಮಹಿಳೆಯರ ವಿವಾಹ ಮಾಡಿಸಿದ್ದ ಪೂಜಾರಿಗೆ ಅಮಾನತು ಶಿಕ್ಷೆ. 

ಬಠಿಂಡಾ (ಅ.18): ಇಲ್ಲಿನ ಕಾಲ್ಗೀದಾರ್‌ ಸಾಹಿಬ್‌ ಗುರುದ್ವಾರದಲ್ಲಿ ಸೆ.18ರಂದು ಸಲಿಂಗ ವಿವಾಹ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಇಲ್ಲಿನ 4 ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಸಿಖ್ಖರ ಅತ್ಯುನ್ನತ ಮಂಡಳಿಯಾದ ಅಕಾಲ್‌ ತಖ್ತ್‌ನ ಜಾತೇದಾರ್‌ (ಸಿಖ್ ಧರ್ಮಗುರುವಿನ ಅತ್ಯುನ್ನತ ಪದವಿ) ಆದೇಶ ಹೊರಡಿಸಿದ್ದಾರೆ.

ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ನಿಂದ ಆದೇಶ ಬರುವ ಒಂದು ದಿನ ಮುಂಚೆ ತೆಗೆದುಕೊಂಡಿರುವ ಈ ನಿರ್ಧಾರವನ್ನು ಅಮೃತಸರದಲ್ಲಿ ನಡೆದ ಐದು ಸಿಖ್‌ ಧರ್ಮಗುರುಗಳ ನ್ಯಾಯ ಪಂಚಾಯ್ತಿಯಲ್ಲಿ ತೀರ್ಮಾನಿಸಲಾಯಿತು. 2005ರಲ್ಲಿ ಜಾತೆದಾರ್‌ ಅವರು ಸಿಖ್‌ ಧರ್ಮದಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ ಎಂಬ ಹುಕಂನಾಮಾ (ಧರ್ಮಾದೇಶ) ಹೊರಡಿಸಿದ್ದು, ಸಿಖ್‌ ನಿತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಗುರುದ್ವಾರದ ಪೂಜಾರಿ, ತಬಲಾ ವಾದಕ ಹಾಗೂ ಇತರ ಇಬ್ಬರು ಸಿಬ್ಬಂದಿಯನ್ನು ಐದು ವರ್ಷಗಳ ಕಾಲ ಅಮಾನತು ಮಾಡಿ ಆದೇಶಿಸಿದ್ದಾರೆ.

ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ಧವಾದದ್ದು, ಇದನ್ನು ನಾನು ಒಪ್ಪೋದಿಲ್ಲ: ಪ್ರಮೋದ್ ಮುತಾಲಿಕ್

ಸಲಿಂಗ ವಿವಾಹದ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹವಾಗಿದೆ. ನಮ್ಮ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಗಂಭೀರವಾಬಾಗಿ ಚರ್ಚಿಸಬಹುದು ಮತ್ತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಆರ್‌ಎಸ್‌ಎಸ್‌ ಹೇಳಿದೆ.

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸುವುದನ್ನು ವಿಶ್ವ ಹಿಂದೂ ಪರಿಷದ್‌ ಸ್ವಾಗತಿಸುತ್ತದೆ. ಅಲ್ಲದೇ ಸಲಿಂಗಕಾಮಿಗಳಿಗೆ ಮಗುವನ್ನು ದತ್ತು ಪಡೆಯುವ ಹಕ್ಕನ್ನು ನೀಡದಿರುವ ನ್ಯಾಯಾಲಯದ ತೀರ್ಪು ಕೂಡ ಉತ್ತಮ ಹೆಜ್ಜೆಯಾಗಿದೆ. ಈ ತೀರ್ಮಾನ ನಮಗೆ ತೃಪ್ತಿ ತಂದಿದೆ. ಸಲಿಂಗಕಾಮಿಗಳ ನಡುವಿನ ಸಂಬಂಧ ನೋಂದಣಿಗೆ ಅರ್ಹವಲ್ಲ ಹಾಗೂ ಅದು ಅವರ ಮೂಲಭೂತ ಹಕ್ಕು ಅಲ್ಲ ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ.

ಸಲಿಂಗ ದಂಪತಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ತೀರ್ಪಿನ ಪ್ರಮುಖಾಂಶಗಳು ಹೀಗಿದೆ..

ನಾಗರಿಕರ ಸ್ವಾತಂತ್ರ್ಯ,ಹಕ್ಕು ಕಾಪಾಡಲು ಬದ್ಧ: ಕಾಂಗ್ರೆಸ್‌
ಸಲಿಂಗ ವಿವಾಹ ಮತ್ತು ಸಂಬಂಧಿತ ವಿಷಯಗಳ ಕುರಿತು ಇಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ. ಬಳಿಕ ಕಾಂಗ್ರೆಸ್‌ ವಿವರವಾದ ಪ್ರತಿಕ್ರಿಯೆ ನೀಡುತ್ತದೆ. ಎಲ್ಲರನ್ನೂ ಒಳಗೊಂಡಿರುವ ಪಕ್ಷವಾಗಿ ಕಾಂಗ್ರೆಸ್‌, ಯಾವಾಗಲೂ ನಮ್ಮ ನಾಗರಿಕರೊಂದಿಗೆ ಅವರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ನಿಂತಿದೆ. ಅಲ್ಲದೇ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿನ ತಾರತಮ್ಯರಹಿತ ಪ್ರಕ್ರಿಯೆಯನ್ನು ದೃಢವಾಗಿ ನಂಬುತ್ತದೆ ಎಂದು ಕಾಂಗ್ರೆಸ್ ಹೇಳಿದೆ.