ಸಖತ್ ಆಗಿ ಕುಡಿದು ಡಾನ್ಸ್ ಮಾಡಿದ ಆಂಟಿ ಮದುವೆಗೆ ಬಂದವರಿಗೆ ಬಿಟ್ಟಿ ಮನೋರಂಜನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ನವದೆಹಲಿ: ಉತ್ತರ ಭಾರತದ ಮದುವೆಗಳಲ್ಲಿ ಕುಡಿದು ಮೋಜು ಮಾಡುವುದು ಹೊಸದೇನಲ್ಲ. ಡ್ಯಾನ್ಸ್ ಫ್ಲೋರ್‌ನಲ್ಲಿ ಕುಡುಕ ಅಂಕಲ್‌ಗಳು ನೆಲದ ಮೇಲೆ ಸ್ಥಿರವಾಗಿ ನಿಲ್ಲಲಾಗದ ಕಾಲುಗಳನ್ನು ನೆಲಕ್ಕೆ ಊರಲು ಪ್ರಯತ್ನಿಸುತ್ತಾ ತೂರಾಡುವುದನ್ನು ನೋಡಬಹುದು. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ಅಂಕಲ್‌ಗಳು ಅಲ್ಲ ಹುಡುಗರು ಅಲ್ಲ ಆಂಟಿಯೊಬ್ಬರು ಸಖತ್ ಆಗಿ ಕುಡಿದು ಕೈಯಲ್ಲಿ ಬಾಟಲಿ ಹಿಡಿದು ನೆಲದಲ್ಲಿ ನಿಲ್ಲಲಾಗದೇ ತೂರಾಡುತ್ತಾ ಡಾನ್ಸ್ ಮಾಡುತ್ತಿದ್ದು, ಸುತ್ತಲಿದ್ದವರು ಅವರ ಡಾನ್ಸ್ ನೋಡಿ ಮುಸಿ ಮುಸಿ ನಗುತ್ತಿದ್ದಾರೆ.
ಹೆಚ್ಚಿನ ಮದುವೆಗಳಲ್ಲಿ ಕುಟುಂಬದ ಕೆಲವರು ಕುಡಿದ ಅಮಲಿನಲ್ಲಿ ಈ ರೀತಿ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಇಲ್ಲಿ ಮಹಿಳೆ ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ನೆಲದಲ್ಲಿ ಬಿದ್ದು ಹೊರಳಾಡುತ್ತಾ ಡಾನ್ಸ್ ಮಾಡುವಂತೆ ಎಲ್ಲರನ್ನು ತನ್ನತ್ತ ಎಳೆಯುತ್ತಾ ದೊಡ್ಡ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಾರೆ. 1985ರಲ್ಲಿ ತೆರೆಕಂಡ ಕಲಾ ಸೂರಜ್ ಸಿನಿಮಾದ 'ದೋ ಗುಂಟ್ ಪಿಲಾ ದೇ ಸಾಕಿಯಾ.' ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಸಾರಿ ಉಟ್ಟ ಮಹಿಳೆ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಯಾರಿಗೂ ಕಮ್ಮಿ ಇಲ್ಲ ಎಂಂತೆ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವೀಡಿಯೊವನ್ನು YouTube ನಲ್ಲಿ ಹಂಚಿಕೊಳ್ಳಲಾಗಿದೆ. ಅದು ವೈರಲ್ ಆಗಿದೆ.
ವೀಡಿಯೊ ಪ್ರಾರಂಭವಾಗುತ್ತಿದ್ದಂತೆ, ಆಂಟಿ ತನ್ನೊಂದಿಗೆ ನೃತ್ಯ ಮಾಡಲು ಇನ್ನೊಬ್ಬ ಮಹಿಳೆಯನ್ನು ತಾನು ಉರುಳಾಡುತ್ತಿರುವ ನೆಲದತ್ತ ಎಳೆಯಲು ಪ್ರಯತ್ನಿಸುತ್ತಾಳೆ. ನಂತರ ಅಂಟಿ ತನ್ನ ಕೈಯಲ್ಲಿ ಬಾಟಲಿ ಹಿಡಿದುಕೊಂಡು ನೆಲದ ಮೇಲೆ ಉರುಳಲು ಪ್ರಾರಂಭಿಸುತ್ತಾಳೆ. ಉಳಿದ ಮಹಿಳೆಯು ಆಕೆಯನ್ನು ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತಿರುವಾಗ, ಆಕೆ ಮಹಿಳೆಯನ್ನು ನೆಲದತ್ತ ಎಳೆದುಕೊಂಡು ಅವಳೊಂದಿಗೆ ಕುಡಿಯಲು ಮತ್ತು ಅವಳೊಂದಿಗೆ ನೃತ್ಯ ಮಾಡಲು ಕೇಳುತ್ತಾಳೆ. ಇನ್ನೊಬ್ಬ ಮಹಿಳೆ ಅವಳನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತಾಳೆ ಆದರೆ ಅಂಟಿ ಅವಳನ್ನು ಕೂಡ ಕೆಳಗೆ ಎಳೆಯಲು ಪ್ರಯತ್ನಿಸುತ್ತಾಳೆ. ಹಲವು ನಿಮಿಷಗಳವರೆಗೆ ಇದೇ ನಡೆಯುತ್ತದೆ. ಸುತ್ತಲಿರುವ ಜನರಿಗೆ ಈ ಮೂಲಕ ಅಂಟಿ ಬಿಟ್ಟಿ ಮನೋರಂಜನೆ ನೀಡುತ್ತಿದ್ದಾರೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಮಾತಿದೆ ಆದರೆ ಇವರಿಗೆ ಯಾರು ವಿವರಿಸಬೇಕು.
Song of Hope: ವೈದ್ಯರ ಸಖತ್ ಡಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಮನೆಯಲ್ಲಿ ಒಂದು ಮದುವೆ ನಡೆಯುತ್ತೆ ಅಂದ್ರೆ ಮದ್ವೆ ಆಗೋರಿಗಿಂತ ಜಾಸ್ತಿ ಖುಷಿ ಪಡುವವರು ಆಕೆಯ ಅಥವಾ ಆತನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು. ಅವರೆಲ್ಲರಿಗೂ ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸಲು ಒಂದು ಸುಸಂದರ್ಭ. ಇನ್ನು ವಧುವಿನ ತಂಗಿಯರ ಸಂಭ್ರಮಕ್ಕಂತು ಎಲ್ಲೆಯೇ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಅಕ್ಕನ ಮದುವೆಯಲ್ಲಿ ತಂಗಿ ಹಾಗೂ ಆಕೆಯ ಸ್ನೇಹಿತರ ಜಬರ್ದಸ್ತ್ ಡಾನ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ವಧುವಿನ ಸ್ನೇಹಿತರು ಮತ್ತು ಸಹೋದರಿ, ರಣವೀರ್ ಸಿಂಗ್ (Ranveer Singh) ಮತ್ತು ಅನುಷ್ಕಾ ಶರ್ಮಾ (Anushka Sharma) ಅಭಿನಯದ 2010 ರ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಿತ್ರದ ಸುನಿಧಿ ಚೌಹಾಣ್ (Sunidhi Chauhan) ಮತ್ತು ಮಾಸ್ಟರ್ ಸಲೀಂ (Saleem) ಅವರು ಹಾಡಿರುವ ಐನ್ವಯಿ ಐನ್ವಾಯಿ ಹಾಡಿಗೆ ಡಾನ್ಸ್ ಮಾಡಿದ್ದಾರೆ.
ವಿಚಿತ್ರ ಡಾನ್ಸ್ ಮಾಡಕ್ಕೋಗಿ ಸೊಂಟ ಮುರಿದುಕೊಂಡ ಯುವಕರು
ಈ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram)'theweddingministry' ಎಂಬ ಖಾತೆ ಹೊಂದಿರುವ ಬಳಕೆದಾರರು ಪೋಸ್ಟ್ ಮಾಡಿದ್ದು, 'ನಿಮ್ಮ ಸಹೋದರಿ ವಿವಾಹವಾಗುತ್ತಿರುವಾಗ ನಿಮ್ಮ ಎಕ್ಸೈಟ್‌ಮೆಂಟ್ ಲೆವೆಲ್' ಹೇಗಿರುತ್ತೆ ಎಂಬುದಾಗಿ ಬರೆಯಲಾಗಿದೆ. ಈ ಪೋಸ್ಟ್‌ನ್ನು 15,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.