Asianet Suvarna News Asianet Suvarna News

Hindutva Politics: ಬಿಜೆಪಿಗೆ 'ಹಿಂದುತ್ವವಾದಿ' ಪಾಠ ಮಾಡಿದ ರಾಹುಲ್ ಗಾಂಧಿ!

* ಹಿಂದೂ ಹಾಗೂ ಹಿಂದುತ್ವದ ವ್ಯತ್ಯಾಸ ತಿಳಿಸಿದ ರಾಹುಲ್

* ಬಿಜೆಪಿಗೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷನ ಹಿಂದುತ್ವ ಪಾಠ

* ನಾನೊಬ್ಬ ಹಿಂದೂ ಆದರೆ ಹಿಂದುತ್ವವಾದಿಯಲ್ಲ ಎಂದ ರಾಹುಲ್

At Mega Rally In Rajasthan Rahul Gandhi Hindutvavadi Attack On BJP pod
Author
Bangalore, First Published Dec 12, 2021, 3:45 PM IST | Last Updated Dec 12, 2021, 3:45 PM IST

ಜೈಪುರ(ಡಿ.12): ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾರಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದರು. 2014ರಿಂದ ದೇಶದಲ್ಲಿ ಹಿಂದುತ್ವವಾದಿಗಳ ಆಡಳಿತವಿದ್ದು, ಈಗ ಮತ್ತೆ ಹಿಂದೂಗಳ ಆಡಳಿತ ತರಬೇಕಿದೆ ಎಂದರು. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಮಹಾತ್ಮ ಗಾಂಧಿ ಹಿಂದೂ ಮತ್ತು ನಾಥೂರಾಮ್ ಗೋಡ್ಸೆ ಹಿಂದುತ್ವವಾದಿ ಎಂದು ಹೇಳಿದರು. ಅವರಿಗೆ ಅಧಿಕಾರ ಬೇಕು, ಸತ್ಯವಲ್ಲ. ಮತ್ತು ಹಿಂದೂ ಯಾವಾಗಲೂ ಸತ್ಯದೊಂದಿಗೆ ಇರುತ್ತಾನೆ ಮತ್ತು ಎಂದಿಗೂ ಹೆದರುವುದಿಲ್ಲ ಎಂದೂ ತಿಳಿಸಿದ್ದಾರೆ.

ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ರ್ಯಾಲಿ’(ಬೆಲೆಏರಿಕೆ ನಿಲ್ಲಿಸಿ ಸಮಾವೇಶ) ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಓರ್ವ ಹಿಂದೂ ಮತ್ತು ಆದರೆ ಗೋಡ್ಸೆ ಹಿಂದುತ್ವವಾದಿ. ಒಬ್ಬ ಹಿಂದೂ ಸತ್ಯವನ್ನು ಹುಡುಕುತ್ತಾನೆ, ಅವನ ಮಾರ್ಗವು ಸತ್ಯಾಗ್ರಹಿಯಾಗಿರುತ್ತದೆ. ಆದರೆ ಒಬ್ಬ ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ ಎಂದು ರಾಹುಲ್ ಆರೋಪಿಸಿದ್ದಾರೆ. ಹಿಂದೂ ಆಗಿರುವವನು ಹೆದರುವುದಿಲ್ಲ, ಇಂಚಿಂಚೂ ಹಿಮ್ಮೆಟ್ಟುವುದಿಲ್ಲ. ನೀವೆಲ್ಲರೂ ಹಿಂದೂಗಳೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಸಮಾವೆಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ರಾಹುಲ್ ಹೇಳಿದರು. ಇದು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಬಿಜೆಪಿಗೆ ಗುದ್ದು ನೀಡಿದ್ದಾರೆ.

ಅಲ್ಲದೇ ನಾನು ಹಿಂದುತ್ವವಾದಿ ಅಲ್ಲ, ಹಿಂದೂ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮೂರ್ನಾಲ್ಕು ಸ್ನೇಹಿತರು ಏಳು ವರ್ಷಗಳಲ್ಲಿ ದೇಶವನ್ನು ನಾಶ ಮಾಡಿದ್ದಾರೆ. ದೇಶದಲ್ಲಿ ಹಣದುಬ್ಬರ, ನೋವು ಇದ್ದರೆ ಇದೆಲ್ಲಕ್ಕೂ ಹಿಂದುತ್ವವಾದಿಗಳು  ಕಾರಣ, ಅವರೇ ಈ ಕೆಲಸ ಮಾಡಿದ್ದಾರೆ. ಹಿಂದುತ್ವವಾದಿಗಳು ಏನೇ ಆಗಲಿ ಆದರೆ ಅಧಿಕಾರ ಬೇಕೆಂದು ಬಯಸುತ್ತಾರೆ ಎಂದೂ ರಾಹುಲ್ ತಿಳಿಸಿದ್ದಾರೆ.

ಹಿಂದೂ ಮತ್ತು ಹಿಂದುತ್ವ ಎರಡು ವಿಭಿನ್ನ ಪದಗಳು ಎಂದು ಬಣ್ಣಿಸಿದ ರಾಹುಲ್, ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಯಾರಿಗೂ ಹೆದರದ, ಎಲ್ಲರೂ ಅಪ್ಪಿಕೊಳ್ಳುವವನೇ ಹಿಂದೂ ಎಂದು ಹೇಳಿದರು.

Latest Videos
Follow Us:
Download App:
  • android
  • ios