ಸ್ಟೇಜಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದು, ಕೊನೆಯುಸಿರೆಳೆದ 18ರ ಯುವತಿ!
ಅಸ್ಸಾಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 18 ವರ್ಷದ ವಿದ್ಯಾರ್ಥಿನಿ ವೇದಿಕೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಲಕ್ಷ್ಮೀ ಪೂರ್ಣಿಮಾ ಆಚರಣೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ನವದೆಹಲಿ (ಅ.19): ಸೃಜನಾ ದೇವಿ ಎಂದು ಗುರುತಿಸಲಾದ 18 ವರ್ಷದ ಕಾಲೇಜು ವಿದ್ಯಾರ್ಥಿನಿ ಅಸ್ಸಾಂನ ಗರುಡುಬಾದ ದೆಕಿಯಾಜುಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು ಕಂಡಿದ್ದಾಳೆ. ಲೋಕನಾಯಕ್ ಅಮಿಯಾ ಕುಮಾರ್ ದಾಸ್ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಯುವತಿ ಸೃಜನಾ ದೇವಿ, ಲಕ್ಷ್ಮೀ ಪೂರ್ಣಿಮಾ ಆಚರಣೆಯ ಅಂಗವಾಗಿ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಳು.ವೇದಕೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಆಕೆ ಕುಸಿದು ಬಿದ್ದಿದ್ದಾಳೆ.ಆಕೆಯನ್ನು ಎಚ್ಚರಿಸುವ ಪ್ರಯತ್ನ ನಡೆಯಿತಾದರೂ ಇದಕ್ಕೆ ಫಲ ಸಿಗಲಿಲ್ಲ. ಕೊನೆಗೆ ಆಕೆ ಸಾವು ಕಂಡಿದ್ದಾಳೆ ಎಂದು ಘೋಷಿಸಲಾಯಿತು.
ಸೃಜನ್ ಅವರು ಉತ್ಸಾಹಿ ಯುವ ಪ್ರತಿಭೆಯಾಗಿದ್ದರು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದು. ಆಕೆಯ ಅಕಾಲಿಕ ನಿಧನದಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೇಲೆ ಕರಿನೆರಳು ಬಿದ್ದಿದ್ದು, ಸ್ಥಳೀಯ ಸಮುದಾಯದಲ್ಲಿ ಶೋಕ ಮೂಡಿದೆ. ಇಂದು ಅವರ ಅಂತಿಮ ಸಂಸ್ಕಾರವನ್ನು ಬೆಲ್ಸಿರಿ ನದಿಯ ದಡದಲ್ಲಿ ನಡೆಸಲಾಗಿದೆ., ಕುಟುಂಬಸ್ಥರು, ಸ್ನೇಹಿತರು ಮತ್ತು ಸ್ಥಳೀಯರು ಕಣ್ಣೀರಿನ ಬೀಳ್ಕೊಟ್ಟರು. ಸೃಜನಾ ದೇವಿ ಹಠಾತ್ ಸಾವಿನ ಬೆನ್ನಲ್ಲಿಯೇ, ಮುಂದೆ ಇಂಥ ಘಟನೆಗಳನ್ನು ತಡೆಗಟ್ಟಲು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಮಯೋಚಿತ ವೈದ್ಯಕೀಯ ವ್ಯವಸ್ಥೆಗಳು ಇರಬೇಕು ಎಂದು ಆಗ್ರಹಿಸಲಾಗಿದೆ.
1.10 ಲಕ್ಷ ಕೋಟಿಯ ಒಡೆಯ ಆದರೂ ಸ್ಮಾರ್ಟ್‌ಫೋನ್ ಇಲ್ಲ, 6 ಲಕ್ಷದ ಕಾರ್‌ನಲ್ಲಿ ಓಡಾಟ!
ಆಕೆಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರಲಿಲ್ಲ. ಜ್ವರ ಕೂಡ ಬಂದಿರಲಿಲ್ಲ. ಹೀಗೆ ಹಠಾತ್ ಆಗಿ ಸಾವು ಕಂಡಿದ್ದಕ್ಕೆ ನಮಗೆ ಅಚ್ಚರಿಯಾಗಿದೆ.ಇದಕ್ಕೂ ಮುನ್ನ ಅನೇಕ ಬಾರಿ ಆಕೆ ವೇದಿಕೆಯಲ್ಲಿ ಡಾನ್ಸ್ ಮಾಡಿದ್ದಳು. ಈ ರೀತಿಯಲ್ಲಿ ಆಕೆ ಸಾವು ಕಾಣ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇಂದು ನಮಗೆಲ್ಲರಿಗೂ ದುಃಖದ ದಿನ ಎಂದು ಸ್ಥಳೀಯರು ಹೇಳಿದ್ದಾರೆ. ಅಕ್ಟೋಬರ್ 15 ರಂದು ಈ ಘಟನೆ ನಡೆದಿದೆ. ಬಿದ್ದ ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಭಾರತದ ಮಾಜಿ ಚೆಸ್ ಆಟಗಾರ, ಈಗ ದೇಶದ ಹೊಸ ಶತಕೋಟಿ ಕುಬೇರ!