ಮತ್ತೊಂದು ಬಾಲರಾಮನ ವಿಗ್ರಹ ಕೆತ್ತಿದ ಅರುಣ್: ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ಕೆತ್ತನೆ!
ಐತಿಹಾಸಿಕ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಮೈಸೂರು ಮೂಲದ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತೊಂದು ಚಿಕ್ಕ ಮೂರ್ತಿಯನ್ನು ಬಾಲರಾಮನ ಕೆತ್ತಿರುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆ (ಮಾ.24): ಐತಿಹಾಸಿಕ ರಾಮಮಂದಿರದ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಮೈಸೂರು ಮೂಲದ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತೊಂದು ಚಿಕ್ಕ ಮೂರ್ತಿಯನ್ನು ಬಾಲರಾಮನ ಕೆತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ಅದರ ಜೊತೆಯಲ್ಲಿ ತಾವು ಬಾಲರಾಮನ ಮೂರ್ತ ರೂಪ ಕೊಟ್ಟಿರುವ ಶಿಲೆಯ ಜೊತೆಗೆ ನಿಂತು ತೆಗೆಸಿಕೊಂಡಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಜನವರಿಯಲ್ಲಿ ಪ್ರಾಣಪ್ರತಿಷ್ಠಾಪನೆಯಾದ ಅಯೋಧ್ಯಾ ಬಾಲರಾಮನ ಮೂರ್ತಿಯನ್ನು ಅರುಣ್ ಯೋಗಿರಾಜ್‌ಹೆಗ್ಗಡ ದೇವನ ಕೋಟೆಯಲ್ಲಿ ಲಭ್ಯವಿರುವ ಕಪ್ಪುಶಿಲೆಯನ್ನು ಬಳಸಿ ಕೆತ್ತನೆ ಮಾಡಿದ್ದರು. ಬಳಿಕ ಅದನ್ನು ಸಮಿತಿ ಮೂರು ಬಾಲರಾಮನ ಶಿಲೆಗಳಲ್ಲಿ ಆಯ್ಕೆ ಮಾಡಿತ್ತು.
ಇದೇನು ಅಂತಾ ಗೆಸ್ ಮಾಡ್ತೀರಾ?: ಅರುಣ್ ಯೋಗಿರಾಜ್ ಬಾಲಕರಾಮನ ಕಣ್ಣುಗಳನ್ನು ಕೆತ್ತಿದ ಬೆಳ್ಳಿಯ ಸುತ್ತಿಗೆಯನ್ನು ಜನರಿಗೆ ಪರಿಚಯಿಸಿದ್ದಾರೆ. 'ಚಿನ್ನದ ಉಳಿ ಹೊಂದಿರುವ ಬೆಳ್ಳಿಯ ಸುತ್ತಿಗೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ. ಇದರಿಂದಲಾ ನಾನು ಅಯೋಧ್ಯೆಯ ರಾಮ ಲಲ್ಲಾನ (ನೇತ್ರೋನ್ಮಿಲನ) ದೈವಿಕ ಕಣ್ಣುಗಳನ್ನು ಕೆತ್ತಿದ್ದೇನೆ' ಎಂದು ಅರುಣ್ ಯೋಗಿರಾಜ್ ಬರೆದುಕೊಂಡಿದ್ದಾರೆ. ಇನ್ನು ಅರುಣ್ ಯೋಗಿರಾಜ್ ಹಂಚಿಕೊಂಡಿರುವ ಈ ಚಿತ್ರಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ಒಂದು ಸುತ್ತಿಗೆ ಭಗವಾನ್ ರಾಮನಿಗೆ ನ್ಯಾಯವನ್ನು ನೀಡಿದ್ದರೆ, ಇನ್ನೊಂದು ಸುತ್ತಿಗೆ ಭಗವಾನ್ ರಾಮನಿಗೆ ಹಾಗೂ ಸನಾತನ ಧರ್ಮಕ್ಕೆ ಗುರುತು ನೀಡಿದೆ' ಎಂದು ಒಬ್ಬರು ಬರೆದಿದ್ದಾರೆ.
ಬಿಜೆಪಿಗರನ್ನು ದ್ವೇಷಿಸಬೇಡಿ, ಅವರು ನಮ್ಮ ಸೋದರ, ಸೋದರಿಯರು: ಅರವಿಂದ ಕೇಜ್ರಿವಾಲ್
ನಾನು ಸಾಮಾನ್ಯವಾಗಿ ಹಳೆಬೀಡು ಹಾಗೂ ಬೇಲೂರಿಗೆ ಭೇಟಿ ನೀಡುತ್ತಿರುತ್ತೇನೆ. ಅಲ್ಲಿನ ಕಲ್ಲಿನ ಕೆತ್ತನೆಗಳನ್ನು ನೋಡುವಾಗ ಕೆತ್ತಿದ ವ್ಯಕ್ತಿಯಲ್ಲಿ ಏನಾದರೂ ವಿಶೇಷತೆ ಇದ್ದಿರಲೇಬೇಕು ಎಂದುಕೊಳ್ಳುತ್ತಿದೆ. ಆದರೆ, ಸಾಮಾನ್ಯ ಜನರೂ ಕೂಡ ಪ್ರೀತಿ, ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂಥ ಕೆತ್ತನೆ ಮಾಡಲು ಸಾಧ್ಯ ಎನ್ನುವುದನ್ನು ನೀವು ತೋರಿಸಿಕೊಟ್ಟಿದ್ದೀರಿ. ಮುಂದಿನ ಹಲವು ಶಿಲ್ಪಿಗಳಿಗೆ ನೀವು ಸ್ಫೂರ್ತಿಯಾಗಿದ್ದೀರಿ ಎಂದು ಬರೆದುಕೊಂಡಿದ್ದಾರೆ. 'ಬಾಲಕ ರಾಮನ ದಿವ್ಯ ಕಣ್ಣುಗಳನ್ನು ಕೆತ್ತಿದ ಈ ಉಪಕರಣಗಳನ್ನು ನೋಡಿದ ನಾನು ಧನ್ಯನಾಗಿದ್ದೇನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.