ಅಸ್ಸಾಂ(ಎ.02): ಅಸ್ಸಾಂ ಎರಡನೇ ಹಂತದ ಚುನಾವಣೆಯಲ್ಲಿ ಎಡವಟ್ಟಾಗಿದೆ ಅನ್ನೋದು ಮನಗಂಡಿರುವ ಚುನಾವಣಾ ಆಯೋಗ ಇದೀಗ ಅಸ್ಸಾಂ ರತಬಾರಿ ಕ್ಷೇತ್ರಕ್ಕೆ ಮರುಚುನಾವಣೆಗೆ ಆದೇಶಿಸಿದೆ. ಇದಕ್ಕೆ ಕಾರಣ ಬಿಜೆಪಿ ನಾಯಕನ ಕಾರಿನಲ್ಲಿ ಪತ್ತೆಯಾದ ಮತ ಯಂತ್ರ.

ಬಿಜಿಪಿ ಅಭ್ಯರ್ಥಿ ಕಾರಿನಲ್ಲಿ ಸಿಕ್ತು EVM ಯಂತ್ರ: ವಿಡೀಯೋ ವೈರಲ್

2ನೇ ಹಂತದ ಚುನಾವಣೆ ದಿನ(ಎ.01) ಬಿಜೆಪಿ ನಾಯಕ ಕೃಷ್ಣೇಂದು ಪೌಲ್ ಕಾರಿನಲ್ಲಿ EVM ಪತ್ತೆಯಾಗಿತ್ತು. ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ಎಸೆಗಿದೆ. ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರಸ್ ಸೇರಿದಂತೆ ಇತರ ಪಕ್ಷಗಳು ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಚುನಾವಣಾ ಆಯೋಗ ನಾಲ್ವರು ಚುನಾವಣಾ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರ ಜೊತೆಗೆ ರತಬಾರಿ ಕ್ಷೇತ್ರಕ್ಕೆ ಮರುಚುನಾವಣೆ ಘೋಷಿಸಿದೆ.

2ನೇ ಹಂತದ ಚುನಾವಣೆ: ಬಂಗಾಳದಲ್ಲಿ ಶೇ.80, ಅಸ್ಸಾಂನಲ್ಲಿ ಶೇ.75ರಷ್ಟು ಮತದಾನ!

ಮತಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ಮತಗಟ್ಟೆ 149ರಲ್ಲಿ ಮರುಚುನಾವಣೆಗೆ ಆದೇಶಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. 

ಮತಗಟ್ಟೆಗೆ ಇವಿಎಂ ಸಾಗಿಸುವ ವೇಳೆ ಅಧಿಕಾರಿಗಳ ವಾಹನ ಕೆಟ್ಟು ಹೋಗಿದೆ. ಹೀಗಾಗಿ ಹಿಂಬದಿಯಿಂದ ಬಂದ ಕೃಷ್ಣೇಂದ್ರ ಪೌಲ್ ಕಾರಿನ ಸಹಾಯ ಪಡೆದಿದ್ದಾರೆ. ಮತಗಟ್ಟೆ ಚುನಾವಣಾ ಅಧಿಕಾರಿ, ಪೊಲೀಸ್ ಪೇದೆ ಹಾಗೂ ಹೋಂ ಗಾರ್ಡ್ ಕೆಟ್ಟು ಹೋಗಿರುವ ಕಾರಿನಿಂದ ಇವಿಎಂಯನ್ನು ಕೃಷ್ಣೇಂದ್ರ ಕಾರಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಆದರೆ ಸಾಮಾಜಿಕ ಜಾಲಾತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಹಾಗೂ ಇತರ ಪಕ್ಷ ಸ್ಥಳಕ್ಕಾಗಮಿಸಿ ಕಾರು ತಡೆದು ಹಿಂಸಾಚಾರ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.