Asianet Suvarna News Asianet Suvarna News

ಓದುಗರ ಬೆಳವಣಿಗೆಯಲ್ಲಿ ಶೇ.110ರಷ್ಟು ಪ್ರಗತಿ, ದೇಶದ ಟಾಪ್ 15 ವೆಬ್‍‌ಸೈಟ್‌ನಲ್ಲಿ ಏಷ್ಯಾನೆಟ್ ನ್ಯೂಸ್‌ ನಂ.1

ಪ್ರಸಕ್ತ ವರ್ಷದಲ್ಲಿ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ದಾಖಲೆಯ ಪ್ರಗತಿ ಕಾಣುವ ಮೂಲಕ ಹೊಸ ಇತಿಹಾಸ ರಚಿಸಿದೆ. ವರ್ಷದಿಂದ ವರ್ಷದ ಓದುಗರ ಪ್ರಗತಿಯಲ್ಲಿ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಶೇಕಡಾ 110ರಷ್ಟು ಪ್ರಗತಿ ಸಾಧಿಸಿದೆ.
 

Asianet News Digital clocks 110 Percentage YoY audience growth highest amongst Top 15 india Digital News ckm
Author
First Published May 23, 2024, 5:22 PM IST

ನವದೆಹಲಿ(ಮೇ.23) ನೇರ, ದಿಟ್ಟ, ನಿರಂತರ ಸುದ್ದಿ ಮೂಲಕ ಜನರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. ದೇಶದ ಟಾಪ್ 15 ಡಿಜಿಟಲ್ ನ್ಯೂಸ್ ಪೈಕಿ ಏಷ್ಯಾನೆಟ್ ನ್ಯೂಸ್.ಕಾಂ ನಂಬರ್ 1 ಆಗಿ ಹೊರಹೊಮ್ಮಿದೆ. ವರ್ಷದಿಂದ ವರ್ಷಕ್ಕೆ  ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಶೇಕಡಾ 110ರಷ್ಟು ಪ್ರಗತಿ ಕಂಡಿದೆ. ಇದು ಓದುಗರು ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ. 

ಕಾಮ್‌ಸ್ಕೋರ್(ComScore)ವರದಿಯಲ್ಲಿ ಏಷ್ಯಾನೆಟ್ ನ್ಯೂಸ್.ಕಾಂ  2024ರ ಆರ್ಥಿಕ ವರ್ಷದಲ್ಲಿ ಶೇಕಡಾ 110ರಷ್ಟು ಓದುಗರ ಪ್ರಗತಿ ಸಾಧಿಸಿದೆ. ಈ ಮೂಲಕ ದೇಶದ ಟಾಪ್ 15 ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನಲ್ಲಿ ಏಷ್ಯಾನೆಟ್ ನ್ಯೂಸ್.ಕಾಂ ಮೊದಲ ಸ್ಥಾನ ಪಡೆದುಕೊಂಡಿದೆ. ಏಷ್ಯಾನೆಟ್ ನ್ಯೂಸ್.ಕಾಂ ಸುದ್ದಿ ವೆಬ್‌ಸೈಟ್ ಏಷ್ಯಾನೆಕ್ಸ್  ಡಿಜಿಟಲ್ ಟೆಕ್ನಾಲಜೀಸ್(Asianxt Digital Technologies) ಅಂಗವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲೀಷ್, ಮಳೆಯಾಳಂ, ಬಾಂಗ್ಲಾ, ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಈ ಸಾಧನೆಯಿಂದ ಏಷ್ಯಾನೆಟ್ ನ್ಯೂಸ್.ಕಾಂ ದೇಶದ ಮುಂಚೂಣಿಯ ಡಿಜಿಟಲ್ ನ್ಯೂಸ್ ಪಬ್ಲೀಶರ್ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಪುಟ ವೀಕ್ಷಣೆಯಲ್ಲಿ ಮಾಸಿಕ ಸಕ್ರೀಯ ಓದುಗರ ಸಂಖ್ಯೆಯಲ್ಲಿ ಶೇಕಡಾ 80ರಷ್ಟು ಏರಿಕೆ ಕಂಡಿದೆ. ಈ ವಿಭಾಗದಲ್ಲಿ ಎರಡನೇ ಅತೀ ಗರಿಷ್ಠ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  

ಈ ಯಶಸ್ಸಿನ ಹಿಂದೆ ಶ್ರಮಿಸಿದ Asianxt ಟೆಕ್ನಾಲಜೀಸ್ ಸಿಒಒ ಸಮರ್ಥ್ ಶರ್ಮಾ, ಪ್ರಬಲ ಪ್ರಾದೇಶಿಕ ಡಿಜಿಟಲ್ ನ್ಯೂಸ್‌ನಿಂದ ಇದೀಗ ಪ್ರಮುಖ ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನತ್ತ ದಾಪುಗಾಲು ಇಟ್ಟಿದ್ದೇವೆ. ನಮ್ಮ ಮಾಧ್ಯಮ ಸಂಸ್ಥೆ ವರ್ಷದಿಂದ ವರ್ಷದ ಬೆಳವಣಿಗೆಯಲ್ಲಿ ಅಸಾಧಾರಣ ಸಾಧನೆಗೆ ಕೈಗನ್ನಡಿಯಾಗಿದೆ ಎಂದಿದ್ದಾರೆ. ಇದರ ಕ್ರೆಡಿಟ್ ನಮ್ಮೆಲ್ಲಾ ಓದುಗರು, ತಂಡದ ಸದಸ್ಯರು, ಪಾಲುದಾರರಿಗೆ ಸಲ್ಲಲಿದೆ. ಹಲವು ಸವಾಲುಗಳು, ಮಾರುಕಟ್ಟೆಯಲ್ಲಿನ ಪರಿಸ್ಥಿತಿ, ಆಲ್ಗರಿದಮ್‌ನಲ್ಲಿನ ಮಹತ್ವದ ಬದಲಾವಣೆ, ಹಲವು ನವೀಕರಣಗಳ ನಡುವೆಯೂ ಸಂಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಈ ಮೈಲಿಗಲ್ಲು ಸ್ಥಾಪಿಸಿದೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಎಂದು ಸಮರ್ಥ್ ಶರ್ಮಾ ಹೇಳಿದ್ದಾರೆ.  

ನಮ್ಮ ಡಿಜಿಟಲ್ ವ್ಯವಹಾರದಲ್ಲಿ ಮತ್ತೊಂದು ವರ್ಷವನ್ನು ನಾವು ಯಶಸ್ಸಿಯಾಗಿಸಿದ್ದೇವೆ. ಇದು ನಮ್ಮ ಅಚಲ ಬದ್ಧತೆಯ ಸಾಕ್ಷಿ ಎಂದು  Asianxt ಟೆಕ್ನಾಲಜೀಸ್ ಸಿಇಒ ನೀರಜ್ ಕೊಹ್ಲಿ ಹೇಳಿದ್ದಾರೆ. ಸವಾಲು, ಬದಲಾಗುತ್ತಿರುವ ಅಗತ್ಯತೆಗಳ ತಕ್ಕಂತೆ ಪೂರೈಕೆಯ ಬದ್ಧತೆಯನ್ನು ಈ ಸಾಧನೆ ಹೇಳುತ್ತಿದೆ. ದೇಶಾದ್ಯಂತ ನಮ್ಮ ಮಾಧ್ಯಮ ಸಂಸ್ಥೆಯ ಪ್ರೇಕ್ಷಕರು ಬೆಳೆಯುತ್ತಿದ್ದಾರೆ. ಇದರೊಂದಿಗೆ ಡಿಜಿಟಲ್ ನ್ಯೂಸ್ ಪಬ್ಲೀಶರ್ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೇವೆ. ಈ ಮೂಲಕ ಡಿಜಿಟಲ್ ಜಗತ್ತಿನಲ್ಲಿ ಮುಂಚೂಣಿಯ ನ್ಯೂಸ್ ಪಬ್ಲಿಶರ್ ಆಗಿ ನಮ್ಮ ಸಾಮರ್ಥ್ಯವನ್ನು ಬಲಪಡಿಸಿದ್ದೇವ ಎಂದು ನೀರಜ್ ಕೊಹ್ಲಿ ಹೇಳಿದ್ದಾರೆ.  

Asianxt Digital Technologies ಸಂಸ್ಥೆ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರು ಹಾಗೂ ವೀಕ್ಷಕರನ್ನು ಹೊಂದಿದ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಡಿಜಿಟಲ್, ಟಿವಿ ಮಾಧ್ಯಮ, ಪತ್ರಿಕೆ ಹಾಗೂ ಮ್ಯೂಸಿಕ್ ಪ್ಲಾಟ್‌ಫಾರ್ಮ್ ಮೂಲಕ ಪ್ರತಿ ತಿಂಗಳು 110 ಮಿಲಿಯನ್ ಪ್ರೇಕ್ಷಕರನ್ನು ಹೊಂದಿದೆ. ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಬಾಂಗ್ಲಾ, ತಮಿಳು, ಮಲೆಯಾಳಂ, ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏಷ್ಯಾನಕ್ಸ್  30 ಮಿಲಿಯನ್ ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಹೊಂದಿದೆ.  

Latest Videos
Follow Us:
Download App:
  • android
  • ios