Admission Denied ಆಧಾರ್ ಕಾರ್ಡ್‌ನಲ್ಲಿ ವಿಚಿತ್ರ ಹೆಸರು, ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ!
- ಆಧಾರ್ ಕಾರ್ಡ್ ಅಧಿಕಾರಿಗಳ ಎಡವಟ್ಟು ವಿಚಿತ್ರ ಹೆಸರು ದಾಖಲು
- ಬಾಲಕಿಗೆ ಶಾಲಾ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ
- ಜಿಲ್ಲಾಧಿಕಾರಿ ಮಧ್ಯಪ್ರವೇಶ, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ
ರಾಯ್‌ಪುರ್(ಏ.04): ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಲ್ಲಿ ಹೆಸರು, ಅಕ್ಷರಗಳು, ನಂಬರ್ ತಪ್ಪಾಗಿ ದಾಖಲಾಗುವುದು ಹೊಸದೇನಲ್ಲ. ಸ್ಪೆಲ್ಲಿಂಗ್ ಬಿಟ್ಟು ಹೋಗಿದೆ, ಹೆಚ್ಚಾಗಿದೆ. ತಪ್ಪಾಗಿದೆ ಅನ್ನೋ ದೂರುಗಳು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಜಾಗದಲ್ಲಿ ಮಧು ಅವರ 5ನೇ ಮಗು ಎಂದು ನಮೂದಿಸಲಾಗಿದೆ. ಈ ಕಾರಣದಿಂದ ಬಾಲಕಿಗೆ ಶಾಲಾ ಪ್ರವೇಶವೂ ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆಧಾರ್ ಕಾರ್ಡ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅತೀ ದೊಡ್ಡ ಪ್ರಮಾದವೇ ನಡೆದು ಹೋಗಿದೆ. ಬದೌನ್ ಜಿಲ್ಲೆಯ ರಾಯ್‌ಪುರ ಗ್ರಾಮದ ದಿನೇಶ್ ತಮ್ಮ ಮಗಳನ್ನು ಶಾಲೆಗೆ ಸೇರಿಸಲು ಮುಂದಾದಾಗ ಈ ಘಟನ ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ಮಾಡಿಸಬೇಕು ಎಂಬ ಸೂಚನೆ ಮೇರೆಗೆ ದಿನೇಶ್ ಮಗಳಿಗೆ ಕೆಲ ತಿಂಗಳ ಹಿಂದೆ ಕಾರ್ಡ್ ಮಾಡಿಸಿದ್ದಾರೆ.
PAN-Aadhaar Linking:ಇಂದೇ ಕೊನೇ ದಿನ: ತಡಮಾಡಿದರೆ ದಂಡ, ಲಿಂಕ್ ಮಾಡೋದು ಬಲು ಸುಲಭ!
ಈ ಕಾರ್ಡ್‌ನಲ್ಲಿರುವ ದಾಖಲಾತಿಗಳು ಸರಿಯಾಗಿದೆಯಾ ಎಂದು ನೋಡಲು ಅಥವಾ ಪರಿಶೀಲಿಸಿಲ್ಲ. ಕೂಲಿ ಕೆಲಸ ಮಾಡುವ ಪೋಷಕರಿಗೆ ಇದರ ಅರಿವು ಇಲ್ಲ. ಆಧಾರ ಕಾರ್ಡ್ ಹಿಡಿದು ಶಾಲೆಗೆ ಮಗಳನ್ನು ಸೇರಿಸಲು ಹೋದ ದಿನೇಶ್‌ಗೆ ಆಘಾತ ಕಾದಿತ್ತು. ಮಗಳು ಆರತಿಯ ಹೆಸರನ್ನು ಆಧಾರ್ ಕಾರ್ಡ್‌ನಲ್ಲಿ ಮಧು ಅವರ 5ನೇ ಮಗು( ಮಧು ಕಾ ಪಾಂಚ್ವಾ ಬಚ್ಚಾ) ಎಂದು ಹಿಂದಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಧಾರ್ ಕಾರ್ಡ್ ನಂಬರ್ ಕೂಡ ಸರಿಯಾಗಿಲ್ಲ.
ಹೀಗಾಗಿ ಶಾಲಾ ಶಿಕ್ಷಕಿ ಎಕ್ತಾ ವರ್ಶ್ನೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ಮೊದಲು ಆಧಾರ್ ಕಾರ್ಡ್ ಸರಿ ಮಾಡಿಸಿಕೊಂಡು ಬನ್ನಿ ಎಂದು ಮರಳಿ ಕಳುಹಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಆಧಾರ್ ಕಾರ್ಡ್ ಫೋಟೋ ವೈರಲ್ ಆಗಿದೆ.
Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್
ವಿಚಾರ ಜಿಲ್ಲಾಧಿಕಾರಿ ದೀಪಾ ರಂಜನ್ ಗಮನಿಸಿದ್ದಾರೆ. ತಕ್ಷಣವೇ ಆಧಾರ್ ಕಾರ್ಡ್ ಸರಿಪಡಿಸಿ ಕೊಡಲು ಸೂಚಿಸಿದ್ದಾರೆ. ಬಳಿಕ ಶಾಲೆ ಜೊತೆಗೂ ಮಾತನಾಡಿರುವ ಜಿಲ್ಲಾಧಿಕಾರಿ ಆಧಾರ್ ಕಾರ್ಡ್ ಸರಿಪಡಿಸಿದ ಬೆನ್ನಲ್ಲೇ ಶಾಲೆಗೆ ದಾಖಲಾತಿ ಮಾಡುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಇದು ನಿರ್ಲಕ್ಷ್ಯದ ಪರಮಾವಧಿ. ಹೀಗಾಗಿ ಪ್ರಮಾದ ಎಸಗಿದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. ಏನೂ ಅರಿಯದ ಪುಟ್ಟ ಬಾಲಕಿ ಹಾಗೂ ಪೋಷಕರು ಶಾಲಾ ದಾಖಲಾತಿಗೆ ಇದೀಗ ಪರದಾಡುವ ಪರಿಸ್ಥಿತಿ ಎದುರಾಗಿದೆ.
ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಕೇಂದ್ರ ಚಿಂತನೆ
ನಕಲಿ ಮತದಾನ ತಪ್ಪಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಆನ್‌ಲೈನ್ ಮತದಾನ ಸೌಲಭ್ಯ ಕಲ್ಪಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.‘ಚುನಾವಣಾ ಅಕ್ರಮ ಅತ್ಯಂತ ಗಂಭೀರ ವಿಚಾರ. ಮತದಾನದಲ್ಲಿ ಅಕ್ರಮಗಳನ್ನು ತಡೆಯುವುದಕ್ಕೆ ಕೇಂದ್ರ ಸರ್ಕಾರ ಕಾನೂನು ಸಚಿವರ ಮಟ್ಟದಲ್ಲಿ ಚಿಂತನೆ ನಡೆಸುತ್ತಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಒಂದು ಆಯ್ಕೆ. ಸದ್ಯ ವೋಟರ್ ಐಡಿಗೆ ಆಧಾರ್ ಜೋಡಿಸುವುದು ಸ್ವಯಂಪ್ರೇರಿತವಾಗಿದೆ. ನಮ್ಮ ಗುರಿ ಇರುವುದು ‘ಒಂದು ದೇಶ, ಒಂದು ಮತದಾರರ ಗುರುತಿನ ಚೀಟಿ’ ಎಂಬುದನ್ನು ಸಾಧ್ಯವಾಗಿಸುವ ಬಗ್ಗೆ. ಹೀಗೆ ಮಾಡುವುದರಿಂದ ಮತದಾರರ ಪಟ್ಟಿಯಲ್ಲಿ ಎರಡು-ಮೂರು ಕಡೆ ಹೆಸರು ಹೊಂದಿ ನಕಲಿ ಮತದಾನ ಮಾಡುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.