Asianet News Survey: ದೇಶಾದ್ಯಂತ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯೇ ಟಾಪ್‌ ಚಾಯ್ಸ್‌

ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ನಡೆಸಿದ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಡಿಜಿಟಲ್ ಸಮೀಕ್ಷೆಯು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬಹುಪರಾಕ್‌ ಎಂದಿದೆ.

Asianet News MOTN Mood of the Nation Survey Narendra Modi top choice for PM post across India san

ನವದೆಹಲಿ (ಮಾ.27): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ಅವಧಿಯ ಅಧಿಕಾರಾವಧಿಯಲ್ಲಿ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ನಾಯಕರಾಗಿ ತಮ್ಮ ಸ್ಥಾನವನ್ನು ಮತ್ತಷ್ಟು  ಭದ್ರಪಡಿಸಿಕೊಂಡಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ನಡೆಸಿದ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಡಿಜಿಟಲ್ ಸಮೀಕ್ಷೆಯು ತೋರಿಸಿದೆ. ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಸೇರಿದಂತೆ ಬಹು ಭಾಷೆಗಳಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ನಡೆಸಿದ ಸಮಗ್ರ ಸಮೀಕ್ಷೆಯು ಮಾರ್ಚ್ 13 ರಿಂದ ಮಾರ್ಚ್ 27 ರವರೆಗೆ 7,59,340 ಪ್ರತಿಕ್ರಿಯೆಗಳನ್ನು ಗಳಿಸಿತು. ಮುಂದಿನ ಐದು ವರ್ಷಗಳಲ್ಲಿ ಯಾವ ಸರ್ಕಾರ ಆಡಳಿತದಲ್ಲಿರಬೇಕು ಎನ್ನುವ ವಿಚಾರದಲ್ಲಿ ತನ್ನ ನಿರ್ಧಾರವನ್ನು ಬಹಿರಂಗಪಡಿಸಿದೆ. ಶೇ. 78.6ರಷ್ಟು ಜನರು ಎನ್‌ಡಿಎ ಪರವಾಗಿ ಮತ ಚಲಾಯಿಸಿದ್ದರೆ, ಶೇ. 21.4 ಮಂದಿ ಇಂಡಿಯಾ ಮೈತ್ರಿಯನ್ನು ಬೆಂಬಲಿಸಿದ್ದಾರೆ.

ಮುಂದಿನ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಶೇ.51.6ರಷ್ಟು ಮಂದಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ರಾಹುಲ್‌ ಗಾಂಧಿ ಅವರು ಶೇ. 46.45ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇವರ ಹೆಚ್ಚಿನ ಮತಗಳು ಒಂದೇ ರಾಜ್ಯದಿಂದ ಅಂದರೆ, ಕೇರಳದಿಂದ ಮಾತ್ರವೇ ಬಂದಿವೆ. ಕೇರಳದಲ್ಲಿ ಶೇ. 50.29ರಷ್ಟು ಮಂದಿ ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಇನ್ನು ಕೇರಳದಂಥ ರಾಜ್ಯದಲ್ಲಿ ಶೇ. 40ಕ್ಕೂ ಅಧಿಕ ಮಂದಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಆಗಬೇಕು ಎಂದಿರುವುದು ಕುತೂಹಲಕಾರಿಯಾಗಿದೆ. ಉಳಿದಂತೆ ಮೋದಿಗೆ ದೇಶಾದ್ಯಂತ ಅಗಾಧ ಬೆಂಬಲ ಸಿಕ್ಕಿದೆ. ಭಾರತದ ಉಳಿದ ಪ್ರದೇಶಗಳು, ದಕ್ಷಿಣದ ರಾಜ್ಯಗಳಿಂದ ಶೇ. 80ರಷ್ಟು ಮಂದಿ ಅವರನ್ನು ಬೆಂಬಲಿಸಿದ್ದಾರೆ.



ಸಮೀಕ್ಷೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 51.07 ರಷ್ಟು ಜನರು ನರೇಂದ್ರ ಮೋದಿ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಆದರೆ ಶೇಕಡಾ 42.97 ರಷ್ಟು ವ್ಯತಿರಿಕ್ತ ಅಭಿಪ್ರಾಯವನ್ನು ಹೊಂದಿದ್ದಾರೆ. ಇದಲ್ಲದೆ, ಮೋದಿ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಗ್ರಹ ಮಾಡಿದೆ ಎಂದು 60.4 ಪ್ರತಿಶತದಷ್ಟು ಜನರು ನಂಬಿದ್ದಾರೆ. ಹೆಚ್ಚುವರಿಯಾಗಿ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 56.39 ರಷ್ಟು ಜನರು ಮೋದಿ ಸರ್ಕಾರದ ವಿದೇಶಾಂಗ ನೀತಿ ವಿಧಾನವನ್ನು ಅನುಮೋದಿಸಿದ್ದಾರೆ.

Asianet News MOTN: ಇಂಡಿಯಾ ಮೈತ್ರಿಗಿಂತ ಎನ್‌ಡಿಎ ಬೆಸ್ಟ್‌, ಕಾಂಗ್ರೆಸ್‌ಗೆ ವೋಟ್‌ ಗ್ಯಾರಂಟಿ ಕೊಡ್ತಾ BJNY

ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ನಿಭಾಯಿಸುವ ವಿಷಯದಲ್ಲಿ, ಸಮೀಕ್ಷೆಯ ಪ್ರಕಾರ 65.08 ಪ್ರತಿಶತದಷ್ಟು ಜನರು ಮೋದಿ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿದ್ದಾರೆ. ಆದರೆ 21.82 ಪ್ರತಿಶತ ಜನರು ಬೀಜಿಂಗ್‌ ವಿಚಾರದಲ್ಲಿ ಸರ್ಕಾರ ತನ್ನ ಸರಿಯಾದ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ. ಇದಲ್ಲದೆ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಾಗತಿಕ ಕ್ರಮದಲ್ಲಿ ದೇಶದ ಸ್ಥಾನಮಾನವು ಸುಧಾರಿಸಿದೆ ಎಂದು 79.27 ಪ್ರತಿಶತದಷ್ಟು ಜನರು ನಂಬಿದ್ದಾರೆ.

ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ವಿವರಗಳು

ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ಹುದ್ದೆಗೆ ಆದ್ಯತೆಯ ರಾಷ್ಟ್ರೀಯ ನಾಯಕರಾಗಿ ಅವರ ಸ್ಥಾನವನ್ನು ಡೇಟಾಸೆಟ್ ಮತ್ತಷ್ಟು ಗಟ್ಟಿಗೊಳಿಸುತ್ತದೆ. 2024ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್‌ 19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ.
 

Latest Videos
Follow Us:
Download App:
  • android
  • ios