ಅಲೋಪತಿ ಬಗ್ಗೆ ಅಪಪ್ರಚಾರ ಮಾಡಿಲ್ಲ, ಕೋರ್ಟಿಗೆ ಪತಂಜಲಿ ಉತ್ಪನ್ನ ಬಗ್ಗೆ ಸ್ಪಷ್ಟನೆ ನೀಡುವೆ: ರಾಮದೇವ್
ಕೋರ್ಟಿಗೆ ಪತಂಜಲಿ ಉತ್ಪನ್ನ ಬಗ್ಗೆ ಸ್ಪಷ್ಟನೆ ನೀಡುವೆ: ರಾಮದೇವ್- ಅಲೋಪತಿ ವಿರುದ್ಧ ಪ್ರಚಾರ ಮಾಡಿಲ್ಲ ಎಂದು ಬಾಬಾ ಸ್ಪಷ್ಟನೆ- ಅಯುರ್ವೇದದ ಬಗ್ಗೇ ಅಪಪ್ರಚಾರ.
ನವದೆಹಲಿ (ನ.24): ನಾವು ಅಲೋಪತಿ ವಿರುದ್ಧ ಪ್ರಚಾರ ಮಾಡಿಲ್ಲ. ಪತಂಜಲಿ ಆಯುರ್ವೇದ ಸಂಸ್ಥೆಯ ವಿರುದ್ಧ ಪಿತೂರಿ ನಡೆಸಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ಸುಪ್ರೀಂ ಕೋರ್ಟಿಗೆ ಸ್ಪಷ್ಟನೆ ನೀಡುತ್ತೇವೆ ಎಂದು ಸಂಸ್ಥೆಯ ಸ್ಥಾಪಕರಾದ ಯೋಗಗುರು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ.
ಅಲೋಪತಿ ಬಗ್ಗೆ ಪತಂಜಲಿ ಆಯುರ್ವೇದ ಉತ್ಪನ್ನಗಳು ಅಪಪ್ರಚಾರ ನಿಲ್ಲಿಸದಿದ್ದರೆ 1 ಕೋಟಿ ರು. ದಂಡ ಹಾಕಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆಯ ಮುಖ್ಯಸ್ಥರಾದ ಆಚಾರ್ಯ ಬಾಲಕೃಷ್ಣ ಜೊತೆ ಪತ್ರಕರ್ತರೊಂದಿಗೆ ಮಾತನಾಡಿದ ಬಾಬಾ, ‘ನಾವು ಯಾರ ವಿರುದ್ಧವೂ ಅಪಪ್ರಚಾರ ಮಾಡಿಲ್ಲ. ಬದಲಾಗಿ ನಮ್ಮ ಮೇಲೆಯೇ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಜಾಹೀರಾತುಗಳು ಸತ್ಯಾಂಶವನ್ನು ಹೊಂದಿದ್ದು, ಇದಕ್ಕೆ ಸೂಕ್ತ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ. ಅವರ ಬಳಿ ಹಣ ಮತ್ತು ಸಂಖ್ಯಾಬಲವಿದ್ದರೆ ನಮ್ಮ ಬಳಿ ಗಿಡಮೂಲಿಕೆ ಮತ್ತು ಋಷಿಮುನಿಗಳ ಸೂತ್ರಗಳ ಬಲವಿದೆ’ ಎಂದರು.
ಪತಂಜಲಿ ಉತ್ಪನ್ನಗಳಿಗೆ ತಲಾ 1 ಕೋಟಿ ದಂಡ: ಸುಪ್ರೀಂ ಎಚ್ಚರಿಕೆ
ಸಂಸ್ಥೆಯ ಮುಖ್ಯಸ್ಥರಾದ ಆಚಾರ್ಯ ಬಾಲಕೃಷ್ಣ ಮಾತನಾಡಿ, ‘ನಮ್ಮ ಉತ್ಪನ್ನಗಳನ್ನು ಗಿಡಮೂಲಿಕೆಗಳಿಂದ ಮಾಡಲಾಗುತ್ತದೆ. ಅಲೋಪತಿಯವರ ಔಷಧಿಗಳನ್ನು ನಾವು ಗೌರವಿಸುತ್ತೇವೆ. ಹಾಗೆಯೇ ನಮ್ಮ ಔಷಧಿಗಳನ್ನೂ ಅವರು ಗೌರವಿಸಬೇಕೆಂದು ಬಯಸುತ್ತೇವೆ. ತಮ್ಮ ಉತ್ಪನ್ನಗಳ ಜಾಹೀರಾತುಗಳಲ್ಲಿರುವುದು ಸತ್ಯಾಂಶ ಮಾತ್ರವೇ ಆಗಿದ್ದು, ಅದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ’ ಎಂದರು.
ಅಂಬಾನಿ, ಟಾಟಾ ಸೇರಿ ಯಾವ ಬಿಲಿಯನೇರ್ ಬಳಿಯೂ ಇಲ್ಲದ ಭಾರತದ ಅತ್ಯಂತ ದುಬಾರಿ ಕಾರು ಹೊಂದಿರುವ ಬೆಂಗಳೂರಿಗ
ಪತಂಜಲಿ ಉತ್ಪನ್ನವು ಕೆಲವು ರೋಗಗಳನ್ನು ನಿವಾರಿಸುತ್ತದೆ ಎಂದು ಸುಳ್ಳು ಜಾಹೀರಾತು ಕೊಡುವುದನ್ನು ನಿಲ್ಲಿಸದಿದ್ದರೆ ಮತ್ತು ಅಲೋಪತಿ ವಿರುದ್ಧ ಅಪಪ್ರಚಾರ ಮಾಡುವುದನ್ನು ಕೈಬಿಡದಿದ್ದರೆ 1 ಕೋಟಿ ರು. ದಂಡ ಹಾಕುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು.