ಅಯೋಧ್ಯೆ ತೀರ್ಪಿಗೆ ಎಎಸ್ಐ ಉತ್ಖನನವೇ ಪ್ರಮುಖ ಆಧಾರ

ಅಲಹಾಬಾದ್ ಹೈಕೋರ್ಟ್ ಸೂಚನೆ ಮೇರೆಗೆ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ 1977, 2003 ರಲ್ಲಿ ಉತ್ಖನನ ಹಿಂದೂ ಕಟ್ಟಡದ ರಚನೆಮಾಹಿತಿ ಕೊಟ್ಟಿದ್ದ ಎಎಸ್‌ಐ| ಆದರೆ ಮಂದಿರ ಕೆಡವಿ ಮಸೀದಿ ನಿರ್ಮಿಸಿದ್ದಕ್ಕೆ ಸಾಕ್ಷಿ ಇಲ್ಲ,  ಕೋರ್ಟ್ 

Ayodhya Verdict Supreme court judgement basis of ASI report

ನವದೆಹಲಿ (ನ. 10): ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯವು, ಇದಕ್ಕಾಗಿ ಈ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ್ದ ಉತ್ಖನನದ ವರದಿಯನ್ನೇ ಪ್ರಮುಖವಾಗಿ ಪರಿಗಣಿಸಿದೆ. ‘ಬಾಬ್ರಿ ಮಸೀದಿಯು ಖಾಲಿ ಜಮೀನಿನಲ್ಲಿ ನಿರ್ಮಾಣವಾದದ್ದಲ್ಲ. 

ವಿವಾದಿತ ಸ್ಥಳ ರಾಮಮಂದಿರಕ್ಕೆ ಸಿಕ್ಕಿದ್ದು ಹೇಗೆ?

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ನಡೆಸಿದ ಉತ್ಖನನದ ವೇಳೆ ಆ ಸ್ಥಳದಲ್ಲಿ ಹಿಂದೂ ಕಟ್ಟಡ ಸಂರಚನೆ ಲಭಿಸಿತ್ತು’ ಎಂದು ಕೋರ್ಟ್ ಹೇಳಿದೆ. ‘ಎಸ್‌ಎಐ ನಡೆಸಿದ ಉತ್ಖನನದ ವೇಳೆ ಅಲ್ಲಿ ಹಿಂದೂ ಕಟ್ಟಡವೊಂದು ಇದ್ದರ ಕುರುಹು ಲಭ್ಯವಾಯಿತು.

1856 ರ ಮುನ್ನ ಈ ಸ್ಥಳದ ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹಿಂದೂಗಳಿಗೆ ಕಟ್ಟಡದ (ಬಾಬ್ರಿ ಮಸೀದಿ) ಒಳಗೆ ಯಾವಾಗ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಲಿಲ್ಲವೋ ಆಗ ಅವರು ಅದರ ಹೊರಗಡೆ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದರು’ ಎಂದು ನ್ಯಾಯಪೀಠ ನುಡಿದಿದೆ.

ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?

ಆದರೆ ಇದೇ ವೇಳೆ, ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂಬುದಕ್ಕೂ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ನ್ಯಾ| ರಂಜನ್ ಗೊಗೋಯ್ ಅವರ ನೇತೃತ್ವದ ಪೀಠ ಹೇಳಿದೆ. 2 ಬಾರಿ ಎಎಸ್‌ಐ ಉತ್ಖನನ: ಎಎಸ್‌ಐ ಅಲಹಾಬಾದ್ ಹೈಕೋರ್ಟ್ ಆದೇಶದ ಮೇಲೆ ಅಯೋಧ್ಯೆಯ ವಿವಾದಿತ ಭೂಮಿಯ ಉತ್ಖನನ ನಡೆಸಿತ್ತು. ೨ ಬಾರಿ (೧೯೭೬-೭೭ ಹಾಗೂ ೨೦೦೩) ಉತ್ಖನನ ನಡೆದಿತ್ತು.


 

Latest Videos
Follow Us:
Download App:
  • android
  • ios