ಗುವಾಹಟಿ(ಏ.08): ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಎರಡನೇ ಕೊರೋನಾ ಅಲೆ ಒಂದೆಡೆ ಜನರ ನಿದ್ದೆಗೆಡಿಸಿದ್ದರೆ, ಅತ್ತ ಕಾರ್ಮಿಕರು ಮತ್ತೊಂದು ಲಾಕ್‌ಡೌನ್ ಗೋಷಣೆಯಾಘುವ ಭಯದಿಂದ ಮತ್ತೆ ತಮ್ಮೂರಿನತ್ತ ಹೆಜ್ಜೆ ಹಾಕಿದ್ದಾರೆ. ರಾಜ್ಯದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿವೆ. ಹೀಗಿರುವಾಗ ಎಲ್ಲಾ ರಾಜ್ಯಗಳು ಕೊರೋನಾ ನಿಯಂತ್ರಿಸುವ ಸಲುವಾಗಿ ವಿಭಿನ್ನ ಕ್ರಮಗಳನ್ನು ಜಾರಿಗೊಳಿಸುತ್ತಿವೆ. ಸದ್ಯ ಅಸ್ಸಾಂ ಸರ್ಕಾರ ಮಹಾರಾಷ್ಟ್ರ ಹಾಗು ಕರ್ನಾಟಕದಿಂದ ಬರುವ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿದೆ.

ಹೌದು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ ಭಾರೀ ಆತಂಕ ಸೃಷ್ಗಟಿಸಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಸಂಖ್ಯೆ ಹಾಗೂ ಈ ಸೋಂಕಿನಿಂತ ಮೃತಪಡುತ್ತಿರುವವರ ಸಂಖ್ಯೆಯೂ ಏರಲಾರಂಭಿಸಿದೆ. ಇದನ್ನು ಗಮನಿಸಿರುವ ಅಸ್ಸಾಂ ಸರ್ಕಾರ ಈ ಎರಡು ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರು ತಮ್ಮೊಂದಿಗೆ ಕೊರೋನಾ ನೆಗೆಟಿವ್ ಟೆಸ್ಟ್‌ ವರದಿಯನ್ನು ಕಡ್ಡಾಯವಾಗಿ ತರಬೇಕೆಂದು ಆದೇಶಿಸಿದೆ. ಜೊತೆಗೆ ಅಸ್ಸಾಂಗೆ ತಲುಪಿದ ಬಳಿಕವೂ ಟೆಸ್ಟ್‌ ಮಾಡಿಸುವುದು ಕಡ್ಡಾಯವಾಗಿದೆ.

ಅದರಲ್ಲೂ ವಿಶೇಷವಾಗಿ ವಿಮಾನ ಮೂಲಕ ಪ್ರಯಾಣಿಸುವವರಿಗೆ ಮತ್ತಷ್ಟು ಈ ಕ್ರಮ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಇಂದು 6976 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 4991 ಪ್ರಕರಣಗಳು ಬೆಂಗಳೂರಿದ್ದಾಗಿವೆ.