ಅಂತಾರಾಷ್ಟ್ರೀಯ ಮಾಧ್ಯಮಗಳಿಗಿಂತ ಬಹಳ ಭಿನ್ನವಾಗಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯವು, ಭಾರತದಲ್ಲಿನ ಸಾಮಾಜಿಕ ಒತ್ತಡದ ವಿಷಯಗಳ ಬಗ್ಗೆ ಸಕಾರಾತ್ಮಕ ಎನಿಸುವ ವರದಿಯನ್ನು ನೀಡಿದೆ.  ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ, ಸಿಡ್ನಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಾಲ್ವಟೋರ್ ಬಾಬೊನ್ಸ್, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಜೀವಂತವಾಗಿರುವುದು ಮಾತ್ರವಲ್ಲದೆ, ತುಂಬಾ ಆರೋಗ್ಯಕರ ರೂಪದಲಿದೆ ಎಂದು ಬರೆದಿದ್ದಾರೆ.

ನವದೆಹಲಿ (ಮಾ.7): ಬಿಬಿಸಿ, ನ್ಯೂಯಾರ್ಕ್‌ ಟೈಮ್ಸ್‌ ಸೇರಿದಂತೆ ಜಗತ್ತಿನ ಇತರ ಪತ್ರಿಕೆಗಳು 'ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣವನ್ನು ತೋರಿಸುವ' ಧೋರಣೆಯಂತೆ ವರದಿ ಮಾಡುತ್ತಿವೆ. ತನ್ನ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದರೂ, ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪ್ರತಿ ಬಾರಿಯೂ ತನ್ನದೊಂದು ಕೊಂಕು ಹೇಳುತ್ತಲೇ ಇರುತ್ತದೆ. ಪಾಶ್ಚಿಮಾತ್ಯ ದೇಶಗಳ ಪಾಲಿಗೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮಾಡುವುದೇ ಫುಲ್‌ ಟೈಮ್‌ ಕಾಯಕ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಾಲ್ವಟೋರ್ ಬಾಬೊನ್ಸ್, ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸಕಾರಾತ್ಮಕ ವರದಿ ಮಾಡಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಜೀವಂತವಾಗಿರುವುದು ಮಾತ್ರವಲ್ಲ ಅತ್ಯಂತ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ. ಅದರೊಂದಿಗೆ ಪ್ರಜಾಸತ್ತಾತ್ಮಕ ಭಾರತ ಇಂದು ಹಿಂದೂ ರಾಷ್ಟ್ರವಾಗುವ ನಿಟ್ಟಿನಲ್ಲಿ ಹೋಗುತ್ತಿದೆ ಎನ್ನುವ ಪಾಶ್ಚಿಮಾತ್ಯ ದೇಶಗಳ ಷಡ್ಯಂತ್ರಗಳನ್ನೂ ಅವರು ಬಯಲು ಮಾಡಿದ್ದಾರೆ.

ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ: ಬಾಬೋನ್ಸ್ ತನ್ನ ವರದಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದು ಹೇಳಿದ್ದಾರೆ, ಅಲ್ಲಿ ವಿಶ್ವದ ಅರ್ಧದಷ್ಟು ಜನರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೂಲಕ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಆಡಳಿತಾರೂಢ ಬಿಜೆಪಿಯು ಆರಾಧನೆ ಮತ್ತು ನಂಬಿಕೆಯ ಸ್ವರೂಪಗಳನ್ನು ಗುರುತಿಸುವುದರಿಂದ ಹಿಂದುತ್ವಕ್ಕೆ ಒತ್ತು ನೀಡುತ್ತಿದೆ ಎಂದು ಕ್ವಾಡ್ರಾಂಟ್ ಆನ್‌ಲೈನ್ ವರದಿ ಹೇಳಿದೆ.

ಹಿಂದು, ಭಾರತ ಎನ್ನುವ ಶಬ್ದ ಬಂದಿದ್ದು ಸಂಸ್ಕೃತದಿಂದ: ಹಿಂದು ಬಾಗೂ ಭಾರತ ಎನ್ನುವಂಥ ಶಬ್ದದ ಮೂಲ ಸಂಸ್ಕೃತ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಬಿಬಿಸಿ ಸಾಕ್ಷ್ಯಚಿತ್ರ, ಇಂಡಿಯಾ: ದಿ ಮೋದಿ ಕ್ವಶ್ಚನ್‌ 2002ರ ಗುಜರಾತ್ ಗಲಭೆಗಳನ್ನು ತಪ್ಪುದಾರಿಗೆಳೆಯುವ ಸಂಗತಿಗಳೊಂದಿಗೆ ಚಿತ್ರಿಸಿದೆ. ಈ ವಿವಾದಾತ್ಮಕ ಸಾಕ್ಷ್ಯಚಿತ್ರ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಖು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್‌ನಿಂದ ಈ ವಿಚಾರದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ.

ಪ್ರಶ್ನೆ ಮಾಡುವ ಹಕ್ಕು ಬ್ರಿಟನ್‌ಗಿಲ್ಲ: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಬೇಕಾದಂತೆ ಬರೆಯುವ ಹಾಗೂ ಮಾತನಾಡುವ ಬ್ರಿಟನ್‌ನ ಉದ್ದೇಶದ ಬಗ್ಗೆಯೂ ಬಾಬೋನ್ಸ್‌ ತಮ್ಮ ವರದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. 2022ರ ಡಿಸೆಂಬರ್‌ 6 ರಂದು ಬರ್ಮಿಂಗ್‌ಹ್ಯಾಂನಲ್ಲಿ 45 ವರ್ಷದ ಮಹಿಳೆಯೊಬ್ಬಳು ಮೌನವಾಗಿ ಪ್ರಾರ್ಥನೆ ಮಾಡಿದ್ದ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ಆದರೆ, ಭಾರತದಲ್ಲಿ ಹಾಗಿಲ್ಲ. ಭಿನ್ನ ಧರ್ಮದವರು ತಮ್ಮ ಆರಾಧನೆಯ ದೇವರನ್ನು ಸಾರ್ವಜನಿಕ ಸ್ಥಳಗಳಲ್ಲಿ, ಒಮ್ಮೊಮ್ಮೆ ಧ್ವನಿವರ್ಧಕ ಬಳಸಿಕೊಂಡು ಆಚರಣೆ ಮಾಡುತ್ತಾರೆ ಎಂದಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

ಬ್ರಿಟನ್‌ ಸಾಮಾಜಿಕ ದ್ವೇಷ ಬೆಳೆಸಿದ ದೇಶ: ತಮ್ಮ ವರದಿಯಲ್ಲಿ ಬ್ರಿಟನ್‌ನ ಬಗ್ಗೆ ಕಿಡಿಕಾರಿರುವ ಬಾಬೋನ್ಸ್‌, ಧರ್ಮದ ಅಧಾರದಲ್ಲಿ ಜಗತ್ತಿನಲ್ಲಿ ಯಾವುದೇ ದೇಶ ಸಾಮಾಜಿಕ ದ್ವೇಷ ಬೆಳೆಸುತ್ತಿದ್ದರೆ ಅದ ನಾಸ್ತಿಕ ವಾದಗಳನ್ನು ನಂಬುವ ಬ್ರಿಟನ್‌ ಮಾತ್ರ. ಹಾಗಿದ್ದರೂ ಪ್ಯೂ ಸಂಶೋಧನಾ ಕೇಂದ್ರವು ಭಾರತವನ್ನು ಧಾರ್ಮಿಕ ದ್ವೇಷಕ್ಕಾಗಿ ವಿಶ್ವದ ಅತ್ಯಂತ ಕೆಟ್ಟ ದೇಶ ಎಂದು ಹೆಸರಿಸಿದೆ ಎಂದು ಕ್ವಾಡ್ರಾಂಟ್ ಆನ್‌ಲೈನ್ ಹೇಳಿದೆ. ಪ್ಯೂ ಸಂಶೋಧನಾ ಕೇಂದ್ರವು ತನ್ನದೇ ಆದ ನಿರ್ದಿಷ್ಟ ಉದ್ದೇಶಕ್ಕಾಗಿ ಭಾರತೀಯ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ.

ಮತಾಂತರ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ಅಧಿಕೃತ ಜಾರಿ: ರಾಜ್ಯಪಾಲರ ಅಂಕಿತ

ಭಾರತದಲ್ಲಿ ಯಾವುದೇ ಧರ್ಮದವರು ನಿರಾಳವಾಗಿ ಬದುಕಬಹುದು: ಸಿಡ್ನಿ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಭಾರತೀಯರು ತಮ್ಮ ಧರ್ಮವನ್ನು ಆಚರಿಸಲು ಸಂಪೂರ್ಣವಾಗಿ ಸ್ವತಂತ್ರರು ಎಂದು ಹೇಳಿದೆ. ಆದರೆ ಪ್ಯೂ ಸಂಶೋಧನಾ ಕೇಂದ್ರವು ಹಿಂದೂ ಬಹುಸಂಖ್ಯಾತ ದೇಶದಲ್ಲಿ ಕೆಲವು ಮುಸ್ಲಿಮರು ತಾರತಮ್ಯದ ಬಗ್ಗೆ ದೂರು ನೀಡುತ್ತಾರೆ ಎಂದು ಹೇಳುತ್ತದೆ. ಭಾರತವನ್ನು ಗುರಿಯಾಗಿಸಿಕೊಂಡವರಲ್ಲಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (OIRF), ಅಮೆರಿಕ ಸರ್ಕಾರದ ಪ್ರಾಯೋಜಿತ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾಶನಲ್ ರಿಲಿಜಿಯಸ್ ಫ್ರೀಡಮ್ (USCIRF) ಮತ್ತು ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಹ್ಯೂಮನ್ ರೈಟ್ಸ್ (OHCHR) ಕೂಡ ಸೇರಿವೆ.