ಮನಾಲಿ(ಅ.13): ಇತ್ತೀಚೆಗಷ್ಟೇ ಪಿಎಂ ಮೋದಿ ಉದ್ಘಾಟಿಸಿದ್ದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಅಟಲ್ ಟನಲ್ ದೇಶಕ್ಕೆ ಹೆಮ್ಮೆ ತಂದುಕೊಟ್ಟಿತ್ತು. ಆದರೀಗ ಉದ್ಘಾಟನೆಗೊಂಡ ಅಟಲ್ ಟನಲ್ ಮತ್ತೆ ಸದ್ದು ಮಾಡಿದೆ. ಹೌದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಕಿದ್ದ ಶಿಲಾನ್ಯಾಸದ ಕಲ್ಲು ಮಾಯವಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!

ಸೋನಿಯಾ ಗಾಮಧಿ ಹೆಸರಿದ್ದ ಶಿಲಾನ್ಯಾಸದ ಕಲ್ಲು ಅಟಲ್ ಟನಲ್ ಉದ್ಘಾಟನೆಗೂ ಮೊದಲೇ ಅಲ್ಲಿಂದ ಕಿತ್ತೆಸೆದಿದ್ದಾರೆ ಎಂಬುವುದು ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕರ ಆರೋಪವಾಗಿದೆ. ಪಪಕ್ಷದ ಪ್ರಾದೇಶಿಕ ಅಧ್ಯಕ್ಷ ಕುಲ್ದೀಪ್ ಸಿಂಗ್ ರಾಥೋಡ್ ಮುಖ್ಯಮಂತ್ರಿ ಜಯರಾಮ್ ಠಾಕೂರ್‌ಗೆ ಪತ್ರ ಬರೆದು ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುವ ಎಚ್ಚರಿಕೆ ನೀಡಿದ್ದಾರೆ. ತಾನು ಬರೆದ ಪತ್ರದಲ್ಲಿ 'ಮಾಯವಾಗಿರುವ ಕಲ್ಲನ್ನು ಮತ್ತೆ ಹಾಕದಿದ್ದರೆ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವ ವಿರೋಧಿ, ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ಎಂದೂ ಉಲ್ಲೇಖಿಸಿದ್ದಾರೆ.

'ಅವರಲ್ಲಿ ಧೈರ್ಯ ಕಡಿಮೆ ಇತ್ತು, ಚುನಾವಣೆ ಇತ್ತು, ನಮಗೆ ದೇಶವೇ ಮೊದಲು'

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ  2010ರ ಜೂನ್ 28ರಂದು ಮನಾಲಿಯ ಧೌಂಡಿಯ ದಕ್ಷಿಣ ಪೋರ್ಟಲ್‌ನಲ್ಲಿ ರೊಹ್ತಂಗ್ ಸುರಂಗ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 

ಸದ್ಯ ಪಕ್ಷದ ಇಬ್ಬರು ನಾಯಕರು ಜಿಯಾಚೆನ್ ಠಾಕೂರ್ ಹಾಗೂ ಹರಿಚಂದ್ ಶರ್ಮಾ ಕಿಲ್ಲಾಂಗ್ ಹಾಗೂ ಮನಾಲಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿದ್ದು, ಶಿಲಾನ್ಯಾಸ ಮಾಡಿದ ಕಲ್ಲು ಹೇಗೆ ಮಾಯವಾತ್ಯೆಂಬ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.