ನವದೆಹಲಿ(ಏ.21): ಕೊರೋನಾ ಪೀಡಿತ ದೇಶದ ಕೋಟ್ಯಂತರ ಜನರಿಗೆ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್‌ ಭಾರತ್‌’ನ ದೆಹಲಿ ಕಚೇರಿಗೆ ಬೀಗ ಜಡಿಯಲಾಗಿದೆ.

ಕಚೇರಿಯ ಅಧಿಕಾರಿಯೊಬ್ಬರಿಗೆ ಕೋವಿಡ್‌-19 ಸೋಂಕು ದೃಢ ಪಟ್ಟಿರುವುದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ 25 ಮಂದಿ ಕೆಲಸಗಾರರನ್ನು ಕ್ವಾರಂಟೈನ್‌ಗೆ ಒಳ ಪಡಿಸಲಾಗಿದೆ.

ಆಯುಷ್ಮಾನ್‌ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!

ದೆಹಲಿಯ ಕನ್ಹಾಟ್‌ಪ್ಲೇಸ್‌ನ ಜೀವನ್‌ ಭಾರತಿ ಕಟ್ಟಡಲ್ಲಿರುವ ಕಚೇರಿ ಕಚೇರಿಗೆ ಆರು ದಿನಗಳ ಹಿಂದೆಯೇ ಬೀಗ ಜಡಿಯಲಾಗಿದ್ದು, ಏ.24ರ ವರೆಗೆ ಕಚೇರಿ ಮುಚ್ಚಿರಲಿದೆ ಎಂದು ಆಯುಷ್ಮಾನ್‌ ಭಾರತ್‌ ಸಿಇಒ ಇಂದೂ ಭೂಷಣ್‌ ಹೇಳಿದ್ದಾರೆ.