ಹಿಂದೂ ಸಂತ ಚಿನ್ಮೋಯ್ ಕೃಷ್ಣ ದಾಸ್‌ಗೆ ಶಾಕ್ ನೀಡಿದ ಬಾಂಗ್ಲಾದೇಶ ಕೋರ್ಟ್; ಜಾಮೀನು ಅರ್ಜಿ ತಿರಸ್ಕೃತ, ಮುಂದೇನು?
Chinmoy Krishna Das ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿಯನ್ನು ಬಾಂಗ್ಲಾದೇಶ ನ್ಯಾಯಾಲಯ ತಿರಸ್ಕರಿಸಿದೆ. ಚಿತ್ತಗಾಂಗ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ದೆಹಲಿ (ಜ.2): ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿರುವ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶ ನ್ಯಾಯಾಲಯ ಶಾಕ್ ನೀಡಿದೆ.
ದೇಶದ್ರೋಹದ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಚಿನ್ಮೋಯ್ ಕೃಷ್ಣ ದಾಸ್ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆಯೇ ಇಂದು ಬಿಗಿ ಭದ್ರತೆಯ ನಡುವೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಚಿತ್ತಗಾಂಗ್ ಕೋರ್ಟ್ ನಲ್ಲಿ ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾದೀಶರು,ಚಿನ್ಮೋಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರು:
ಬೆಳಗ್ಗೆ 11:40ರ ಸುಮಾರಿಗೆ ಸುಪ್ರೀಂ ಕೋರ್ಟ್‌ನ 11 ವಕೀಲರು, ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಯ ನೇತೃತ್ವದಲ್ಲಿ ಎರಡು ಮಿನಿ ಬಸ್‌ಗಳಲ್ಲಿ ಪೊಲೀಸ್ ರಕ್ಷಣೆಯಲ್ಲಿ ನ್ಯಾಯಾಲಯದ ಆವರಣದಿಂದ ಹೊರಟರು. ಇದಕ್ಕೂ ಮೊದಲು ಡಿಸೆಂಬರ್ 3, 2024 ರಂದು, ಚಿತ್ತಗಾಂಗ್ ನ್ಯಾಯಾಲಯವು ಜಾಮೀನು ವಿಚಾರಣೆಗೆ ಜನವರಿ 2, 2025 ರಂದು ನಿಗದಿಪಡಿಸಿತ್ತು. ಆದರೆ ಅರ್ಜಿಯನ್ನು ನ್ಯಾಯವಾದಿ ಅಧಿಕಾರದ ಕೊರತೆ ಮತ್ತು ವಕೀಲರ ಉಪಸ್ಥಿತಿಯ ಕೊರತೆಯಿಂದಾಗಿ ತಿರಸ್ಕರಿಸಲಾಗಿತ್ತು.
ಬಾಂಗ್ಲಾ ಹಿಂದೂಗಳ ಮೇಲೆ ದಾಳಿ ಬೆನ್ನಲ್ಲೇ ಭಾರತದಲ್ಲೂ ಹಿಂದೂ ನಾಯಕರ ಮುಗಿಸಲು ಉಗ್ರರ ಸಂಚು!
ಬಾಂಗ್ಲಾದೇಶದ ಧ್ವಜಕ್ಕೆ ಅವಮಾನ ಮಾಡಿದ ಆರೋಪ ಕೇಳಿಬಂದು ಅವರ ಬಂಧನಕ್ಕೆ ಬಾಂಗ್ಲಾದೇಶದಲ್ಲಿ ನಿರಂತರ ಪ್ರತಿಭಟನೆಗಳು ನಡೆದವು. ಬಳಿಕ ದೇಶದ್ರೋಹದ ಕೇಸ್ ದಾಖಲಿಸಿ ಹಿಂದೂ ಸಂತ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ನವೆಂಬರ್ 25 ರಂದು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಆದರೆ ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ (BHBCOP) ಚಿನ್ಮಯ್ ದಾಸ್ ವಿರುದ್ಧ 29 ಡಿಸೆಂಬರ್ 2024 ರಂದು ದಾಖಲಿಸಲಾದ ಪ್ರಕರಣವನ್ನು ಸುಳ್ಳು, ಕಿರುಕುಳ ನೀಡುವ ಉದ್ದೇಶದಿಂದ ಚಿನ್ಮಯ್ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.