ದಿಸ್ಪುರ್(ಜೂ.02): ಅಸ್ಸಾಂನ ಹಲವಾರು ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಕನಿಷ್ಟ 20 ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೇ ಕಾರಣದಿಂದ ಭೂಕುಸಿತ ಸಂಭವಿಸಿದೆ. 

ಅಸ್ಸಾಂನ ಬರಾಕ್ ಕಣಿವೆ ಪ್ರದೇಶದಲ್ಲಿ ಸಂಭವಿಸಿದೆ. ಇವರಲ್ಲಿ ಅನೇಕ ಮಂದಿ ದಕ್ಷಿಣ ಅಸ್ಸಾಂನ ಮೂರು ಪ್ರತ್ಯೇಕ ಜಿಲ್ಲೆಯ, ಪ್ರತ್ಯೇಕ ಮೂರು ಕುಟುಂಬದವರೆಂದು ತಿಳಿದು ಬಂದಿದೆ. ಕಚಾರ್‌ ಜಿಲ್ಲೆಯಲ್ಲಿ ಏಳು ಮಂದಿ, ಹೈಲಾಕಾಂಡಿ ಜಿಲ್ಲೆಯ ಏಳು ಮಂದಿ ಹಾಗೂ ಕರೀಂಗಂಜ್‌ನ ಆರು ಮಂದಿ ಮೃತಪಟ್ಟಿದ್ದಾರೆ.

ಈ ದುವಘಡದಲ್ಲಿ ಅನೇಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಆಸು ಪಾಸಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಇನ್ನು ಈ ಪ್ರದೇಶಗಳಲ್ಲಿ ಮಳೆಯಿಂದಾಗಿ ಪ್ರತಿ ವರ್ಷ ಭೂಕುಸಿತ ಸಂಭವಿಸುತ್ತದೆ ಎನ್ನಲಾಗಿದೆ.