Asianet Suvarna News Asianet Suvarna News

ಮತ್ತೆ ಲಾಕ್‌ಡೌನ್‌ ಭೀತಿ: ತವರಿನತ್ತ ಕೂಲಿ ಕಾರ್ಮಿಕರ ದೌಡು!

ಮತ್ತೆ ಲಾಕ್‌ಡೌನ್‌ ಭೀತಿ: ತವರಿನತ್ತ ಕೂಲಿ ಕಾರ್ಮಿಕರ ದೌಡು| ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಏಕಾಏಕಿ ಹೆಚ್ಚಿದ ಜನಸಂದಣಿ

As fresh lockdown looms many migrants head home pod
Author
Bangalore, First Published Apr 6, 2021, 7:46 AM IST

ನವದೆಹಲಿ/ಮುಂಬೈ(ಏ.06): ದೇಶಾದ್ಯಂತ ಕೊರೋನಾ 2ನೇ ಅಲೆ ಹೆಚ್ಚಾಗಿ, ಮತ್ತೆ ಲಾಕ್ಡೌನ್‌ ಆತಂಕ ಕವಿಯುತ್ತಿರುವ ಬೆನ್ನಲ್ಲೇ, ವಲಸೆ ಕಾರ್ಮಿಕರು ಮತ್ತೆ ಆತಂಕಕ್ಕೆ ಗುರಿಯಾಗಿದ್ದಾರೆ. ಕಳೆದ ಲಾಕ್ಡೌನ್‌ ವೇಳೆ ಇನ್ನಿಲ್ಲದ ಸಂಕಷ್ಟಎದುರಿಸಿ ನೂರಾರು ಕಿ.ಮೀ ನಡೆದೇ ತವರಿಗೆ ತಲುಪಿದ್ದು ವಲಸೆ ಕಾರ್ಮಿಕರು ಮತ್ತೆ ಅಂಥ ಪರಿಸ್ಥಿತಿ ಎದುರಾಗುವುದನ್ನು ತಡೆಯಲು ಈಗಲೇ ತವರಿನತ್ತಿ ಮುಖಮಾಡುವ ಕೆಲಸ ಆರಂಭಿಸಿದ್ದಾರೆ.

ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಮುಂಬೈ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ವಲಸೆ ಕಾರ್ಮಿಕರು ಮತ್ತೆ ಭಾರೀ ಪ್ರಮಾಣದಲ್ಲಿ ತವರಿನತ್ತ ತೆರಳುತ್ತಿರುವ ಬೆಳವಣಿಗೆ ಕಂಡುಬಂದಿದೆ. ಪರಿಣಾಮ ಬಸ್‌ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಏಕಾಏಕಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಾನಾ ರೀತಿಯ ಕೋವಿಡ್‌ ನಿಯಂತ್ರಣ ಕ್ರಮ ಘೋಷಿಸಲಾಗಿದೆ. ಮತ್ತೊಂದೆಡೆ ಪ್ರಧಾನಿ ಮೋದಿ ಅವರು ಏ.8ರಂದು ಸಭೆ ಕರೆದಿರುವುದು ಕೂಡಾ ಜನರಲ್ಲಿ ಆತಂಕ ಹೆಚ್ಚಿಸಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios