Ayodhya ರಾಮಮಂದಿರ ಗರ್ಭಗುಡಿ ವಿನ್ಯಾಸ ಅಂತಿಮ: ರಾಮನವಮಿ ದಿನ ರಾಮನ ಮೇಲೆ ಬೀಳಲಿದೆ ಸೂರ್ಯರಶ್ಮಿ..!
ರಾಮನವಮಿ ದಿನ ರಾಮಲಲ್ಲಾ ಮೇಲೆ ಬೀಳಲಿದೆ ಸೂರ್ಯರಶ್ಮಿ ಬೀಳುವ ಹಾಗೆ ಕೊನಾರ್ಕ್ ಸೂರ‍್ಯ ದೇಗುಲ ಗರ್ಭಗುಡಿ ರೀತಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ. ಪ್ರಧಾನಿ ಮೋದಿ ನೀಡಿದ್ದ ಸಲಹೆಯಂತೆ ಗರ್ಭಗುಡಿ ವಿನ್ಯಾಸ ಮಾಡಲಾಗುತ್ತಿದ್ದು, 2023ರ ಡಿಸೆಂಬರ್ಗೆ ಭಕ್ತರಿಗೆ ರಾಮಮಲ್ಲಾ ದರ್ಶನ ನೀಡುವ ಸಾಧ್ಯತೆ ಇದೆ.
ಲಖನೌ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿ ಭರದಿಂದ ಸಾಗಿರುವ ನಡುವೆಯೇ ದೇಗುಲದ (Temple) ಅತಿಮುಖ್ಯ ಭಾಗವಾದ ಗರ್ಭಗುಡಿಯ (Sanctum Sanctorum) ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ರಾಮನವಮಿ (Ram Navami) ದಿನ ಸೂರ್ಯ ಕಿರಣಗಳು ರಾಮಲಲ್ಲಾ (ಬಾಲರಾಮ) ಮೂರ್ತಿಯ (Ram Lalla Idol) ಮೇಲೆ ಬೀಳುವಂತೆ ಗರ್ಭಗುಡಿಯನ್ನು ವಿನ್ಯಾಸಗೊಳಿಸಲು (Design) ತಜ್ಞರ ತಂಡ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಹಿಂದೆ ದೇಗುಲದ ಗರ್ಭಗುಡಿಯನ್ನು ಒಡಿಶಾದ (Odisha) ಜಗತ್ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾಲಯದ (Konark Sun Temple) ಶೈಲಿಯಲ್ಲಿ ವಿನ್ಯಾಸಗೊಳಿಸಬೇಕು ಎಂದು ಸಲಹೆ ನೀಡಿದ್ದರು. ಕೊನಾರ್ಕ್ ಸೂರ್ಯ ದೇವಾಲಯದ ಗರ್ಭಗುಡಿಯನ್ನು ಸೂರ್ಯರಶ್ಮಿಯು ಸೂರ್ಯದೇವನ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಮಾದರಿಯನ್ನು ರಾಮಮಂದಿರ ಗರ್ಭಗುಡಿಗೂ ಅಳವಡಿಸಬಹುದು ಎಂಬುದು ಮೋದಿ ಸಲಹೆ ಆಗಿತ್ತು.
‘ಈಗ ವಾಸ್ತುಶಿಲ್ಪಿಗಳನ್ನು ಒಳಗೊಂಡ ತಜ್ಞರ ಸಮಿತಿ ಗರ್ಭಗುಡಿ ವಿನ್ಯಾಸ ಅಂತಿಮಗೊಳಿಸಿದೆ. ಪ್ರತಿವರ್ಷ ರಾಮನವಮಿ ದಿನ ಸೂರ್ಯರಶ್ಮಿಯು ರಾಮನ ವಿಗ್ರಹದ ಮೇಲೆ ಬೀಳುವಂತೆ ಗರ್ಭಗುಡಿ ವಿನ್ಯಾಸಗೊಳಿಸಲಾಗುತ್ತದೆ’ ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. 2023ರ ಡಿಸೆಂಬರ್ಗೆ ಗರ್ಭಗುಡಿ ನಿರ್ಮಾಣ ಮುಗಿಸಿ, 2024ರ ಸಂಕ್ರಾತಿಗೆ ಭಕ್ತರಿಗೆ ದೇಗುಲ ತೆರೆಯುವ ಉದ್ದೇಶವಿದೆ.
ಇದನ್ನು ಓದಿ: 21 ಅಡಿ ಎತ್ತರಕ್ಕೆ ಎದ್ದುನಿಂತ ರಾಮಮಂದಿರ: 2024ರ ಸಂಕ್ರಾಂತಿಗೆ ಭಕ್ತರಿಗೆ ದರ್ಶನ ಭಾಗ್ಯ
‘ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ’ ಎಂದು ರಾಯ್ ಹೇಳಿದ್ದಾರೆ.
ಮಂದಿರಕ್ಕೆ ಆಶಿಷ್ ಸೋಂಪುರ ಅವರು ವಾಸ್ತುಶಿಲ್ಪಿಯಾಗಿದ್ದಾರೆ. ನಿರ್ಮಾಣ ಸಮಿತಿಗೆ ಮಾಜಿ ಅಧಿಕಾರಿ ನೃಪೇಂದ್ರ ಮಿಶ್ರಾ ಅಧ್ಯಕ್ಷರಾಗಿದ್ದು, ವಾಸ್ತುಶಿಲ್ಪ ತಜ್ಞರಾದ ಪ್ರದೀಪ್ ಕುಮಾರ್ ಹಾಗೂ ಪ್ರೊ. ಗೋಪಾಲ ಕೃಷ್ಣನ್ ಹಾಗೂ ಇತರರು ಸಮಿತಿ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ
ರಾಜಸ್ಥಾನದ ಬನ್ಸಿ ಪಹಾಡ್‌ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್ ಸಮೂಹದೊಂದಿಗೆ ಕೆಲ ದಿನಗಳ ಹಿಂದೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದರು. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಪೂರ್ಣಗೊಂಡಾಗ ಅದು ಅದ್ಭುತ ವಾಸ್ತುಶಿಲ್ಪ, ಕರಕುಶಲತೆ ಹಾಗೂ ಅತ್ಯುನ್ನತ ಎಂಜಿನಿಯರಿಂಗ್ ಸಂಕೇತ ಎನಿಸಿಕೊಳ್ಳಲಿದೆ. ನಿಗದಿಪಡಿಸಿದಂತೆ 2023ರ ಡಿಸೆಂಬರ್ ವೇಳೆಗೆ ಗರ್ಭಗೃಹ ನಿರ್ಮಾಣ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಭರದಿಂದ ಕಾಮಗಾರಿ ನಡೆಸುತ್ತಿದ್ದೇವೆ. ಗರ್ಭಗೃಹ ನಿರ್ಮಾಣದ ಬಳಿಕ ರಾಮಲಲ್ಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರಾಣ ಪ್ರತಿಷ್ಠೆ ಪೂಜೆ ನೆರವೇರಿಸಲಾಗುವುದು. ಇದರ ಬಳಿಕ ದೂರದಿಂದಲೇ ದೇವರ ದರ್ಶನಕ್ಕೆ ಜನರಿಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದರು.
ಇದನ್ನು ಓದಿ: ಅಯೋಧ್ಯೆಯ ರಾಮನಿಗೆ ಮಹಾರಾಷ್ಟ್ರದ ತೇಗ