Asianet Suvarna News

‘ಬಾಬಾ ಕಾ ಢಾಬಾ’ ವೃದ್ಧನ ಆತ್ಮ​ಹ​ತ್ಯೆ ಯತ್ನ!

* ‘ಬಾಬಾ ಕಾ ಢಾಬಾ’ ವೃದ್ಧನ ಆತ್ಮ​ಹ​ತ್ಯೆ ಯತ್ನ

* ಆರ್ಥಿಕ ಸಂಕ​ಷ್ಟ​ದಿಂದಾಗಿ ಆತ್ಮ​ಹ​ತ್ಯೆಗೆ ಯತ್ನ ಸಾಧ್ಯ​ತೆ

* ರೆಸ್ಟೋ​ರೆಂಟ್‌ ಉದ್ಯ​ಮ​ದಿಂದ ದಂಪ​ತಿಗೆ ಭಾರೀ ನಷ್ಟ

Baba ka Dhaba owner attempts to kill himself pod
Author
Bangalore, First Published Jun 19, 2021, 11:49 AM IST
  • Facebook
  • Twitter
  • Whatsapp

 

ನವ​ದೆ​ಹ​ಲಿ(ಜೂ.19): ‘ಬಾಬಾ ಕಾ ಢಾಬಾ’ ಖ್ಯಾತಿಯ ಅಂಗ​ಡಿಯ ಮಾಲೀಕ ಕಾಂತಾ ಪ್ರಸಾದ್‌ (81) ಅವರು ಗುರು​ವಾರ ತಡ​ರಾತ್ರಿ ಆತ್ಮ​ಹ​ತ್ಯೆಗೆ ಯತ್ನಿ​ಸಿ​ರುವ ಘಟನೆ ನಡೆ​ದಿದೆ. ಸದ್ಯ ಅವ​ರು ಸಫ್ದರ್‌ ಜಂಗ್‌ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಕಾಂತಾ​ಪ್ರ​ಸಾದ್‌ ಅವರು ಮದ್ಯದ ಜೊತೆಗೆ ಭಾರೀ ಪ್ರಮಾ​ಣದ ನಿದ್ದೆಯ ಮಾತ್ರೆ​ಗ​ಳನ್ನು ಸೇವಿ​ಸಿ​ದ್ದರು. ಇದ​ರಿಂದ ಅಸ್ವ​ಸ್ಥರಾದ ಅವ​ರನ್ನು ಸಫ್ದರ್‌ ಜಂಗ್‌ ಆಸ್ಪ​ತ್ರೆಗೆ ಕರೆ​ತ​ರ​ಲಾಗಿದೆ.

ಕಳೆದ ವರ್ಷ ಸಹಾ​ಯದ ರೂಪ​ದಲ್ಲಿ ಹರಿ​ದು​ಬಂದ ಹಣ​ದೊಂದಿಗೆ ಕಾಂತಾ ಪ್ರಸಾದ್‌ ದಂಪ​ತಿ ದೆಹ​ಲಿ​ಯಲ್ಲಿ ಹೊಸ ರೆಸ್ಟೋ​ರೆಂಟ್‌ ಆರಂಭಿ​ಸಿದ್ದರು. ಮೊದ​ಲಿಗೆ ವ್ಯಾಪಾರ ಚೆನ್ನಾ​ಗಿಯೇ ನಡೆ​ಯು​ತ್ತಿತ್ತು. ಆದರೆ 2ನೇ ಅಲೆಯ ಸೋಂಕು ನಿಯಂತ್ರ​ಣ​ಕ್ಕಾಗಿ ಹೇರ​ಲಾದ ಲಾಕ್‌​ಡೌನ್‌ ರೀತಿಯ ಕ್ರಮ​ಗ​ಳಿಂದ ರೆಸ್ಟೋ​ರೆಂಟ್‌ ವಹಿ​ವಾಟು ಭಾರೀ ಕುಸಿ​ದಿತ್ತು. ಇದ​ರಿಂದಾಗಿ ಮಾಸಿಕ 30 ಸಾವಿರ ರು. ಮಾತ್ರವೇ ವ್ಯಾಪಾ​ರ​ವಾ​ಗು​ತ್ತಿತ್ತು.

ಆದರೆ ಈ ರೆಸ್ಟೋ​ರೆಂಟ್‌ನ ಬಾಡಿ​ಗೆಯೇ 1 ಲಕ್ಷ ರು. ಇತ್ತು. ಹೀಗಾಗಿ ಕಾಂತಾ​ಪ್ರ​ಸಾದ್‌ ದಂಪತಿ ತಮ್ಮ ರೆಸ್ಟೋ​ರೆಂಟ್‌ ಉದ್ಯ​ಮಕ್ಕೆ ತಿಲಾಂಜಲಿ ಹೇಳಿ, ಪುಟ್ಟಪಟ್ಟಿಅಂಗ​ಡಿ​ಯಲ್ಲೇ ಹೋಟೆಲ್‌ ಉದ್ಯಮ ಆರಂಭಿ​ಸಿ​ದ್ದ​ರು. ಆರ್ಥಿಕ ಸಂಕ​ಷ್ಟ​ದಿಂದಾಗಿ ಕಾಂತಾ ಪ್ರಸಾದ್‌ ಆತ್ಮ​ಹ​ತ್ಯೆ ಯತ್ನಿ​ಸಿ​ರ​ಬ​ಬ​ಹುದು ಎನ್ನ​ಲಾ​ಗಿದೆ.

Follow Us:
Download App:
  • android
  • ios