Asianet Suvarna News Asianet Suvarna News

ವಿಧಾನಸಭೆ ಚುನಾವಣೆ: ಅಸ್ಸಾನಂಲ್ಲಿ ದಾಖಲೆ, ಇನ್ನುಳಿದ ರಾಜ್ಯದಲ್ಲಿ ಸರಾಸರಿ ಮತದಾನ!

ಚುನಾವಣೆ ದೃಷ್ಟಿಯಿಂದ ಇಂದು(ಏ.06) ಆಯೋಗಕ್ಕೆ  ಅತೀ ದೊಡ್ಡ ದಿನವಾಗಿತ್ತು. ಕಾರಣ 4 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆದಿತ್ತು. ಇದರಲ್ಲಿ ಅಸ್ಸಾಂನಲ್ಲಿ ದಾಖಲೆಯ ಮತದಾನವಾಗಿದೆ. ಇನ್ನುಳಿದ ರಾಜ್ಯಗಳಲ್ಲೂ ಗರಿಷ್ಠ ಮತದಾನವಾಗಿದೆ. 

Assembly Election 2021 Assam records 82 percent voter turnout other state bellow 70 ckm
Author
Bengaluru, First Published Apr 6, 2021, 11:17 PM IST

ನವದೆಹಲಿ(ಏ.06):  ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. 475 ಕ್ಷೇತ್ರಗಳಿಗೆ ಒಟ್ಟು 1,53,538 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ. ಇದರಲ್ಲಿ ಅಸ್ಸಾಂನಲ್ಲಿ ನಡೆದ 3ನೇ ಹಾಗೂ ಅಂತಿಮ ಹಂತದಲ್ಲಿ ಶೇಕಡಾ 82.33 ರಷ್ಟು ಮತದಾನವಾಗಿದೆ. ಈ ಮೂಲಕ ಗರಿಷ್ಠ ಮತದಾನದ ದಾಖಲೆ ಬರೆದಿದೆ.  

'ಒಡೆದಾಳುವ ಮಾತಿನಿಂದ ಮುಸ್ಲಿಂ ಮತಗಳು ನಿಮ್ಮಿಂದ ದೂರವಾಗಿವೆ'

ಪಂಚ ರಾಜ್ಯಗಳಲ್ಲಿ ಇಂದು(ಏ.06) ನಡೆದ ಮತದಾನದ ವಿವರ:
ಅಸ್ಸಾಂ =81.66%
ಕೇರಳ  = 69.94%
ತಮಿಳುನಾಡು  = 65.19%
ಪಶ್ಚಿಮ ಬಂಗಾಳ  =77.68%
ಪುದುಚೇರಿ  = 77.90%

ಕೇರಳ, ತಮಿಳುನಾಡು ಹಾಗೂ ಪುದುಚೇರಿ ಒಂದೇ ಹಂತದಲ್ಲಿ ಮತದಾನ ಮುಕ್ತಾಯಗೊಂಡಿದೆ. ಅಸ್ಸಾಂ 3ನೇ ಹಂತದೊಂದಿಗೆ ಅಂತ್ಯಗೊಂಡಿದೆ. ಆದರೆ ಪಶ್ಚಿಮ ಬಂಗಾಳ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಇನ್ನು 5 ಹಂತದ ಮತದಾನ ಬಾಕಿ ಇದೆ.

Follow Us:
Download App:
  • android
  • ios