Asianet Suvarna News Asianet Suvarna News

ಬಂಗಲೆ ಕಳೆದುಕೊಂಡ ರಾಹುಲ್ ಗಾಂಧಿಯನ್ನು ಹನುಮಗಿರಿ ಆಶ್ರಮಕ್ಕೆ ಆಹ್ವಾನಿಸಿದ ಆಯೋಧ್ಯ ಶ್ರೀ!

ರಾಹುಲ್ ಗಾಂಧಿ ಅನರ್ಹಗೊಂಡ ಕಾರಣ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಭಾರತ ನಿಮ್ಮ ಮನೆ ಎಂಬ ಅಭಿಯಾನ ನಡೆಸಿತ್ತು. ಈ ಅಭಿಯಾನದ ಮೂಲಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ತಮ್ಮ ತಮ್ಮ ಮನೆಗೆ ಆಹ್ವಾನಿಸಿದ್ದರು. ಇದೀಗ ಆಯೋಧ್ಯೆಯ ಹನುಮಗಿರಿಯ ಮಹಾಂತ ಶ್ರೀ ರಾಹುಲ್ ಗಾಂಧಿಯನ್ನು ಆಶ್ರಮಕ್ಕೆ ಆಹ್ವಾನಿಸಿದ್ದಾರೆ.
 

Ayodhya seer Mahant Sanjay Das invite Rahul gandhi to Hanumagiri Ashram to reside ckm
Author
First Published Apr 4, 2023, 3:47 PM IST

ನವದೆಹಲಿ(ಏ.04): ಮೋದಿ ಸಮುದಾಯ ನಿಂದಿಸಿದ್ದಾರೆ ಅನ್ನೋ ಕಾರಣಕ್ಕೆ ಸೂರತ್ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ಕಾಲಿ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್, ಭಾರತ ನಿಮ್ಮ ಮನೆ ಎಂಬ ಅಭಿಯಾನ ನಡೆಸಿತ್ತು. ಈ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಮನೆಗೆ ರಾಹುಲ್ ಗಾಂಧಿಯನ್ನು ಅಹ್ವಾನಿಸಿದ್ದರು. ಇದೀಗ ಆಯೋಧ್ಯೆಯ ಹನುಮಗರಿಯ ಮಹಾಂತ ಸಂಜಯ್ ದಾಸ್ ಶ್ರೀಗಳು, ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದಾರೆ. ಹನುಮಗಿರಿ ಧಾಮಲ್ಲಿ ಹಲವು ಆಶ್ರಮಗಳಿವೆ. ಪವಿತ್ರ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಇರಬಹುದು ಎಂದು ಮಹಾಂತ ಶ್ರೀಗಳು ಆಹ್ವಾ ನೀಡಿದ್ದಾರೆ.

ರಾಹುಲ್ ಗಾಂಧಿಗೆ ನಾವು ಅತ್ಯಂತ ಪ್ರೀತಿಯಿಂದ ಅಹ್ವಾನ ನೀಡುತ್ತಿದ್ದೇವೆ. ರಾಹುಲ್ ಗಾಂಧಿ ಇಲ್ಲಿ ಬಂದು ನೆಲೆಸಬಹುದು. ಪವಿತ್ರ ಕ್ಷೇತ್ರದ ದರ್ಶನ ಮಾಡುವ ಸೌಭಾಗ್ಯವೂ ದೊರೆಯಲಿದೆ ಎಂದು ಮಹಾಂತ ಸಂಜಯ್ ದಾಸ್ ಹೇಳಿದ್ದಾರೆ. ಹನುಮಗಿರಿ ಧಾಮದಲ್ಲಿ ಹಲವು ಆಶ್ರಮಗಳಿವೆ. ಇಲ್ಲಿ ರಾಹುಲ್ ಗಾಂಧಿ ಇರಬಹುದು. ರಾಹುಲ್ ಗಾಂಧಿ ನಮ್ಮ ಆಶ್ರಮದಲ್ಲಿ ನೆಲೆಸವುದು ನಮಗೆ ಸಂತಸದ ವಿಚಾರ ಎಂದು ಮಹಾಂತ ಸಂಜಯ್ ದಾಸ್ ಶ್ರೀಗಳು ಹೇಳಿದ್ದಾರೆ.

 

Rahul Gandhi Defamation Case: ಕಾಂಗ್ರೆಸ್‌ ನಾಯಕನಿಗೆ ಜಾಮೀನು, ಏ.13ಕ್ಕೆ ಮುಂದಿನ ವಿಚಾರಣೆ

ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭಾ ಕಾರ್ಯದರ್ಶಿ, ಸರ್ಕಾರಿ ಬಂಗಲೆ ಕಾಲಿ ಮಾಡುವಂತೆ ನೊಟೀಸ್ ನೀಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದರು. ಏಪ್ರಿಲ್ 22ರ ಒಳಗಾಗಿ ಸರ್ಕಾರಿ ಬಂಗಲೆ ಕಾಲಿ ಮಾಡುವುದಾಗಿ ಪತ್ರದಲ್ಲಿ ಹೇಳಿದ್ದರು. 

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನಿವಾಸ ತೆರವುಗೊಳಿಸಲು ತಮಗೆ ನೀಡಿರುವ ನೋಟಿಸ್‌ ಅನ್ನು ಏ.22ರೊಳಗೆ ಪಾಲಿಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ನಿಮ್ಮ ಪತ್ರಕ್ಕೆ ಧನ್ಯವಾದಗಳು, 12-ತುಘಲಕ್‌ ರಸ್ತೆಯಲ್ಲಿ ನನಗೆ ನೀಡಲಾದ ಮನೆಯನ್ನು ರದ್ದುಪಡಿಸಿರುವ ವಿಷಯ ಕುರಿತಂತೆ ‘ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದ ಜನಪ್ರತಿನಿಧಿಯಾಗಿ, ಈ ಮನೆಯಲ್ಲಿ ನಾನು 19 ವರ್ಷಗಳ ಸುಂದರ ನೆನಪುಗಳನ್ನು ಹೊಂದಿದ್ದೇನೆ. ನನ್ನ ಹಕ್ಕುಗಳ ಕುರಿತು ಯಾವುದೇ ಪೂರ್ವಾಗ್ರಹಗಳನ್ನು ಹೊಂದದೆ, ಪತ್ರದಲ್ಲಿನ ಮಾಹಿತಿಗಳನ್ನು ನಾನು ಪಾಲಿಸುತ್ತೇನೆ’ ಎಂದು ಮನೆ ತೆರವು ಮಾಡುವ ಭರವಸೆ ನೀಡಿದ್ದಾರೆ.

ಸೂರತ್‌ ಕೋರ್ಟ್‌ನಲ್ಲಿ ಕೈ ಶಕ್ತಿ ಪ್ರದರ್ಶನ: ನ್ಯಾಯಾಲಯಕ್ಕೆ ಒತ್ತಡ ಹೇರುವ ಬಾಲಿಶ ಪ್ರಯತ್ನ ಎಂದ ಬಿಜೆಪಿ

ನೋಟಿಸ್‌ ಬಗ್ಗೆ ಕಿಡಿಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇಂಥ ಬೆದರಿಸುವ, ಹೆದರಿಸುವ ಮತ್ತು ಅವಮಾನ ಮಾಡುವ ಸರ್ಕಾರದ ನಿಲುವುಗಳು ಖಂಡನಾರ್ಹ. ಮನೆ ತೆರವು ಬಳಿಕ ರಾಹುಲ್‌ ತಮ್ಮ ತಾಯಿ ಸೋನಿಯಾ ನಿವಾಸಕ್ಕೆ ಹೋಗಬಹುದು ಅಥವಾ ನಾನೇ ಅವರಿಗಾಗಿ ನನ್ನ ನಿವಾಸವನ್ನು ತೆರವು ಮಾಡಿಕೊಡುವೆ’ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios