ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕಾಶ್ಮೀರದ ಸಂಸದನಿಗೆ ಜಾಮೀನು
ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜೈಲಿನಲ್ಲಿದ್ದು ಚುನಾವಣೆಗೆ ಸ್ಪರ್ದಿಸಿ ಗೆದ್ದಿದ್ದ ಸಂಸದನಿಗೆ ದಿಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ನವದೆಹಲಿ: ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಕಾಶ್ಮೀರದ ಲೋಕಸಭಾ ಸದಸ್ಯ ಶೇಖ್ ಅಬ್ದುಲ್ ರಶೀದ್‌ಗೆ (ಎಂಜಿನಿಯರ್ ರಶೀದ್) ಮಂಗಳವಾರ ದಿಲ್ಲಿ ಕೋರ್ಟ್ ಅ.2ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಸೆ.18ರಿಂದ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರು ತಮ್ಮ ಆಪ್ತರ ಪರ ಪ್ರಚಾರ ಮಾಡುವ ಸಾಧ್ಯತೆಗಳಿವೆ.
2017ರ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ರಶೀದ್‌ರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. 2019ರಿಂದಲೂ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಶೀದ್ ಅವರು ಬಾರಾಮುಲ್ಲಾದಲ್ಲಿ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಜು. 5 ರಂದು ಪ್ರಮಾಣವಚನ ಸ್ವೀಕಾರಕ್ಕೆ ಕೋರ್ಟ್ 1 ದಿನದ ಪೆರೋಲ್ ನೀಡಿತ್ತು.
ವಕ್ಫ್ ಮಸೂದೆಯನ್ನು ತಿರಸ್ಕರಿಸಿ: ದೇಶಭ್ರಷ್ಟ ಝಾಕಿರ್ ಕರೆ
ದೇಶ ಬಿಟ್ಟು ಪಲಾಯನ ಮಾಡಿರುವ ವಿವಾದಿತ ಮತಾಂಧ ನಾಯಕ ಝಾಕೀರ್ ನಾಯ್ಕ್ ಭಾರತದ ವಿಚಾರಕ್ಕೆ ಮೂಗು ತೂರಿಸಿದ್ದು, ಕೇಂದ್ರ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿದ್ದಾನೆ. ಅಲ್ಲದೇ ‘ ವಕ್ಫ್ ಆಸ್ತಿ ರಕ್ಷಿಸಬೇಕಾದರೆ, ವಕ್ಫ್ ತಿದ್ದುಪಡಿ ಮಸೂದೆ ತಿರಸ್ಕರಿಸಿ’ ಎಂದು ಮುಸ್ಲಿಮರಿಗೆ ಕರೆ ನೀಡಿದ್ದಾನೆ.
ಭಾರತದಲ್ಲಿರುವ ರಹಸ್ಯಮಯ ‘Haunted’ ದೇವಸ್ಥಾನ, ಇಲ್ಲಿ ಹೋಗೋ-ಬರೋ ಜನ ಎಸಿತಾರೆ ನೀರಿನ ಬಾಟೆಲ್
‘ಭಾರತದಲ್ಲಿರುವ ಕನಿಷ್ಠ 50 ಲಕ್ಷ ಮುಸ್ಲಿಮರು ಈ ಮಸೂದೆಗೆ ನಿರಾಕರಣೆಯನ್ನು ಕಳುಹಿಸಬೇಕು. ಭಾರತೀಯರ ವಕ್ಫ್ ಆಸ್ತಿ ರಕ್ಷಿಸಬೇಕಾದರೆ, ವಕ್ಫ್ ತಿದ್ದುಪಡಿ ಮಸೂದೆ ತಿರಸ್ಕರಿಸಿ. ವಕ್ಫ್‌ನ ಪಾವಿತ್ರ್ಯತೆ ಉಲ್ಲಂಘಿಸುವ, ಭವಿಷ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುವ ದುಷ್ಟತನವನ್ನು ನಿಲ್ಲಿಸಲು ಮುಸ್ಲಿಮರಿಗೆ ಇದೊಂದು ಕರೆಯಾಗಿದೆ ’ಎಂದು ಟ್ವೀಟ್ ಮಾಡಿದ್ದಾನೆ.
ಇದಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ‘ದೇಶದ ಹೊರಗಡೆಯಿಂದ ನಮ್ಮ ದೇಶದ ಅಮಾಯಕ ಮುಸ್ಲಿಮರ ಹಾದಿ ತಪ್ಪಿಸಬೇಡಿ. ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶವಿದೆ. ಸುಳ್ಳು ಪ್ರಚಾರ ಬೇಡ’ ಎಂದಿದ್ದಾರೆ.
ಪಾಕ್ ಉಗ್ರರ ಬೇಟೆಗೆ 500 ಪ್ಯಾರಾ ಕಮಾಂಡೋ ನಿಯೋಜನೆ- ಅಕ್ರಮವಾಗಿ ನುಸುಳಿರುವ ಉಗ್ರರ ಎದುರಿಸಲು ದಿಟ್ಟ ಹೆಜ್ಜೆ