Interview

(Search results - 561)

Yash Sister

Interviews2, Aug 2020, 7:55 PM

'ಈ ಸಲ ನನಗೆ ಸ್ಪೆಷಲ್ ರಕ್ಷಾ ಬಂಧನ' ಅಣ್ಣನ ಗುಟ್ಟು ಹೇಳಿದ ಯಶ್ ತಂಗಿ!

ಭಾರತದಲ್ಲಿ ಸಿನಿಮಾ ಸ್ಟಾರ್ ಎಂದರೆ ತನ್ನ ಚಿತ್ರದಲ್ಲಿ ಸಂಬಂಧಗಳಿಗೆ ಬೆಲೆ ಕೊಡುವವನಾಗಿರಬೇಕು. ಆದರೆ ನಿಜ ಜೀವನದಲ್ಲಿ ಕಲಾವಿದರ ಮನೆಯೊಳಗಿನ ಸಂಬಂಧಗಳು ಹೇಗಿವೆ ಎನ್ನುವ ಬಗ್ಗೆ ಯಾರಿಗೂ ಅಂಥ ಕಾಳಜಿ ಇರುವುದಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅದಕ್ಕೊಂದು ಅಪವಾದ. ಅವರು ನಿಜ ಜೀವನಲ್ಲಿ ತನ್ನ ತಂಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರೆ ಅಣ್ಣ ತಂಗಿ ಸಂಬಂಧಕ್ಕೆ ಇವರೇ ಮಾದರಿ ಎನ್ನುವಂಥ ಜೋಡಿ ಅದು. ಅಂಥ ಅಣ್ಣನ ಅಕ್ಕರೆ, ಪ್ರೀತಿ, ಮಮತೆ, ಕಾಳಜಿಯ ಬಗ್ಗೆ ಸ್ವತಃ ಯಶ್ ತಂಗಿ ನಂದಿನಿಯವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ವಿಶೇಷ ಮಾಹಿತಿ ಇಲ್ಲಿದೆ. ಇದು ರಕ್ಷಾಬಂಧನದ ವಿಶೇಷ.

• sudharanigovardhan

Interviews29, Jul 2020, 5:51 PM

ಲಾಕ್ಡೌನ್ ಮೂಲಕ ಸುಧಾರಿಸಿದ್ದೇನು?: ಸುಧಾರಾಣಿ ಮಾತು

ಸುಧಾರಾಣಿಯವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ಮುಂದೆ ನಿಂತು ಅಲ್ಲಿನ ಚಿಕಿತ್ಸೆಯ ವಿಧಾನದ ಬಗ್ಗೆ ಸಿಡಿದಿದ್ದನ್ನು ಎಲ್ಲರೂ ನೋಡಿರುತ್ತೀರ. ಅನ್ಯಾಯ ಕಂಡಾಗ ಅದರ ವಿರುದ್ಧ ಗಟ್ಟಿ ಧ್ವನಿಯಾಗುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಆಕ್ಷನ್ ಪಾತ್ರಗಳನ್ನು ನಿಭಾಯಿಸದಿದ್ದರೂ ಅವರ ಪಾತ್ರಗಳಲ್ಲಿನ ಗಂಡುಬೀರಿ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅಂಥವರು ಲಾಕ್ಡೌನ್ ದಿನ ಮತ್ತು ನಟನಾರಂಗ ಮೌನವಾದ ಘಳಿಗೆಗಳನ್ನು ಹೇಗೆ ಕಾಣುತ್ತಿದ್ದಾರೆ ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರೊಂದಿಗೆ ಮಾತನಾಡಿದಾಗ ಸಿಕ್ಕ ಒಂದಷ್ಟು ಆಕರ್ಷಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ನೈಜ ಐಎಎಸ್ ಪಾತ್ರದಲ್ಲಿ ಮಗಳು ಜಾನಕಿಯ ನಿರಂಜನ್.

Interviews28, Jul 2020, 7:47 PM

'ಮಗಳು ಜಾನಕಿ'ಯ ನಿರಂಜನ್ ಇದೀಗ ನೈಜ IAS ಆಫೀಸರ್!?

`ಮಗಳು ಜಾನಕಿ' ಧಾರಾವಾಹಿ ನೋಡಿದವರಿಗೆ ರಾಕೇಶ್ ಮಯ್ಯ ಅವರು ನಿರಂಜನ್ ಆಗಿ ಪರಿಚಯವಿರುತ್ತಾರೆ. ಹಾಗೆ ಅದರಲ್ಲಿ ಫೇಕ್ ಐ.ಎ.ಎಸ್ ಸರ್ಟಿಫಿಕೇಟ್ ಇರಿಸಿಕೊಂಡು ನಾಯಕಿ ಜಾನಕಿಗೆ ವಂಚಿಸುವ ಪಾತ್ರದಲ್ಲಿ ರಾಕೇಶ್ ಮಯ್ಯ ನಟಿಸಿದ್ದರು. ಇದೀಗ ರಾಕೇಶ್ ಮಯ್ಯ ಹೊಸದೊಂದು ಧಾರಾವಾಹಿ ಒಪ್ಪಿಕೊಂಡಿದ್ದಾರೆ. ಅದರ ಹೆಸರು `ಸಂಘರ್ಷ'. ಅಂದಹಾಗೆ ಇದರಲ್ಲಿ ಇವರ ಪಾತ್ರಕ್ಕೆ ನಿಜವಾದ ಹೆಸರನ್ನೇ ಇಡಲಾಗಿದೆ. ಮಾತ್ರವಲ್ಲ ಒರಿಜಿನಲ್ ಐಎಎಸ್ ಎಂದು ಹೇಳಲಾಗಿದೆ. ಹಾಗಾಗಿ ಕೊನೆಗೂ ಒರಿಜಿನಲ್ ಐಎಎಸ್ ರಾಕೇಶ್ ಮಯ್ಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

Vidya balan

Video Icon

Cine World27, Jul 2020, 5:58 PM

ಶಕುಂತಲಾ ದೇವಿ ಚಿತ್ರದ ಬಗ್ಗೆ ರೋಚಕ ಸತ್ಯ ಬಿಚ್ಚಿಟ್ಟ ವಿದ್ಯಾ ಬಾಲನ್!

ಬಾಲಿವುಡ್‌ ಸುಂದರಿ ವಿದ್ಯಾ ಬಾಲನ್‌ ಬಹುನಿರೀಕ್ಷಿತ ಸಿನಿಮಾ 'ಶಕುಂತಲಾ ದೇವಿ' ಬಯೋಪಿಕ್‌ ಬಗ್ಗೆ ಏಷ್ಯನೆಟ್ ಜೊತೆ ಮಾತನಾಡಿದ್ದಾರೆ. ಚಿತ್ರದ ಕೆಲವೊಂದು ರೋಚಕ ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜುಲೈ 31ರಲ್ಲಿ ಓಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಈ ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Sumalatha Ambareesh

Interviews26, Jul 2020, 11:04 PM

ಕೊರೋನಾ ಹೋರಾಟ ಹೇಗೆ? ಸೋಂಕಿನಿಂದ ಗೆದ್ದು ಟಿಪ್ಸ್ ಕೊಟ್ಟ ಸುಮಲತಾ

ಸುಮಲತಾ ಈಗ ರಾಜಕಾರಣಿಯಾಗಿ ಜನಪ್ರಿಯೆ. ಆದರೆ ಸಿನಿಮಾರಂಗದಲ್ಲಿ ಇಂದಿಗೂ ಅವರ ಅಭಿಮಾನಿಗಳಿಗೆ ಕೊರತೆ ಇಲ್ಲ. ವಾರಗಳ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢವಾದಾಗ ಶೀಘ್ರ ಗುಣಮುಖಗೊಳ್ಳುವಂತೆ ಹಾರೈಸಿದವರಲ್ಲಿ ಅಂಬರೀಷ್ ಸಿನಿಮಾ ಅಭಿಮಾನಿಗಳೂ ಇದ್ದರು.

• BSY

Politics26, Jul 2020, 7:28 AM

ಸವಾಲು ಎದುರಿಸುವ ಶಕ್ತಿ ನನಗೆ ರಕ್ತಗತವಾಗಿ ಬಂದಿದೆ: ಬಿಎಸ್‌ವೈ

ಸವಾಲು ಎದುರಿಸುವುದು ನನಗೆ ರಕ್ತಗತವಾಗಿ ಬಂದಿದೆ: ಬಿಎಸ್‌ವೈ| ಸವಾಲು ಎದುರಿಸುವ ಮೂಲಕ ನಾನು ಇನ್ನಷ್ಟುಗಟ್ಟಿಯಾಗುತ್ತ ಹೋಗುತ್ತೇನೆ| ಇದರಿಂದ ಜನರ ಸಮಸ್ಯೆಗೆ ಸ್ಪಂದಿಸುವ ಉತ್ಸಾಹ ಹೆಚ್ಚುತ್ತಿದೆ: ಯಡಿಯೂರಪ್ಪ

Annamalai

Karnataka Districts24, Jul 2020, 3:51 PM

ಬೀದರ್‌: ಅಣ್ಣಾಮಲೈ ಜೊತೆಗೆ ಮಕ್ಕಳ ನೇರ ಸಂದರ್ಶನ

ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಂದು ಮಗು ಸಹ ತಮ್ಮ ದಿನನಿತ್ಯದ ಓದು-ಬರಹ ಅಭ್ಯಾಸದಲ್ಲಿ, ವಿಜ್ಞಾನ ಚಟುವಟಿಕೆಗಳಲ್ಲಿ ಹಿಂದುಳಿಯಬಾರದು ಎಂದು ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ.

Jobs

Private Jobs22, Jul 2020, 10:33 PM

ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್-ಇನ್-ಸಂದರ್ಶನ

ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ವಾಕ್-ಇನ್-ಸಂದರ್ಶನವನ್ನು ನಡೆಸುತ್ತಿದೆ. ಎಂ.ಬಿ.ಬಿ.ಎಸ್ ವೈದ್ಯರು, ದಂತವೈದ್ಯರು, ಆಯೂಷ್ ವೈದ್ಯರು ಸೇರಿದಂತೆ ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್ಸ್, ಆಶಾ ಕಾರ್ಯಕರ್ತರು ಮುಂತಾದ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಈ ಕೂಡಲೇ ಕೆಳಗೆ ನೀಡಿರುವ ಅರ್ಹತೆ ಹೊಂದಿದ್ದಲ್ಲಿ ನಿಮ್ಮ ಸ್ವವಿವರದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಿ.  ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

Shailashree Sudarshan

Interviews21, Jul 2020, 5:50 PM

ಸಿನಿಮಾ ನೆನಪಲ್ಲಿ `ಹನಿ'ಮಾ ಜೊತೆಗೆ ಶೈಲ ಶ್ರೀ ಸುದರ್ಶನ್..!

ಶೈಲ ಶ್ರೀಯವರು ಒಂದು ಕಾಲದಲ್ಲಿ ಡಾ.ರಾಜ್ ಕುಮಾರ್ ಜೋಡಿಯಾಗಿ ನಟಿಸಿದವರು. ನಿಜ ಬದುಕಿನಲ್ಲಿ ಆರ್ ಎನ್ ಸುದರ್ಶನ್ ಜತೆಗೆ ಅಪೂರ್ವ ಜೋಡಿಯೆನಿಸಿದವರು. ಒಮ್ಮೆ ಗಗನ ಸಖಿಯಾಗಿದ್ದವರು. ಬಳಿಕ ಸಿನಿಮಾ ನಾಯಕಿಯಾದರು. ಇವರು ಬರೆದ ಕತೆಯನ್ನು ಇರಿಸಿಕೊಂಡು ಸುದರ್ಶನ್ `ನಗುವ ಹೂವು' ಎನ್ನುವ ಚಿತ್ರವನ್ನು ನಿರ್ಮಿಸಿದ್ದರು. ಒಟ್ಟಿನಲ್ಲಿ ಸಿನಿಮಾ, ಧಾರಾವಾಹಿ ಎಂದು ಇತ್ತೀಚಿನ ವರ್ಷಗಳ ತನಕ ಪತಿಯೊಂದಿಗೆ ಸಕ್ರಿಯರಾಗಿದ್ದರು. ಮೂರು ವರ್ಷಗಳ ಹಿಂದೆ  ಸುದರ್ಶನ್ ನಿಧನವಾದ ಬಳಿಕ ಕೂಡ ಅವರಿಗೆ ಒಂಟಿತನ ಕಾಡದಂತೆ ಮಾಡಿರುವುದು ಕೂಡ ಬಣ್ಣದ ಲೋಕವೇ. ಜತೆಗೆ 'ಹನಿ' ಹೆಸರಿನ ಬೆಕ್ಕು ಕೂಡ ಆಪ್ತವಾಗಿದೆ. ಬದುಕಲ್ಲಿ ಕಂಡ ಬದಲಾವಣೆಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

• Interviews14, Jul 2020, 4:45 PM

ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

ಹಾಸ್ಯವೆಂದರೆ ನಗುಮುಖ, ಪೀಚಲು ದೇಹ ಎನ್ನುವ ಕಲ್ಪನೆಯನ್ನು ಕನ್ನಡದ ಮಟ್ಟಿಗೆ ಬದಲಾಯಿಸಿದ ಕೀರ್ತಿ ಸಂಪೂರ್ಣವಾಗಿ ಸೃಜನ್ ಲೋಕೇಶ್ ಅವರಿಗೆ ಸಲ್ಲುತ್ತದೆ. ಯಾಕೆಂದರೆ ಆರಡಿ ಮೀರಿದ ದೇಹ, ಸದೃಢ ಮೈಕಟ್ಟು, ಗಾಂಭೀರ್ಯತೆ ತುಂಬಿದ ಮುಖ ಇರಿಸಿಕೊಂಡು ಕೂಡ ಒಂದು ಗಂಟೆಯ ಕಾಲ ಹುಣ್ಣಾಗುವ ಮಟ್ಟಿಗೆ ನಗಿಸಬಲ್ಲೆನೆಂದು ತೋರಿಸಿಕೊಟ್ಟವರು ಸೃಜನ್. `ಮಜಾಟಾಕೀಸ್' ಎನ್ನುವ ರಿಯಾಲಿಟಿ ಶೋ ಮಾತ್ರವಲ್ಲ, ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ, ಅದರ ಮೂಲಕ ಸಿನಿಮಾಗಳನ್ನು ನಿರ್ಮಿಸಿ ನಾಯಕರಾಗಿಯೂ ಹೆಸರಾಗಿರುವ ಸೃಜನ್ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

SN Ragini chandran Prajwal devraj

Interviews13, Jul 2020, 8:49 AM

ಲಾ ಚಿತ್ರದಲ್ಲಿ ನಟಿಸಲು ಕತೆಯೇ ಕಾರಣ ಅಂತಾರೆ ಪ್ರಜ್ವಲ್‌ ಪತ್ನಿ ರಾಗಿಣಿ ಚಂದ್ರನ್!

ಕ್ಲಾಸಿಕಲ್‌ ಡ್ಯಾನ್ಸರ್‌ ರಾಗಿಣಿ ಚಂದ್ರನ್‌ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಜು.17ರಂದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಪ್ರೇಕ್ಷಕರಿಗೆ ತಮ್ಮ ಸಿನಿಮಾ ದರ್ಶನ್‌ ಕೊಡುತ್ತಿರುವ ಹಿನ್ನೆಲೆಯಲ್ಲಿ ರಾಗಿಣಿ ಚಂದ್ರನ್‌ ಮಾತನಾಡಿದ್ದಾರೆ.

SN shivarajkumar

Interviews10, Jul 2020, 9:01 AM

ಥ್ಯಾಂಕ್ಸ್‌ ಟು ಸುದೀಪ್, ಹುಟ್ಟಹಬ್ಬಕ್ಕೆ ನಾನು ಮನೇಲಿ ಇರಲ್ಲ: ಶಿವರಾಜ್‌ಕುಮಾರ್‌

ನಟ ಶಿವರಾಜ್‌ಕುಮಾರ್‌ ಅವರಿಗೆ 58ನೇ ಹುಟ್ಟು ಹಬ್ಬದ ಸಂಭ್ರಮ. ಪ್ರತಿ ವರ್ಷ ಜು.12 ಬಂದರೆ ಸೆಂಚುರಿ ಸ್ಟಾರ್‌ ಅಭಿಮಾನಿಗಳು ತಮ್ಮ ಮನ ಮೆಚ್ಚಿದ ನಟನ ಹುಟ್ಟು ಹಬ್ಬವನ್ನು ‘ಆನಂದ’ದಿಂದ ಕೊಂಡಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸಂಕಷ್ಟ. ಇದರಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮತ್ತು ಅಗತ್ಯ ಕೂಡ. ಹೀಗಾಗಿ ಹಿಂದಿನಂತೆ ಈ ವರ್ಷ ಶಿವಣ್ಣ ಅವರ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕೇಕ್‌ ಕತ್ತರಿಸಿ ಅದ್ದೂರಿಯಾಗಿ ಆಚರಿಸಲು ಆಗದು. ಹುಟ್ಟುಹಬ್ಬದ ಹೊತ್ತಿನಲ್ಲಿ ಶಿವಣ್ಣ ಅವರ ಈ ಸಂದರ್ಶನ.

SN m s sathyu Anant nag

Interviews10, Jul 2020, 8:40 AM

ನನ್ನ ಗುರು ನನ್ನ ಗೈಡ್‌ ನನ್ನ ಸತ್ಯು: ಅನಂತ್‌ನಾಗ್‌

ನಮ್ಮೊಡನಿದ್ದೂ ನಮ್ಮಂತಾಗದ ಧೀಮಂತ ನಿರ್ದೇಶಕ ಎಂ ಎಸ್ ಸತ್ಯು ಅವರಿಗೆ 90 ತುಂಬಿದ ಸಂದರ್ಭದಲ್ಲಿ ಅವರ ಜೊತೆ ಕಳೆದ ದಿನಗಳ ನೆನಪುಗಳನ್ನು ಅನಂತನಾಗ್ ಹಂಚಿಕೊಂಡಿದ್ದಾರೆ.

Sai pallavi

Video Icon

Cine World8, Jul 2020, 1:13 PM

ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹಜ ಸುಂದರಿ ಸಾಯಿ ಪಲ್ಲವಿಯನ್ನು ನಿರೂಪಕಿಯೊಬ್ಬರು ಮಲ್ಲು ಕುಟ್ಟಿ ಎಂದು ಪರಿಚಯಿಸಿದರಂತೆ. ಅದಕ್ಕೆ ಸಾಯಿ ಪಲ್ಲವಿ ಗರಂ ಆಗಿ ನಾನು ಮಲ್ಲು, ತಮಿಳು ಹುಡುಗಿ ಎಂದು ನಿರೂಪಕರಿಗೆ ತಿರುಗೇಟು ಕೊಟ್ರಂತೆ! ಹುಟ್ಟಿದ್ದು, ಬೆಳೆದಿದ್ದೆಲ್ಲಾ ತಮಿಳಲ್ಲಿ. ;ಪ್ರೇಮಂ' ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ತು. ಮಲಯಾಳಂಗೆ ಹೋದೆ. ಹಾಗಂದ ಮಾತ್ರಕ್ಕೆ ನಾನು ಮಲಯಾಳಿ ಆಗ್ತೀನಾ? ಎಂದು ರೇಗಿದರಂತೆ..! ನಿರೂಪಕರು ನಿಧಾನಕ್ಕೆ ಸುಧಾರಿಸಿಕೊಂಡ್ರಂತೆ.!