* ದೇಶದಲ್ಲಿ ಅಗತ್ಯವಿರುವಷ್ಟುಕೊರೋನ ಲಸಿಕೆ ಲಭ್ಯ* ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ* 2-3 ರಾಜ್ಯಕ್ಕೆ ಸೀಮಿತ ಕಾಂಗ್ರೆಸ್‌ಗೆ ಅಜೀರ್ಣ: ಪ್ರಧಾನಿ ಮೋದಿ ವ್ಯಂಗ್ಯ!

ನವದೆಹಲಿ(ಜು.21): ದೇಶದಲ್ಲಿ ಅಗತ್ಯವಿರುವಷ್ಟುಕೊರೋನ ಲಸಿಕೆ ಲಭ್ಯವಿದೆ. ಆದರೆ ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಲಸಿಕೆ ಲಭ್ಯತೆ ಬಗ್ಗೆ ಯಾರಿಗೂ ಆತಂಕ ಬೇಡ. ನಮಗೆ ಬೇಕಾದಷ್ಟು ಲಸಿಕೆ ದಾಸ್ತಾನು ಇದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ, ಜನರಿಗೆ ಪರಿಣಾಮಕಾರಿಯಾಗಿ ಲಸಿಕೆ ತಲುಪುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

ರಾಷ್ಟ್ರದ ರಾಜಧಾನಿಯಲ್ಲಿ ಶೇ.20ರಷ್ಟುಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಸಿಗದಿರುವುದು ದುರದೃಷ್ಟಕರ ಎಂದು ದಿಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜನರು ಬಿಜೆಪಿಯನ್ನು ಎರಡನೇ ಬಾರಿಯೂ ದಾಖಲೆಯ ಅಂತರದಲ್ಲಿ ಅಧಿಕಾರಕ್ಕೆ ತಂದಿದ್ದನ್ನು ಕೇವಲ 2-3 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ . ದಾಖಲೆಯ ಅಂತರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಅನುಭವಿಸಿದ ಕಷ್ಟಅವರಿಗೆ ಅರ್ಥವಾಗುವುದಿಲ್ಲ ಎಂದು ಟೀಕಿಸಿದರು.