Asianet Suvarna News

ರಾಮ ಮಂದಿರ ಭೂ ಖರೀದಿಯಲ್ಲಿ ಅಕ್ರಮ: ಆಪ್‌ ಆರೋಪಕ್ಕೆ ಟ್ರಸ್ಟ್‌ ತಿರುಗೇಟು!

* 2 ಕೋಟಿ ರು. ಮೌಲ್ಯದ ಜಮೀ​ನೊಂದನ್ನು 18.5 ಕೋಟಿ ರು. ಖರೀ​ದಿ​ಸುವ ಮುಖಾಂತರ ಅಕ್ರಮ ಎಸ​ಗ​ಲಾ​ಗಿದೆ ಎಂಬ ಆರೋಪ

* ಭೂ ಖರೀ​ದಿ​ ಅಕ್ರಮ ನಡೆದಿಲ್ಲ: ರಾಮಮಂದಿರ ಟ್ರಸ್ಟ್‌

* ಭೂಮಿ ಬೆಲೆ ಈಗ ಹೆಚ್ಚಿದೆ: ಸ್ಪಷ್ಟನೆ

Ayodhya Ram temple trust refutes allegations of corruption in purchase of land pod
Author
Bangalore, First Published Jun 15, 2021, 9:10 AM IST
  • Facebook
  • Twitter
  • Whatsapp

ಅಯೋ​ಧ್ಯೆ(ಜೂ.15): ಭವ್ಯ ರಾಮ​ಮಂದಿರ ನಿರ್ಮಾ​ಣ​ವಾ​ಗ​ಲಿ​ರುವ ಉತ್ತರ ಪ್ರದೇ​ಶದ ಅಯೋ​ಧ್ಯೆ​ಯಲ್ಲಿ 2 ಕೋಟಿ ರು. ಮೌಲ್ಯದ ಜಮೀ​ನೊಂದನ್ನು 18.5 ಕೋಟಿ ರು. ಖರೀ​ದಿ​ಸುವ ಮುಖಾಂತರ ಅಕ್ರಮ ಎಸ​ಗ​ಲಾ​ಗಿದೆ ಎಂಬ ಆಪ್‌ ಮತ್ತು ಸಮಾ​ಜ​ವಾದಿ ಪಕ್ಷ​ಗಳ ಆರೋ​ಪಕ್ಕೆ ರಾಮ​ಜನ್ಮ ಭೂಮಿ ಟ್ರಸ್ಟ್‌ ತಿರು​ಗೇಟು ನೀಡಿದೆ.

5 ನಿಮಿಷ, 2 ಕೋಟಿಯಿಂದ 18 ಕೋಟಿ: ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ ಆರೋಪ!

ಈ ಸಂಬಂಧ ಸೋಮ​ವಾರ ಹೇಳಿಕೆ ಬಿಡು​ಗಡೆ ಮಾಡಿ​ರುವ ರಾಮಜನ್ಮ ಭೂಮಿ ಟ್ರಸ್ಟ್‌ನ ಕಾರ್ಯ​ದರ್ಶಿ ಚಂಪತ್‌ ರಾಯ್‌, ‘ಅಯೋ​ಧ್ಯೆ​ಯಲ್ಲಿ ರಾಮ​ಮಂದಿರ ನಿರ್ಮಾ​ಣಕ್ಕೆ ಸುಪ್ರೀಂ ಕೋರ್ಟ್‌ ಅಸ್ತು ನೀಡಿದ ಬಳಿಕ, ಭಾರೀ ಪ್ರಮಾ​ಣದ ಜನ ಅಯೋ​ಧ್ಯೆ​ಯಲ್ಲಿ ಜಮೀನು ಖರೀ​ದಿಗೆ ಮುಗಿ​ಬಿ​ದ್ದಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾ​ರವು ಅಭಿ​ವೃದ್ಧಿ ಕಾರ್ಯ​ಗ​ಳಿ​ಗಾಗಿ ಜಮೀ​ನು ಖರೀ​ದಿ​ಸು​ತ್ತಿದೆ. ಇದ​ರಿಂದಾಗಿ ರಾಮ​ಮಂದಿರ ನಿರ್ಮಾಣವಾಗಲಿರುವ ಸುತ್ತ​ಮು​ತ್ತ​ಲಿನ ಪ್ರದೇ​ಶ​ಗ​ಳಲ್ಲಿ ಜಮೀ​ನಿನ ಬೆಲೆಯು ಭಾರೀ ಏರಿ​ಕೆ​ಯಾ​ಗಿದೆ. ಆದಾಗ್ಯೂ, ರೈಲ್ವೆ ನಿಲ್ದಾ​ಣಕ್ಕೆ ಹತ್ತಿ​ರ​ವಿ​ರುವ ಮತ್ತು ಮುಖ್ಯ ಭಾಗ​ದ​ಲ್ಲಿ​ರುವ ಜಮೀ​ನನ್ನು ಮಾರು​ಕಟ್ಟೆದರ​ವಾದ 20 ಕೋಟಿ ರು.ಗಿಂತಲೂ ಕಡಿಮೆ ದರ​ವಾದ 18.5 ಕೋಟಿ ರು.ಗೆ ಖರೀ​ದಿ​ಸ​ಲಾ​ಗಿ​ದೆ’ ಎಂದು ಹೇಳಿ​ದ್ದಾರೆ.

93ರ ಹರೆಯದಲ್ಲಿ ರಾಮಲಲ್ಲಾಗೆ ಸುಪ್ರೀಂನಲ್ಲಿ ನ್ಯಾಯ ಒದಗಿಸಿದ ವಕೀಲ ಇವರೇ ನೋಡಿ!

ಆದಾಗ್ಯೂ, ರಾಜ​ಕೀಯ ಮುಖಂಡ​ರು ಜಮೀನು ಖರೀ​ದಿ​ಯಲ್ಲಿ ಭ್ರಷ್ಟಾ​ಚಾರ ಮತ್ತು ಅಕ್ರಮ ನಡೆ​ದಿದೆ ಎಂದು ಸುಳ್ಳು ಸಂದೇಶವನ್ನು ಹರ​ಡು​ತ್ತಿ​ದ್ದು, ಇದು ರಾಜ​ಕೀಯ ಪ್ರೇರಿತ ಆರೋಪ ಎಂದು ಕಿಡಿ ನುಡಿ​ಯ​ನ್ನಾ​ಡಿ​ದ್ದಾರೆ.

ಜಮೀನು ಖರೀ​ದಿಗೆ ಸಂಬಂಧಿ​ಸಿದ ಎಲ್ಲಾ ವ್ಯವ​ಹಾ​ರ​ಗಳು ಬ್ಯಾಂಕ್‌ ಮತ್ತು ಆನ್‌​ಲೈನ್‌ ಮುಖಾಂತ​ರವೇ ನಡೆ​ದಿ​ರು​ವಾಗ ಅಕ್ರಮ ನಡೆ​ಯಲು ಹೇಗೆ ಸಾಧ್ಯ ಎಂದು ಪ್ರಶ್ನಿ​ಸಿ​ದರು.

Follow Us:
Download App:
  • android
  • ios