Asianet Suvarna News

ದೇವಸ್ಥಾನದ 5 ಕಿ.ಮೀ ವ್ಯಾಪ್ತಿಯೊಳಗೆ ಗೋ ಮಾಂಸ ನಿಷೇಧ; ಸಂರಕ್ಷಣಾ ಮಸೂದೆ ಮಂಡನೆ!

  • ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ 2021 ಅನ್ನು ಮಂಡನೆ
  • ಮಂದಿರ 5 ಕಿ.ಮೀ ವ್ಯಾಪ್ತಿಯೊಳಗೆ ಎಲ್ಲವೂ ನಿಷೇಧ
  • ಗೋ ಸಾಗಾಟ ಸೇರಿದಂತೆ ಸಂರಕ್ಷಣೆಗೆ ಕಠಿಣ ನಿಯಮಕ್ಕೆ ಮುಂದಾಗ ಸಿಎಂ
Assam CM Himanta Biswa Sarma tabled the Assam Cattle Preservation Bill 2021 ckm
Author
Bengaluru, First Published Jul 12, 2021, 8:56 PM IST
  • Facebook
  • Twitter
  • Whatsapp

ಅಸ್ಸಾಂ(ಜು.12): ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸದ್ದು ಮಾಡುತ್ತಿರುವ ಗೋ ಸಂರಕ್ಷಣಾ ಕಾಯ್ದೆ ಇದೀಗ ಅಸ್ಸಾಂನಲ್ಲಿ ಸದ್ದು ಮಾಡುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ 2021 ಮಂಡಿಸಿದ್ದಾರೆ. ಈ ಮಸೂದೆ ಇತರ ರಾಜ್ಯಗಳ ಮಸೂದೆಗಿಂತ ಭಿನ್ನವಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.

ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ!

ಜಾನುವಾರುಗಳ "ವಧೆ, ಬಳಕೆ, ಅಕ್ರಮ ಸಾಗಣೆ" ಯನ್ನು ನಿಯಂತ್ರಿಸುವ ಉದ್ದೇಶದಿಂದ ಹಿಮಂತ ಬಿಸ್ವಾ ಶರ್ಮಾ ನೂತನ ಗೋ ಸಂರಕ್ಷಣಾ ಮಸೂದೆ ಮಂಡಿಸಿದ್ದಾರೆ. ಈ ಮಸೂದಯಲ್ಲಿ ದೇವಸ್ಥಾನದ 5 ಕಿ.ಮೀ ವ್ಯಾಪ್ತಿಯಲ್ಲಿ ಕಸಾಯಿ ಖಾನೆ, ಗೋ ಮಾಂಸ ಮಾರಾಟ ಸೇರಿದಂತೆ ಯಾವುದೇ ಗೋ ವಿರೋಧಿ ಚಟುವಟಿಕೆಗೆ ಅವಕಾಶವಿಲ್ಲ. 

 

ಹಿಮಂತ ಬಿಸ್ವಾ ಶರ್ಮಾ ಮಂಡಿಸಿದ ನೂತನ ಗೋ ಸಂರಕ್ಷಣಾ ಕಾಯ್ದೆ ಅಂಗೀಕಾರವಾದರೆ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 1950 ರದ್ದಾಗಲಿದೆ.  ಪ್ರಸ್ತಾವಿತ ಕಾನೂನು ಮಾನ್ಯ ದಾಖಲೆಗಳಿಲ್ಲದೆ ದನಗಳನ್ನು ಅಂತರರಾಜ್ಯಕ್ಕೆ ಸಾಗಿಸುವುದನ್ನು ನಿಷೇಧಿಸುತ್ತದೆ. "ಗೋಮಾಂಸ ರಹಿತ ಸಮುದಾಯಗಳು" ವಾಸಿಸುವ ಪ್ರದೇಶಗಳಲ್ಲಿ ಮತ್ತು ಯಾವುದೇ ದೇವಾಲಯದ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸುತ್ತದೆ.

ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ! ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ.

ಬಾಂಗ್ಲಾದೇಶ ಜೊತೆ ಬರೋಬ್ಬರಿ 263 ಕಿಲೋಮೀಟರ್ ಉದ್ದದ ಗಡಿಯನ್ನು ಅಸ್ಸಾಂ ಹಂಚಿಕೊಂಡಿದೆ. ಹೀಗಾಗಿ ಅಸ್ಸಾಂನಿಂದ ಜಾನುವಾರು ಕಳ್ಳಸಾಗಾಣೆ ಪ್ರಕರಣ ವರದಿಯಾಗುತ್ತಲೇ ಇದೆ. ಈ ರೀತಿಯ ಕಳ್ಳಸಾಗಾಣೆ ತಡೆಯಲು ಈ ಮಸೂದೆ ನೆರವಾಗಲಿದೆ. 1950 ರ ಕಾಯಿದೆಯಲ್ಲಿ "ಜಾನುವಾರು ಹತ್ಯೆ, ಬಳಕೆ ಮತ್ತು ಸಾಗಣೆಯನ್ನು ನಿಯಂತ್ರಿಸಲು" ಸಾಕಷ್ಟು ಕಾನೂನು ನಿಬಂಧನೆಗಳಿಲ್ಲ ಮತ್ತು ಆದ್ದರಿಂದ ಹೊಸ ಶಾಸನವನ್ನು ಜಾರಿಗೊಳಿಸುವುದು ಕಡ್ಡಾಯವಾಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ನೂತನ ಗೋ ಸಂರಕ್ಷಣಾ ಮಸೂದೆಗೆ ಅಸ್ಸಾಂನಲ್ಲಿ ಪರ ವಿರೋಧ ವ್ಯಕ್ತವಾಗಿದೆ. ನೂತನ ಮಸೂದೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಕಾಂಗ್ರೆಸ್‌ನ ದೇಬಬ್ರತಾ ಸೈಕಿಯಾ ಹೇಳಿದ್ದಾರೆ.

Follow Us:
Download App:
  • android
  • ios