ರಾಮಮಂದಿರ ಉದ್ಘಾಟನೆಯಾಗುವ ಮುನ್ನವೇ ಅಯೋಧ್ಯೆ ವಿಮಾನ ನಿಲ್ದಾಣ ಸಿದ್ಧ
ಡಿಸೆಂಬರ್‌ಗೆ ಪ್ರಾರಂಭವಾಗಲಿರುವ ಸದ್ಯದ ನಿಲ್ದಾಣದಲ್ಲಿ 6,250 ಚ.ಮೀ ವಿಸ್ತೀರ್ಣದಲ್ಲಿ ಟರ್ಮಿನಲ್ ಕಟ್ಟಡವಿದ್ದು, ಇದು 500 ಪ್ರಯಾಣಿಕರನ್ನು ಒಮ್ಮೆಗೆ ನಿಭಾಯಿಸಬಹುದಾಗಿದೆ. ಅಲ್ಲದೇ ರನ್‌ವೇಯು 2,200 ಮೀಟರ್ ಉದ್ದ ಇರಲಿದ್ದು, 4 ವಿಮಾನಗಳನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿರಲಿದೆ.
ಅಯೋಧ್ಯೆ(ಸೆ.25): ಮುಂದಿನ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುವ ಮುನ್ನವೇ ಇದೇ ವರ್ಷ ಡಿಸೆಂಬರ್ ವೇಳೆಗೆ ಅಯೋಧ್ಯೆಯ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆ ಇದೆ. ಅಲ್ಲದೇ ಕೇಂದ್ರ ಸರ್ಕಾರವು ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು 5ಪಟ್ಟು ಹೆಚ್ಚು ದೊಡ್ಡದಾಗಿ ವಿಸ್ತರಿಸುವ ಯೋಜನೆ ಹೊಂದಿದೆ.
ಡಿಸೆಂಬರ್‌ಗೆ ಪ್ರಾರಂಭವಾಗಲಿರುವ ಸದ್ಯದ ನಿಲ್ದಾಣದಲ್ಲಿ 6,250 ಚ.ಮೀ ವಿಸ್ತೀರ್ಣದಲ್ಲಿ ಟರ್ಮಿನಲ್ ಕಟ್ಟಡವಿದ್ದು, ಇದು 500 ಪ್ರಯಾಣಿಕರನ್ನು ಒಮ್ಮೆಗೆ ನಿಭಾಯಿಸಬಹುದಾಗಿದೆ. ಅಲ್ಲದೇ ರನ್‌ವೇಯು 2,200 ಮೀಟರ್ ಉದ್ದ ಇರಲಿದ್ದು, 4 ವಿಮಾನಗಳನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿರಲಿದೆ.
ಅಯೋಧ್ಯೆಯಲ್ಲಿ ನೆಡಲು ಕರ್ನಾಟಕದ ನಿಡ್ಡೋಡಿಯ ನಾಗಲಿಂಗ ಗಿಡಗಳ ರವಾನೆ..!
ಇನ್ನು ಯೋಜನೆಯ 2ನೇ ಹಂತದ ಪ್ರಾಸ್ತಾವಿತ ನಿಲ್ದಾಣವು ಹೆಚ್ಚು ದೊಡ್ಡದಾಗಿರಲಿದ್ದು ಇದು 30,000 ಚ.ಅಡಿ ವಿಸ್ತೀರ್ಣದಲ್ಲಿ ಟರ್ಮಿನಲ್ ಕಟ್ಟಡ ಹೊಂದಿರಲಿದೆ ಮತ್ತು 3,200 ಪ್ರಯಾಣಿಕರಿಗೆ ಸೇವೆ ಒದಗಿಸಬಲ್ಲದು. ಇನ್ನು 3,125 ಮೀಟರ್ ರನ್‌ವೇ ನಿರ್ಮಾಣ ಗುರಿ ಹೊಂದಲಾಗಿತ್ತು. ಇದು ಒಟ್ಟು 8 ವಿಮಾನಗಳ ನಿಲುಗಡೆ ಸಾಮರ್ಥ್ಯ ಹೊಂದಿರಲಿದೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ನೆರವೇರಿಸಲಿದ್ದಾರೆ.