* ವಿಶ್ವದಲ್ಲಿ 5ನೇ ಅತಿ ಉದ್ದದ ಟ್ರ್ಯಾಕ್‌ ಇದು* ಏಷ್ಯಾದ ಅತಿ ಉದ್ದದ ವಾಹನ ಪರೀಕ್ಷಾ ಟ್ರ್ಯಾಕ್‌ಗೆ ಚಾಲನೆ* ಇಂದೋರ್‌ನಲ್ಲಿ 11.3 ಕಿ.ಮೀ ಉದ್ದದ ಟ್ರ್ಯಾಕ್

ಇಂದೋರ್‌(ಜೂ.30): ಎಲ್ಲಾ ರೀತಿಯ ಹೊಸ ಮಾದರಿಯ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚಲು ನಿರ್ಮಿಸಲಾಗಿರುವ ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ 5ನೇ ಅತಿದೊಡ್ಡ ವಾಹನ ಮತ್ತು ಉಪಕರಣ ಪರೀಕ್ಷಾ ಟ್ರ್ಯಾಕ್‌ಗೆ ಮಂಗಳವಾರ ಇಲ್ಲಿ ಚಾಲನೆ ನೀಡಲಾಯಿತು.

Scroll to load tweet…

ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಇದು ಆತ್ಮನಿರ್ಭರ ಭಾರತದ ಕನಸು ಕಂಡ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಈಡೇರಿಸುವಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದರು.

ನ್ಯಾಟ್ರ್ಯಾಕ್ಸ್‌ (ದ ನ್ಯಾಷನಲ್‌ ಆಟೋಮೋಟಿವ್‌ ಟೆಸ್ಟ್‌ ಟ್ರ್ಯಾಕ್‌) ಎಂದು ಹೆಸರಿಸಲಾಗಿರುವ ಈ ಘಟಕವು ಇಂದೋರ್‌ ನಗರದಿಂದ 50 ಕಿ.ಮೀ ದೂರದ ಪೀಥಂಪುರ ಎಂಬಲ್ಲಿ 2960 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇದರಲ್ಲಿ ದ್ವಿಚಕ್ರ ವಾಹನಗಳಿಂದ ಹಿಡಿದು ಭಾರೀ ಸಾಮಥ್ಯದ ಎಲ್ಲಾ ರೀತಿಯ ವಾಹನಗಳ ಸಾಮರ್ಥ್ಯ ಪರೀಕ್ಷಿಸುವ ಸೌಕರ್ಯಗಳಿವೆ.

Scroll to load tweet…
YouTube video player

ಹೇಗಿದೆ ಟ್ರ್ಯಾಕ್‌?:

ಇಲ್ಲಿ ಒಟ್ಟು 14 ರೀತಿಯ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ 4 ಪಥಗಳ ಟ್ರ್ಯಾಕ್‌ ಎಲ್ಲಾ ರೀತಿಯ ವಾಹನಗಳ ಪರೀಕ್ಷೆ ಮತ್ತು ವಿದೇಶದಿಂದ ಆಮದು ಮಾಡಿಕೊಂಡ ಕಾರುಗಳ ಪರೀಕ್ಷೆಗೆ ಬಳಸಬಹುದು. ಇನ್ನು ಹೊಸ ಹೈಸ್ಪೀಡ್‌ ಟ್ರ್ಯಾಕ್‌ ಅಂಡಾಕಾರದಲ್ಲಿದ್ದು, 16 ಮೀಟರ್‌ ಅಗಲವಿದೆ.

ಎಲ್ಲಾ ಟ್ರ್ಯಾಕ್‌ಗಳು 250 ಕಿ.ಮೀ ನ್ಯೂಟ್ರಲ್‌ ಸ್ಪೀಡ್‌ ಮತ್ತು ತಿರುವಿನಲ್ಲಿ 375 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ರೀತಿಯಲ್ಲಿ ನಿರ್ಮಾಣಗೊಂಡಿವೆ.