ಅರುಣಾಚಲ ಚುನಾವಣೆ, ಫಲಿತಾಂಶಕ್ಕೂ ಮೊದಲೇ ಸಿಎಂ ಪೇಮಾ ಖಂಡು ಸೇರಿ 10 ಸ್ಥಾನ ಗೆದ್ದ ಬಿಜೆಪಿ!
ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ ಕಣದಲ್ಲಿ ಕೆಲ ಅಚ್ಚರಿಗಳು ನಡೆದಿದೆ.ಎಪ್ರಿಲ್ 19ಕ್ಕೆ ಮತದಾನ ನಡೆಯಲಿದೆ. ಆದರೆ ಮುಖ್ಯಮಂತ್ರಿ ಪೇಮಾ ಖಂಡು ಸೇರಿದಂತೆ 10 ಬಿಜೆಪಿ ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರುಣಾಚಲ ಪ್ರದೇಶ(ಮಾ.30) ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ಏರುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಏಪ್ರಿಲ್ 19ಕ್ಕೆ ಮತದಾನ ನಡೆಯಲಿದೆ. ನಾಮತ್ರ ಸಲ್ಲಿಕೆ ಅಂತ್ಯಗೊಂಡಿದೆ. ಚುನಾವಣೆಗೂ ಮೊದಲೇ ಅರುಣಾಚಲ ಮುಖ್ಯಮಂತ್ರಿ ಪೇಮಾ ಖಂಡು ಸೇರಿದಂತೆ 10 ಬಿಜೆಪಿ ಶಾಸಕರು ಯಾವುದೇ ಪ್ರತಿಸ್ಪರ್ಧಿ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 60 ಸ್ಥಾನಗಳ ಪೈಕಿ ಚುನಾವಣಾ ಹಾಗೂ ಫಲಿತಾಂಶಕ್ಕೂ ಮೊದಲೇ 10 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಸಾಧನೆ ಮಾಡಿದೆ.
ಪೇಮಾ ಖಂಡು ಜೊತೆಗೆ ಉಪಮುಖ್ಯಮಂತ್ರಿ ಚೌನ ಮೇಯ್ನ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಸಾಗಲೀ ಕ್ಷೇತ್ರದಿಂದ ರಾತು ತೆಚಿ, ತಾಲಿ ಕ್ಷೇತ್ರದಿಂದ ಜಿಕಕೆ ಟಾಕೂ, ತಲಿಹಾ ಕ್ಷೇತ್ರದಿಂದ ನ್ಯಾಟೋ ದುಕಾಮ್, ರೋಯಿಂಗ್ ಕ್ಷೇತ್ರದಿಂದ ಮುಚು ಮಿಥಿ, ಜಿರೋ ಹಪೋಲಿ ಕ್ಷೇತ್ರದಿಂದ ಹಗೆ ಅಪಾ, ಇಟನಗರ ಕ್ಷೇತ್ರದಿಂದ ತೆಚಿ ಕಸೋ, ಬೊಮ್ದಿಲಾ ಕ್ಷೇತ್ರದಿಂದ ಡೊಂಗ್ರು ಸೊಯಿಂಗ್ಜು ಹಾಗೂ ಹಯುಲಿಯಾಂಗ್ ಕ್ಷೇತ್ರದಿಂದ ದಾಸಂಗ್ಲೂ ಪುಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೊಂದೇ ತಿಂಗಳಲ್ಲಿ 4ನೇ ಬಾರಿ ಅರುಣಾಚಲ ನಮ್ಮದು ಎಂದ ಚೀನಾ!
ಮುಕ್ತೋ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಪೇಮಾ ಖಂಡು ವಿರುದ್ಧ ಯಾರೊಬ್ಬರು ಸ್ಪರ್ಧಿಸಿಲ್ಲ. ಇತ್ತ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಮಾಜಿ ಎಂಜಿನಿಯರ್, ಬಿಜೆಪಿ ಅಭ್ಯರ್ಥಿ ತೆಚಿ ರೊಟು ವಿರುದ್ಧವೂ ಯಾರೂ ಕೂಡ ಸ್ಪರ್ಧಿಸಿಲ್ಲ. ಹೀಗಾಗಿ 10 ಬಿಜೆಪಿ ಶಾಸಕರು ಅವಿರೋಧವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ 34 ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ಇನ್ನು ಕಾಂಗ್ರೆಸ್ ಮೈತ್ರಿ ಪಕ್ಷಗಲು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. 60 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ 41 ಸ್ಥಾನ ಗೆದ್ದು ಅಧಿಕಾರಕ್ಕೇರಿತ್ತು. ಪೇಮಾ ಖಂಡು ನೇತೃತ್ವದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ, ಕಾಂಗ್ರೆಸ್‌ಗೆ ಬೆಂಬಲ ನೀಡಿ ಸರ್ಕಾರ ರಚಿಸಿತ್ತು. 2016ರಲ್ಲಿ ಬೆಂಬಲ ವಾಪಸ್ ಪಡೆದು ಪೇಮಾ ಖಂಡು, ಪಾರ್ಟಿಯನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೊಂಡಿತ್ತು. 2019ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸಿದೆ.
ಚೀನಾಗೆ ಭಾರತ ಸಡ್ಡು : ಗಡಿಯಲ್ಲಿ ಡಜನ್‌ಗಟ್ಟಲೆ ಬಂಕರ್ ನಿರ್ಮಾಣ