ಢಾಕಾ(ಡಿ.22): ಪೌರತ್ವ ಕಾಯ್ದೆ ಹಾಗೂ NRC ಭಾರತದ ಆಂತರಿಕ ವಿಷಯಗಳೇ ಆಗಿದ್ದರೂ, ಅದು ನೆರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRCಯಿಂದ ಭಾರತದಲ್ಲಿ ಉಂಟಾಗಿರುವ ಅಸ್ಥಿರತೆ, ನೆರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅಬ್ದುಲ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಜಾರಿಯ ಅಸಲಿಯತ್ತು(?) ಹೇಳಿದ ಇಮ್ರಾನ್!

 ಈ ಮಧ್ಯೆ ಪ್ರಧಾನಿ ಮೋದಿ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ್ದು, ಭಾರತದಲ್ಲಿನ ಸದ್ಯದ ಪರಿಸ್ಥಿತಿ ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಎಲ್ಲಿದೆ ಬಂಧನ ಶಿಬಿರ?: ದೆಹಲಿಯಲ್ಲಿ ಪ್ರಧಾನಿ ಸಮರ!

ನಾವು ಭಾರತದ ನಂ.1 ಮಿತ್ರ ರಾಷ್ಟ್ರ. ಅಲ್ಲೇನಾದರೂ ಅಸ್ಥಿರತೆ, ಅನಿಶ್ಚಿತತೆ ಉಂಟಾದರೆ ಅದು ನಮ್ಮ ಮೇಲೆಯೂ ಪರಿಣಾಮ ಬೀರಲಿದೆ. ಇದಷ್ಟೇ ನಮ್ಮ ಭಯ ಎಂದು ಮೊಮೆನ್ ಹೇಳಿದ್ದಾರೆ.