Punjab Elections: ಪಂಜಾಬ್‌ನ 'ಡೇರಾ' ಪೊಲಿಟಿಕ್ಸ್, ದಲಿತ ಮತಗಳು ಬೇಕಾದರೆ ಇವರ 'ಆಶೀರ್ವಾದ' ಬೇಕೇ ಬೇಕು!

* ರಂಗೇರಿದ ಪಂಜಾಬ್ ಚುನಾವಣಾ ಅಖಾಡ

* ರಾಜಕೀಯ ಪಕ್ಷಗಳಿಂದ ಬಿರುಸಿನ ಪ್ರಚಾರ

* ಪಂಜಾಬ್ ಚುನಾವಣೆಯಲ್ಲಿ ಮಹತ್ವ ಪಡೆದುಕೊಂಡ ಡೇರಾ ಪೊಲಿಟಿಕ್ಸ್

Assembly Elections 2022 Dera Politics In Punjab to get Dalit votes pod

ಪ್ರಶಾಂತ್ ನಾಥು, ಇಂಡಿಯಾ ಗೇಟ್

ಚಂಡೀಗಢ(ಫೆ.16): ಒಂದು ಕಾಲದಲ್ಲಿ  ಗುರು ನಾನಕ ರು ಹಿಂದೂ ಧರ್ಮದ ಕಟ್ಟಳೆ ಗಳಿಂದ ಮೇಲು ಕೀಳು ಗಳ ಅಸ್ಪ್ರಶ್ಯತೆ ಇಂದ  ರೋಸಿ ಹೋಗಿ ಕೆಲ ಸಾಮಾಜಿಕ ಸುಧಾರಣೆ ಗಳನ್ನು ತರಲು ಮೂರ್ತಿ ಪೂಜೆ ಇಲ್ಲದ ಪವಿತ್ರ ಗ್ರಂಥ ವನ್ನೇ ಪೂಜಿಸುವ ಸಿಖ್ ಮತದ ಸ್ಥಾಪನೆ ಮಾಡಿದರು .

ಕಾಲ ಕ್ರಮೇಣ ಮೊಗಲರ ಅನ್ಯ ಧರ್ಮೀಯರ ಆಕ್ರಮಣ ಮತಾಂತರ ದೌರ್ಜನ್ಯ ಜಾಸ್ತಿ ಆದಾಗ ಅದೇ ಹಿಂದೂ ಧರ್ಮದ ರಕ್ಷಣೆ ಗಾಗಿ ಗುರು ಗೋವಿಂದ ಸಿಂಗರು ಸಿಖ್ ರನ್ನು ಧರ್ಮ ಯುದ್ಧಕ್ಕಾಗಿ ತಯಾರು ಮಾಡಿದರು.

ಆದರೆ ಏನೇ ಆದರೂ ಭಾರತೀಯರ ಮನಸ್ಸಿನಲ್ಲಿ ಈ ಮೇಲು ಜಾತಿ ಕೀಳು ಜಾತಿ ತೊಡೆದು ಹಾಕುವುದು ಕಷ್ಟ ನೋಡಿ.ಹೀಗಾಗಿ ಗುರುದ್ವಾರಾ ಗಳಲ್ಲಿ ಜಮೀನು ಹೊಂದಿದ ಜಾಟ್ ಸಿಖ್ಖರ ಪ್ರಾಬಲ್ಯ ಹೆಚ್ಚಾಯಿತೆ ಹೊರತು ಸಾಮಾಜಿಕ ವಾಗಿ ಕೆಳ ಸಮುದಾಯ ಗಳಿಂದ ಸಿಖ್ ರಾಗಿದ್ದ ಸಮುದಾಯಗಳು ಗುರುದ್ವಾರಾ ದಲ್ಲಿ ಬರೀ ಸೇವೆಯ ಕೆಲಸಗಳಿಗೆ ಸೀಮಿತರಾದರು.ಆಗ ಹುಟ್ಟಿಕೊಂಡಿದ್ದೇ ಡೇರಾ ಗಳು .ಅಂದರೆ ನಮ್ಮ ಮಠ ಗಳು ಆಶ್ರಮಗಳಿಗೆ ಪರ್ಷಿಯನ್ ಭಾಷೆಯಲ್ಲಿ ಡೇರಾ ಎಂದು ಕರೆಯುತ್ತಾರೆ.

ಸಣ್ಣ ರಾಜ್ಯಗಳಲ್ಲಿ ಬಿಜೆಪಿಯೇ ಕಾಂಗ್ರೆಸ್ ಮಯ

 ಡೇರಾ ಸಚ್ಛಾ ಸೌದಾ ರಾಧೋ ಸಾಮಿ ಸತ್ಸಂಗ ದಾದಾಮಾಮಿ ತಸ್ಕಲ್ ನಾಮಧಾರಿ ಡೇರಾ ದಿವ್ಯ ಜ್ಯೋತಿ ಡೇರಾ ಹೀಗೆ ಪಂಜಾಬ್ ನ 13 ಸಾವಿರ ಹಳ್ಳಿಗಳಲ್ಲಿ 9000 ಡೇರಾ ಗಳಿವೆ.ಪಂಜಾಬ್ ನಲ್ಲಿ ಹಿಂದೂ ಮತ್ತು ಸಿಖ್ ರಲ್ಲಿ ಸೇರಿ 33 ಪ್ರತಿಶತ ದಲಿತರಿದ್ದು ಇವರೆಲ್ಲ ಈ ಡೇರಾ ಗಳ ಭಕ್ತರು.ಪ್ರವಚನ ಕೀರ್ತನೆ ನಶೆ ಬಿಡಿಸುವುದು ಆಸ್ಪತ್ರೆ ಶಾಲೆ ಹೀಗೆ ಅನೇಕಾನೇಕ ಚಟುವಟಿಕೆ ನಡೆಸುವ ಈ ಡೇರಾ ಗಳಿಗೆ ಕೋಟ್ಯಾ0ತರ ರೂಪಾಯಿ ದೇಣಿಗೆ ಹರಿದು ಬರುತ್ತದೆ.ಒಂದು ರೀತಿಯಲ್ಲಿ ಈ ಡೇರಾ ಗಳನ್ನು ನಡೆಸುವ ಬಾಬಾ ಗಳು ಎಂದರೆ ಆಧುನಿಕ ಭಗವಂತನ ಅವತಾರ.ಮಕ್ಕಳು ಹುಟ್ಟಿದರು ಬಾಬಾ ಕೃಪೆ ಮದುವೆ ಆಗಲು ಬಾಬಾ ಕೃಪೆ ಓದಿದ ಹುಡುಗರು ಕೆನಡಾ ಕ್ಕೆ ಕಳುಹಿಸಲು ಬಾಬಾ ಕೃಪೆ ಬೇಕು.ಹೀಗಾಗಿ ತಳ ಸಮುದಾಯದ ಜನ ಮಾನಸ ಕ್ಕೆ ಈ ಬಾಬಾ ಗಳು ಬೇಕೇ ಬೇಕು.

ಸಹಜ ವಾಗಿ ಈ ಬಾಬಾ ಗಳ ಪ್ರಭಾವ ಚುನಾವಣೆ ಮೇಲು ಬೀಳುತ್ತದೆ.ದಲಿತ ಹಿಂದುಳಿದ ಸಮುದಾಯದ ಮತ ಗಳು ಬೀಳಬೇಕೆಂದರೆ ಈ ಡೇರಾ ಗಳ ಬಾಬಾ ಗಳ ಆಶೀರ್ವಾದ ಬೇಕೇ ಬೇಕು. ನೋಡಿ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ರಾಧೋ ಸಾಮಿ ಸತ್ಸಂಗದ ಮುಖ್ಯಸ್ಥ ರನ್ನು ಭೇಟಿ ಆಗಿದ್ದಾರೆ.ಅಷ್ಟೇ ಅಲ್ಲ ದಿಲ್ಲಿಯ ರವಿದಾಸ ಮಂದಿರಕ್ಕೆ ಹೋಗಿ ಸ್ವತಃ ಭಕ್ತರೊಂದಿಗೆ ಕುಳಿತು ಭಜನೆ ಕೀರ್ತನೆ ಯಲ್ಲಿ ಪಾಲ್ಗೊಂಡಿದ್ದಾರೆ.  ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್  ಸಿಂಗ್ ಚನ್ನಿ ರವಿದಾಸಿ ಡೇರಾ ಕ್ಕೆ ಹೋಗಿ ಒಂದು ದಿನ ಅಲ್ಲೇ  ಉಳಿದು ಬಾಬಾ ಗೆ ನಾನೆಷ್ಟು ವಿಧೇಯ ಎಂದು ತೋರಿಸಿ ಬಂದಿದ್ದಾರೆ.

ಓವೈಸಿ ಪಡೆಯುವ ಒಂದೊಂದೂ ಮತವೂ ಅಖಿಲೇಶ್ ಪಾಲಿಗೆ ನಷ್ಠ

4 ವರ್ಷ ಜೈಲಿನಲ್ಲಿದ್ದ ಬಾಬಾ ರಾಮ್ ರಹೀಮ್ ಚುನಾವಣೆಗೆ ಒಂದು ವಾರ ಇರುವಾಗ ಪೆರೋಲ್ ಮೇಲೆ ಬಿಡುಗಡೆ ಆಗಿ ಬಂದಿದ್ದಾರೆ.ಸುಖಬೀರ್ ಸಿಂಗ್ ಬಾದಲ್ ಜಾಟ್ ಶಿಖರ ಬಾಬಾ ಗಳ ಆಶೆರ್ವಾದ ತೆಗೆದುಕೊಳ್ಳಲು ಓಡಾಡುತ್ತಿದ್ದಾರೆ.ಒಟ್ಟಿನಲ್ಲಿ ವೋಟು ಗಿಟ್ಟಿಸಲು ಈ ಬಾಬಾ ಗಳು ಬೇಕು.ಅದು ಹೇಗೆಂದರೆ ಚುನಾವಣೆಯಲ್ಲಿ ಬಾಬಾ ಗಳು ಭಕ್ತರಿಂದ ವೋಟು ಹಾಕಿಸುತ್ತಾರೆ.ಅಧಿಕಾರ ಹಿಡಿದ ರಾಜಕಾರಣಿ ಗಳು ಆನಂತರ ಬಾಬಾ ಗಳ ಸಾಮ್ರಾಜ್ಯಕ್ಕೆ ರಾಜಕೀಯ ಆಶ್ರಯ ನೀಡುತ್ತಾರೆ.
 

Latest Videos
Follow Us:
Download App:
  • android
  • ios