ಬಾಂಗ್ಲಾದೇಶದ ಯುವತಿಯೊಬ್ಬಳ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯುದ್ದಕ್ಕೂ ಈಜಿಕೊಂಡು ಭಾರತವನ್ನು ತಲುಪಿದ್ದಾಳೆ

ನವದೆಹಲಿ (ಮೇ 31): 22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯುದ್ದಕ್ಕೂ ಈಜಿಕೊಂಡು ಭಾರತವನ್ನು ತಲುಪಿದ್ದಾಳೆ. ಯುವತಿ ಸುಂದರ್‌ಬನ್‌ನ ದಟ್ಟ ಕಾಡುಗಳ ಮೂಲಕ ಧೈರ್ಯದಿಂದ ಸಾಗಿ ಸುಮಾರು ಒಂದು ಗಂಟೆ ಈಜಿ ತನ್ನ ಪ್ರೀಯತಮನೊಂದಿಗೆ ಒಂದಾಗಲು ಭಾರತವನ್ನು ಪ್ರವೇಶಿಸಿದ್ದಾಳೆ. ಬಾಂಗ್ಲಾದೇಶದ ಮಹಿಳೆಯನ್ನು ಕೃಷ್ಣ ಮಂಡಲ್ ಎಂದು ಗುರುತಿಸಲಾಗಿದ್ದು, ಅಭಿಕ್ ಮಂಡಲ್ ಅವರನ್ನು ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಆಕೆ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಳು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೃಷ್ಣ ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ಸ್‌ಗೆ ಮೊದಲು ಪ್ರವೇಶಿಸಿ, ನಂತರ ಅವಳು ತನ್ನ ಗಮ್ಯಸ್ಥಾನವನ್ನು ತಲುಪಲು ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಮುಂದಾಗಿದ್ದೇನು?: ಮೂರು ದಿನಗಳ ಹಿಂದೆ, ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರನ್ನು ವಿವಾಹವಾದರು. ಆದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು. ಕೃಷ್ಣ ಅವರನ್ನು ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿಪುಟ್ಟ ಕಂದನ ಬೆನ್ನಿಗೆ ಕಟ್ಟಿ ಕಸಗುಡಿಸುವ ಮಹಿಳೆ, ತಾಯಿ ಸ್ವಾವಲಂಬಿ ಬದುಕಿಗೆ ಜನರ ಸಲಾಂ!

ಈ ವರ್ಷದ ಆರಂಭದಲ್ಲಿ, ಬಾಂಗ್ಲಾದೇಶದ ಹದಿಹರೆಯದ ಯುವಕನೊಬ್ಬ ಭಾರತದಿಂದ ಚಾಕೊಲೇಟ್ ಖರೀದಿಸಲು ಗಡಿಯುದ್ದಕ್ಕೂ ಈಜಿ ಬಂದಿದ್ದ ಘಟನೆ ವರದಿಯಾಗಿತ್ತು. ಎಮಾನ್ ಹೊಸೈನ್ ಎಂಬ ಯುವಕ ಸಣ್ಣ ನದಿಯನ್ನು ದಾಟಿ ತನ್ನ ನೆಚ್ಚಿನ ಚಾಕೊಲೇಟ್ ಬಾರ್ ಪಡೆಯಲು ಬೇಲಿಯಲ್ಲಿದ್ದ ರಂಧ್ರದ ಮೂಲಕ ಭಾರತದ ಗಡಿಯನ್ನು ದಾಟಿದ್ದ. ಬಳಿಕ ಎಮಾನ್ ಹೊಸೈನ್‌ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿತ್ತು, ನಂತರ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಯುವಕನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.