ಹೈದರಾಬಾದ್(ಜ.22): ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧಿಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ, ಸವಾಲು ಸ್ವೀಕರಿಸಿರುವುದಾಗಿ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.

ಸಿಎಎ ಕುರಿತು ಈ ಗಡ್ಡದಾರಿ ವ್ಯಕ್ತಿಯೊಂದಿಗೆ ಚರ್ಚೆಗೆ ಬನ್ನಿ ಎಂದು ಒವೈಸಿ  ಗೃಹ ಸಚಿವರಿಗೆ ಬಹಿರಂಗ ಸವಾಲು ಹಾಕಿದ್ದು, ಎನ್‌ಆರ್‌ಸಿ, ಎನ್‌ಪಿಆರ್ ಎಲ್ಲ ವಿಷಯಗಳ ಕುರಿತೂ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

ಅಮಿತ್ ಶಾ ಸಿಎಎ ಕುರಿತು  ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಅವರ ಬದಲು ಈ ಗಡ್ಡದಾರಿ ವ್ಯಕ್ತಿಯೊಂದಿಗೆ ಮಾತ್ರ ಚರ್ಚೆ ಮಾಡಿ ಎಂದು ಒವೈಸಿ   ಸವಲು ಹಾಕಿದ್ದಾರೆ.

ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಕುರಿತು ತಾವು ಆಳವಾದ ಜ್ಞಾನ ಹೊಂದಿದ್ದು, ಕೇಂದ್ರ ಗೃಹ ಸಚಿವರು ತಮ್ಮೊಂದಿಗೆ ಚರ್ಚೆ ಮಾಡುವುದು ಒಳಿತು ಎಂದು ಒವೈಸಿ ಹೇಳಿದ್ದಾರೆ.

ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಜಾರಿಯಿಂದ ಈ ದೇಶದ ಮುಸ್ಲಿಮರು ಸಂಕಷ್ಟದಲ್ಲಿ ಸಿಲುಕಲಿದ್ದು, ತಾವು ಅವರ ಪ್ರತಿನಿಧಿಯಾಗಿ ದೇಶದ ಗೃಹ ಸಚಿವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಒವೈಸಿ ಸ್ಪಷ್ಟಪಡಿಸಿದರು.

ಸಿಎಎ ಜಾರಿ ಸಿದ್ಧ, 3 ತಿಂಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧ: ಅಮಿತ್ ಶಾ!

ನಿನ್ನೆ(ಜ.22) ಲಕ್ನೋದಲ್ಲಿ ಸಿಎಎ ಪರ ಅಭಿಯಾನದಲ್ಲಿ ಮಾತನಾಡಿದ್ದ ಅಮಿತ್ ಶಾ, ಸಿಎಎ ವಿರೋಧಿಗಳೊಂದಿಗೆ ತಾವು ಬಹಿರಂಗ ಚರ್ಚೆ ಮಾಡಲು ಸಿದ್ಧ ಎಂದ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ