ನವದೆಹಲಿ[ಜ.29]: ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸೈನಾಗೆ ಪಕ್ಷದ ಸದಸ್ಯತ್ವ ನೀಡಲಾಗಿದ್ದು,. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಸೈನಾ ಬಿಜೆಪಿ ಪಕ್ಷಕ್ಕೆ ಎಂಟ್ರಿ ನೀಡಿದ್ದಾರೆ.

"

29 ವರ್ಷದ ಹರ್ಯಾಣ ಮೂಲದ ಸೈನಾ ನೆಹ್ವಾಲ್‌ ಕಮಲ ಪಾಳಯ ಸೇರ್ಪಡೆಗೊಂಡರೆ, ಬಿಜೆಪಿಗೆ ಮತ್ತಷ್ಟು ಶಕ್ತಿ ಸಿಗಲಿದೆ.

ಇತ್ತೀಚೆಗಷ್ಟೇ ಮತ್ತೊಬ್ಬ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್‌ರನ್ನು ವಿವಾಹವಾಗಿದ್ದ ಸೈನಾ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿರುವ ಸೈನಾ, ಪ್ರೋ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಿಂದಲೂ ಹೊರಗುಳಿದಿದ್ದಾರೆ. 

ಬಾಲಿವುಡ್ ಹಾಡಿನ ಮೂಲಕ ಸೈನಾಗೆ ಅಚ್ಚರಿ ನೀಡಿದ ಪಾರುಪಳ್ಳಿ ಕಶ್ಯಪ್!

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಕ್ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿ ಸೈನಾಗೆ ಸಲ್ಲಿತ್ತು.

ಸೈನಾ ನೆಹ್ವಾಲ್ ಗೂ ಮುನ್ನ ರೆಸ್ಲರ್ ಯೋಗೇಶ್ವರ್ ದತ್ತಾ ಹಾಗೂ ಬಬಿತಾ ಪೋಗಾಟ್ ಕೂಡಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.