Asianet Suvarna News Asianet Suvarna News

ಶೂಟ್ ಮಾಡ್ಬೇಡಿ, ಶರಣಾಗ್ತೀವಿ, ಯೋಗಿ ಅಧಿಕಾರಕ್ಕೆ ಮರಳಿದ 2 ವಾರದಲ್ಲಿ 50 ಕ್ರಿಮಿನಲ್ ಗಳ ಶರಣಾಗತಿ!

ಎರಡು ವಾರದಲ್ಲಿ ಕನಿಷ್ಠ 50 ಕ್ರಿಮಿನಲ್ ಗಳ ಶರಣಾಗತಿ

ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೇರಿದ ಬಳಿಕ ಕ್ರಿಮಿನಲ್ ಗಳಲ್ಲಿ ಹುಟ್ಟಿದ ಭಯ

ಪೊಲೀಸ್ ಎನ್ ಕೌಂಟರ್ ಹಾಗೂ ಬುಲ್ಡೋಜರ್ ಗಳ ಭಯ

At least 50 criminals surrendered within 15 days of the Yogi Adityanath led BJP government returning to power in Uttar Pradesh san
Author
Bengaluru, First Published Mar 27, 2022, 5:15 PM IST | Last Updated Mar 27, 2022, 5:15 PM IST

ಲಕ್ನೋ (ಮಾ. 27): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ (Uttar Pradesh Election) ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಯೋಗಿ ಆದಿತ್ಯನಾಥ್ (Yogi Adityanath), ಕ್ರಿಮಿನಲ್ ಗಳಿಗೆ ಚಳಿ ಹಿಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಒಂದು ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಮೇ-ಜೂನ್ ನಲ್ಲಿ ಇರುವ ಬಿಸಿಲಿನ ಸಮಯದಲ್ಲೇ ಯುಪಿಯನ್ನು ಶಿಮ್ಲಾ ಮಾಡುವುದಾಗಿ ಹೇಳಿದ್ದರು. ಆದರೆ, ಮೇ-ಜೂನ್ ಬರುವ ಮುನ್ನವೇ, ಅಪರಾಧಿಗಳಿಗೆ ಯೋಗಿ ಚಳಿ ಬಿಡಿಸಲು ಆರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ (BJP) ಅಧಿಕಾರಕ್ಕೆ ಬಂದ 15 ದಿನಗಳಲ್ಲೇ, ಕನಿಷ್ಠ 50 ಕ್ರಿಮಿನಲ್ ಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಪೊಲೀಸ್ ಎನ್ ಕೌಂಟರ್ ಗಳು (Police Encounter) ಹಾಗೂ ಮನೆಯನ್ನು ಬುಲ್ಡೋಜರ್ ಗಳ (bulldozers) ಮೂಲಕ ಕೆಡವುವ ಆತಂಕದಲ್ಲಿ ಈ ಅಪರಾಧಿಗಳು ಶರಣಾಗಿದ್ದಾರೆ ಎನ್ನಲಾಗಿದೆ.

ಇದೀಗ ಈ ಪಾತಕಿಗಳು ಕೊರಳಿಗೆ ಭಿತ್ತಿಪತ್ರಗಳನ್ನು ಸುತ್ತಿಕೊಂಡು ಪೊಲೀಸ್ ಠಾಣೆಗೆ ತೆರಳಿ ಶರಣಾಗುತ್ತಿದ್ದಾರೆ. ‘ನಾನು ಶರಣಾಗುತ್ತಿದ್ದೇನೆ, ದಯವಿಟ್ಟು ಗುಂಡು ಹಾರಿಸಬೇಡಿ’ ಎಂದು ಭಿತ್ತಿಪತ್ರಗಳಲ್ಲಿ ಬರೆಯಲಾಗಿದೆ. ಯುಪಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ (ADG Prashanth Kumar)ಮಾತನಾಡಿ, 50 ಕ್ರಿಮಿನಲ್‌ಗಳು ಪೊಲೀಸ್ ಠಾಣೆಗಳಲ್ಲಿ ಶರಣಾಗಿದ್ದಾರೆ ಮಾತ್ರವಲ್ಲದೆ ಇನ್ನು ಮುಂದೆ ಅಪರಾಧ ಕೃತ್ಯಗಳನ್ನೂ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು, "ರಾಜ್ಯದ ಮೂಲೆ ಮೂಲೆಗಳಲ್ಲಿ ಅಪರಾಧಿಗಳಲ್ಲಿ ಭಯಭೀತರಾಗಲು ಸೂಕ್ಷ್ಮ ಯೋಜನೆ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಪರಾಧದ ಬಗ್ಗೆ ಶೂನ್ಯ ಸಹಿಷ್ಣುತೆ ಎಂದರೆ ಮಾಫಿಯಾ ವಿರುದ್ಧ ಪರಿಣಾಮಕಾರಿ ಕ್ರಮ ಮಾತ್ರವಲ್ಲ, ಆದರೆ ಯುಪಿ-112 ರಿಂದ ತಾಜಾ ಜಾಗರೂಕತೆ ಮತ್ತು ತೀವ್ರ ಗಸ್ತು ತಿರುಗುವಿಕೆಯ ಬಗ್ಗೆಯೂ ಆಗಿದೆ. 2017 ರಿಂದ ರಾಜ್ಯದಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್ 10 ರ ನಂತರ ಯುಪಿಯಲ್ಲಿ ಅಪರಾಧಿಗಳ ಶರಣಾಗತಿ ಪ್ರಾರಂಭವಾಗಿದೆ. ಮಾರ್ಚ್ 15, 2022 ರಂದು, ಸಹರಾನ್‌ಪುರದಲ್ಲಿ ಅಪಹರಣ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಗೌತಮ್ ಸಿಂಗ್, ಗೊಂಡಾ ಜಿಲ್ಲೆಯ ಛಾಪಿಯಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಆ ನಂತರದ ಮೂರು ದಿನಗಳಲ್ಲಿ 23 ಅಪರಾಧಿಗಳು ಸಹರಾನ್‌ಪುರದ ಚಿಲ್ಕಾನಾ ಪೊಲೀಸ್ ಠಾಣೆಯಲ್ಲಿ ಏಕಕಾಲದಲ್ಲಿಯೇ ಶರಣಾಗಿದ್ದಾರೆ. ಇನ್ನು ದೇವಬಂದ್‌ನಲ್ಲೂ, ನಾಲ್ವರು ಅಪರಾಧಿಗಳು ಶರಣಾಗಿದ್ದು, ಇನ್ಮುಂದೆ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಪ್ರತಿಜ್ಞೆ ಕೂಡ ಮಾಡಿದ್ದಾರೆ. ಶಾಮ್ಲಿಯಲ್ಲಿ ಕೂಡ ಇದೇ ರೀತಿಯ ಘಟನೆ  ಸಂಭವಿಸಿದೆ, ಅಲ್ಲಿ ಗೋಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ 18 ಆರೋಪಿಗಳು ಗರ್ಹಿಪುಖಾಟಾ ಮತ್ತು ಥಾನಭವನ ಪೊಲೀಸ್ ಠಾಣೆಗಳಿಗೆ ಹೋಗಿ ಶರಣಾಗಿದ್ದಾರೆ.. ಹನಿ ಅಲಿಯಾಸ್ ಹಿಮಾಂಶು ಗುಂಡು ಹಾರಿಸಬೇಡಿ ಎಂದು ಭಿತ್ತಿಪತ್ರವನ್ನು ಕೊರಳಿಗೆ ಏರಿಸಿಕೊಂಡು ಬಂದು ಶರಣಾಗಿದ್ದಾನೆ. ಇನ್ನು ಈ ಪ್ರಕ್ರಿಯೆಯ ನಡುವೆಯೂ 2 ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮಾಡಲಾಗಿದ್ದರೆ, 10 ಮಂದಿಯನ್ನು ಸ್ವತಃ ಪೊಲೀಸರು ಬಂಧಿಸಿದ್ದಾರೆ.

Uttar Pradesh ಮದರಸಾಗಳಲ್ಲಿ ಇನ್ನು ಮುಂದೆ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ!

ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕಾರ ತೆಗೆದುಕೊಳ್ಳುವ ಮುನ್ನ ಕೂಡ ಇಂಥದ್ದೇ ಒಂದು ಘಟನೆ ನಡೆದಿದೆ.  ಪ್ರತಾಪ್‌ಗಢ್ ರೈಲ್ವೆ ನಿಲ್ದಾಣದ (Pratapgarh Railway Station)ಬಳಿ ಶೌಚಾಲಯವನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿದ್ದ ಎಂದು ಆರೋಪಿಸಲಾಗಿತ್ತು. ಮಹಿಳೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ(medical test) ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.

Uttar Pradesh ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

ಆತ ತನ್ನ ಮನೆಯಲ್ಲಿ ಇಲ್ಲದ ಕಾರಣ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ಹುಡುಕಲು ವಿಫಲವಾದ ಕಾರಣ, ಅವರು ಅವರ ಮನೆಯ ಹೊರಗೆ ಬುಲ್ಡೋಜರ್ ಅನ್ನು ನಿಲ್ಲಿಸಿದರು ಮತ್ತು ಆರೋಪಿಯು 24 ಗಂಟೆಗಳ ಒಳಗೆ ಶರಣಾಗದಿದ್ದರೆ, ಅವರ ಮನೆಯನ್ನು ನೆಲಸಮ ಮಾಡುವುದಾಗಿ ಅವರ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. ಪೊಲೀಸರು ನೀಡಿದ ಈ ಎಚ್ಚರಿಕೆ ಆರೋಪಿಯನ್ನು ಹುಡುಕಲು ಸರಿಯಾದ ಮಾರ್ಗ ತೋರಿಸಿದೆ. ಅತ ತಾನು ಇರುವ ಪ್ರದೇಶದ ಬಗ್ಗೆ ಮಾಹಿತಿ ನೀಡಿದ್ದರಿಂದ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios