ಸಿಎಂ ಕೇಜ್ರಿವಾಲ್‌ಗೆ ಹೊಸ ಸಂಕಷ್ಟ, ಲೈಂಗಿಕ ಕಿರುಕುಳ ಆರೋಪಿ ಫೈಲ್ ತಡೆದ ಆರೋಪ!
ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲು ಪಾಲಾಗಿದ್ದಾರೆ. ಬಂಧನದಿಂದ ಮುಕ್ತಿಯಾಗಲು ಹೋರಾಟ ನಡೆಸುತ್ತಿರುವ ಕೇಜ್ರಿವಾಲ್‌ಗ ಹೊಸ ಸಂಕಷ್ಟ ಶುರುವಾಗಿದೆ. ಕೇಜ್ರಿವಾಲ್ ಲೈಂಗಿಕ ಕಿರುಕುಳ ಆರೋಪಿಯ ಫೈಲ್ ತಡೆದಿದ್ದಾರೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ(ಮಾ.28) ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಎಪ್ರಿಲ್ 1ವರೆಗೆ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಇತ್ತ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಬಂಧನದಿಂದ ಬಿಡುಗಡೆಯಾಗಲು ಕೇಜ್ರಿವಾಲ್ ಕಾನೂನು ಹೋರಾಟ ಚುರುಕುಗೊಳಿಸಿದ್ದಾರೆ. ಈ ತೆಲೆನೋವಿನ ನಡುವೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಗಂಭೀರ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳ ಆರೋಪಿಯ ಫೈಲನ್ನು ಕೇಜ್ರಿವಾಲ್ ತಡೆದಿದ್ದಾರೆ ಎಂದಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಮೆಡಿಲಕ್ ಕಾಲೇಜಿನಲ್ಲಿನ ಲೈಂಗಿಕ ಕಿರುಕುಳ ಪ್ರಕರಣ ಭಾರಿ ಸದ್ದು ಮಾಡಿತ್ತು. ಈ ಕುರಿತು ವಿದ್ಯಾರ್ಥಿಗಳು ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಕಾಲೇಜಿನ ಪ್ರಾಂಶುಪಾಲರನ್ನು ವರ್ಗಾವಣೆಗೊಳಿಸಲು ಹೊರಡಿಸಿರುವ ಆದೇಶದ ಫೈಲನ್ನು ಅರವಿಂದ್ ಕೇಜ್ರಿವಾಲ್ ತಡೆದಿದ್ದಾರೆ. ಕಳೆದ 45 ದಿನಗಳಿಂದ ಕೇಜ್ರಿವಾಲ್ ಈ ಫೈಲ್ ತಡೆದಿದ್ದಾರೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆ, ಎಪ್ರಿಲ್ 1ವರೆಗೆ ಇಡಿ ಕಸ್ಟಡಿ ವಿಸ್ತರಿಸಿದ ಕೋರ್ಟ್!
ದೆಹಲಿ ಶಿಕ್ಷಣ ಸಚಿವ ಸೌರಬ್ ಭಾರದ್ವಾಜ್ ಎರಡು ದಿನಗಳ ಹಿಂದೆಷ್ಟೇ, ಮೆಡಿಕಲ್ ಕಾಲೇಜಿನ ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಲೆಫ್ಟಿನೆಂಟ್ ಗವರ್ನರ್ ಕ್ರಮ ಕೈಗೊಳ್ಳಬೇಕು. ಮೀನಾಮೇಷ ಎಣಿಸಬಾರದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ವಿಕೆ ಸಕ್ಸೇನ್ ಆರೋಪಿಯ ಟ್ರಾನ್ಸ್‌ಫರ್ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಫೆಬ್ರವರಿ 14, 2024ರಿಂದ ಲೈಂಗಿಕ ಪ್ರಕರಣ ಆರೋಪಿ ಪ್ರಾಂಶುಪಾಲರ ವರ್ಗಾವಣೆ ಫೈಲ್ ಕೇಜ್ರಿವಾಲ್ ಬಳಿ ಇದೆ. ಸರಿಸುಮಾರು 45 ದಿನಗಳಿಂದ ಈ ಫೈಲ್‌ನ್ನು ಕೇಜ್ರಿವಾಲ್ ತನ್ನ ಬಳಿ ಇಟ್ಟುಕೊಂಡಿದ್ದಾರೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ. ಮಾರ್ಚ್ 7 ಹಾಗೂ ಮಾರ್ಚ್ 13ರಂದು ಈ ಕುರಿತು ಕೇಜ್ರಿವಾಲ್‌ಗೆ ರಿಮೈಂಡರ್ ಕಳುಹಿಸಲಾಗಿದೆ. ಆದರೆ ಇದುವರೆಗೂ ಕೇಜ್ರಿವಾಲ್ ಈ ಫೈಲ್ ತನ್ನ ಬಳಿಯೇ ಇಟ್ಟುಕೊಂಡು ಮೌನಕ್ಕೆ ಜಾರಿದ್ದಾರೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.
ಕೇಜ್ರಿವಾಲ್ ಸಂಕಷ್ಟಗಳು ಹೆಚ್ಚಾಗುತ್ತಿದೆ. ಮಾರ್ಚ್ 21ರಂದು ಇಡಿ ಅಧಿಕಾರಿಗಳು ಕೇಜ್ರಿವಾಲ್ ಬಂಧಿಸಿದ್ದರು. ಬಳಿಕ ದೆಹಲಿಯ ರೇಸ್ ಅವೆನ್ಯೂ ಕೋರ್ಟ್ ಮಾರ್ಚ್ 28ರ ವರೆಗೆ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಿದ ಇಡಿ ಅಧಿಕಾರಿಗಳು ಮತ್ತೆ ಏಪ್ರಿಲ್ 1ವರೆಗೆ ಕಸ್ಟಡಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಸಿಎಂ ಕೇಜ್ರಿವಾಲ್ ಸೆರೆಗೆ ಆಕ್ಷೇಪಿಸಿದ ಅಮೆರಿಕಕ್ಕೆ ಭಾರತ ತರಾಟೆ
ಇತ್ತ ತಮ್ಮ ಬಂಧನವೇ ಅಸಂವಿಧಾನಿಕ, ಕಾನೂನುಬಾಹಿರ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಲಾಗಿದೆ. ಆದರೆ ತೀರ್ಪನ್ನು ಏಪ್ರಿಲ್ 3ರಂದ ಪ್ರಕಟಿಲಿದೆ. ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಅನ್ನೋ ಕೇಜ್ರಿವಾಲ್ ಮನವಿ ತಿರಸ್ಕರಿಸಿರುವ ದೆಹಲಿ ಹೈಕೋರ್ಟ್, ಈ ಸಂಬಂಧ ಇಡಿ ಅಧಿಕಾರಿಗಳ ವಿವರಣೆ ಕೇಳಿದೆ.