ಕೊರೋನಾ ಸೋಂಕು ಆತಂಕಕಾರಿಯಾಗಿ ಏರಿಕೆ| ಕೇರಳದಿಂದ ವಿಮಾನದಲ್ಲಿ ನರ್ಸ್‌ಗಳ ಕರೆಸಿಕೊಂಡ ತೆಲಂಗಾಣ ಆಸ್ಪತ್ರೆಗಳು!| ತೆಲಂಗಾಣದಲ್ಲಿ ನಿತ್ಯ ಕನಿಷ್ಠ 1000 ಕೊರೋನಾ ಸೋಂಕು ಪ್ರಕರಣಗಳು ಪತ್ತೆ
ಹೈದರಾಬಾದ್: ಕೊರೋನಾ ಸೋಂಕು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಎರಡು ಖಾಸಗಿ ಆಸ್ಪತ್ರೆಗಳು ಕೇರಳದ ತಿರುವನಂತಪುರಂನಿಂದ 50 ನರ್ಸ್‌ಗಳನ್ನು ವಿಮಾನದ ಮೂಲಕ ಕರೆಸಿಕೊಂಡಿವೆ.
ತೆಲಂಗಾಣದಲ್ಲಿ ನಿತ್ಯ ಕನಿಷ್ಠ 1000 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು ಬಹುತೇಕ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ತರಬೇತಿ ಹೊಂದಿದ ನರ್ಸ್‌ಗಳ ಕೊರತೆ ಉಂಟಾಗಿದೆ. ಹೀಗಾಗಿ ನರ್ಸ್‌ಗಳಿಗೆ ದುಪ್ಪಟ್ಟು ವೇತನ ನೀಡಲೂ ಆಸ್ಪತ್ರೆಗಳು ಸಿದ್ಧವಾಗಿವೆ.
ಕಾಂಗ್ರೆಸ್ ಹಿರಿಯ ನಾಯಕನಿಗೂ ತಗುಲಿದ ಕೊರೋನಾ ಸೋಂಕು..!
‘ಕಾರ್ಪೋರೇಟ್ ಆಸ್ಪತ್ರೆಯೊಂದು ನರ್ಸ್‌ಗಳನ್ನು ಒದಗಿಸುವಂತೆ 10-15 ಬಾರಿ ಕರೆ ಮಾಡುತ್ತಿದೆ. ತಿಂಗಳಿಗೆ 45000-50000 ವೇತನ ನೀಡುವುದಾಗಿಯೂ ಹೇಳುತ್ತಿವೆ. ವಾಸ್ತವವಾಗಿ ಇದು ಮಾಮೂಲಿ ವೇತನಕ್ಕಿಂತ ಮೂರು ಪಟ್ಟು ಅಧಿಕ’ ಎಂದು ತೆಲಂಗಾಣದ ನರ್ಸಿಂಗ್ ಆಫೀಸರ್ಸ್ ಅಸೋಸಿಯೇಷನ್ ಸಾಮಾನ್ಯ ಕಾರ‍್ಯದರ್ಶಿ ಲಕ್ಷ್ಮಣ್ ರುದಾವತ್ ತಿಳಿಸಿದ್ದಾರೆ.
