ಜೋಧ್‌ಪುರ ಜೈಲಿನದ್ದ ಅಸಾರಾಂ ಬಾಪೂಗೆ ಕೊರೋನಾ, ಆಸ್ಪತ್ರೆಗೆ ದಾಖಲು!
ಅಸಾರಾಂ ಬಾಪೂಗೆ ಕೊರೋನಾ| ಉಸಿರಾಟದ ಸಮಸ್ಯೆ ಬಾಪೂ ಆಸ್ಪತ್ರೆಗೆ ದಾಖಲು| ಅಪ್ರಾಪ್ತ ಬಾಲಕಿ ಅತ್ಯಾಛಾಋ ಪ್ರಕರಣದಲ್ಲಿ ಜೈಲು ಸೇರಿದ್ದ ಅಸಾರಾಂ
ಜೋಧ್‌ಪುರ(ಮೇ.06): 80 ವರ್ಷದ ಅಸಾರಾಂ ಬಾಪೂಗೆ ಕೊರೋನಾ ಸೋಂಂಕು ತಗುಲಿದೆ. ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿದ್ದ ಅಸಾರಾಂ ಬಾಪೂಗೆ ಉಸಿರಾಟದ ಸಮಸ್ಯೆ ಹಾಗೂ ಚಡಪಡಿಕೆ ಕಂಡು ಬಂದ ಹಿನ್ನೆಲೆ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಬುಧವಾರ ಸಂಜೆ ವರದಿ ಬಂದ ಬೆನ್ನಲ್ಲೇ ಅವರನ್ನು ಮಹಾತ್ಮ ಗಾಂಧಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣದ ದೋಷಿಯಾಗಿದ್ದ ಅಸಾರಾಂ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಇನ್ನು ಅಸಾರಾಂ ಆರೋಗ್ಯ ಹದಗೆಟ್ಟ ಹಿನ್ನೆಲೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಆಸ್ಪತ್ರೆ ಬಳಿ ಜಮಾಯಿಸಿದೆ.
"
ಅಸಾರಾಂ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಫೆಬ್ರವರಿಯಲ್ಲೂ ತಮಗೆ ಚಡಪಡಿಕೆಯುಂಟಾಗುತ್ತಿದೆ ಎಂದು ಅವರು ದೂರಿದ್ದರು. ಮೂರು ದಿನಗಳ ಹಿಂದೆ ಉಸಿರಾಡಲು ಕಷ್ಟವಾಗುತ್ತಿದೆ ಎಂದಿದ್ದರು. ಹೀಗಾಗಿ ಟೆಸ್ಟ್ ಮಾಡಲಾಗಿತ್ತು. ಸದ್ಯ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿದೆ.
2013ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಾಕೊಂಡಿದ್ದರು
ಅಸಾರಾಂ ಬಾಪೂ ವಿರುದ್ದ 2013ರಲ್ಲಿ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಅಲ್ಲದೇ ನರಬಲಿ ಹಾಗೂ ಹತ್ಯೆ ಆರೋಪಗಳೂ ಕೇಳಿ ಬಂದಿದ್ದವು. ಇದಕ್ಕೂ ಮೊದಲು ಅವರ ಪ್ರವಚನ ಕೇಳಲು ಲಕ್ಷಾಂತರ ಮಂದಿ ಆಗಮಿಸುತ್ತಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona