Asianet Suvarna News Asianet Suvarna News

ಆರ್ಟಿಕಲ್ 370 ರದ್ಧು ಪ್ರಶ್ನಿಸಿ ಅಮಾನತ್ತಾದ ಉಪನ್ಯಾಸಕನಿಗೆ ಗುಡ್ ನ್ಯೂಸ್, ಆದೇಶ ಹಿಂಪಡೆದ ಇಲಾಖೆ!

ಆರ್ಟಿಕಲ್ 370 ರದ್ಧು ಪ್ರಶ್ನಿಸಿದ ಜಮ್ಮು ಮತ್ತು ಕಾಶ್ಮೀರ ಉಪನ್ಯಾಸ ಇತ್ತೀಚೆಗೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಇದೀದ  ಕಾಶ್ಮೀರ ಶಿಕ್ಷಣ ಇಲಾಖೆ ನಿರ್ಧಾರ ಹಿಂಪಡೆದಿದೆ. ಉಪನ್ಯಾಸಕ ಅಮಾನತು ಆದೇಶ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

Article 370 case Jammu  and kashmir Revoke suspension of lecturer Zahoor Ahmad Bhat after Supreme court concern ckm
Author
First Published Sep 3, 2023, 7:33 PM IST

ಕಾಶ್ಮೀರ(ಸೆ.03) ಜಮ್ಮು ಮತ್ತು ಕಾಶ್ಮೀರ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರದ ನಿರ್ಧಾರ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.  ರದ್ದು ಪ್ರಶ್ನಿಸಿದ ಅರ್ಜಿದಾರರ ಪೈಕಿ ಜಮ್ಮು ಮತ್ತು ಕಾಶ್ಮೀರ ಉಪನ್ಯಾಸಕ ಜಹೂರ್ ಅಹಮ್ಮದ್ ಭಟ್ ಕೂಡ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾಗಿದ್ದರು. ರಾಜ್ಯದ ವಿರುದ್ಧವೇ ನಿಂತ ಉಪನ್ಯಾಸಕನನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿತ್ತು.  ಇದೀಗ ಶಿಕ್ಷಣ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.  ಉಪನ್ಯಾಸಕನ  ಅಮಾನತು ಶಿಕ್ಷೆಯನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಟ್ಟಿದೆ. 

ವೃತ್ತಿಯಲ್ಲಿ ಉಪನ್ಯಾಸನಾಗಿರುವ ಜಹೂರ್ ಅಹಮ್ಮದ್ ಭಟ್, ವಕೀಲರಾಗಿಯೂ ಅನುಭವ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕುರಿತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಪೈಕಿ ಈ ಜಹೂರ್ ಅಹಮ್ಮದ್ ಭಟ್ ಕೂಡ  ಒಬ್ಬರು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬೆನ್ನಲ್ಲೇ ಜಹೂರ್ ಅಹಮ್ಮದ್ ಭಟ್ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ನಿರ್ಧಾರದ ವಿರುದ್ಧ ವಾದ ವಿವಾದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸ ರಾಜ್ಯದ ವಿರುದ್ಧವೇ ಧ್ವನಿ ಎತ್ತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಇಲಾಖೆ ಜಹೂರ್ ಅಹಮ್ಮದ್ ಭಟ್‌ಗೆ ಅಮಾನತು ಶಿಕ್ಷೆ ನೀಡಿತ್ತು. ಇದೀಗ ಶಿಕ್ಷಣ ಇಲಾಖೆ ಈ ಆದೇಶ ರದ್ದು ಮಾಡಿದೆ. ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶದಲ್ಲಿ ಹೇಳಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧ: ಕೇಂದ್ರ ಸರ್ಕಾರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರಿಂಕೋರ್ಚ್‌ಗೆ ಜಹೂರ್ ಅಹಮ್ಮದ್ ಭಟ್ ಅರ್ಜಿ ಸಲ್ಲಿಸಿದ್ದರು.  ಉಪನ್ಯಾಸನ ನಡೆಯಿಂದ ಆಕ್ರೋಶಗೊಂಡಿದ್ದ ಶಿಕ್ಷಣ ಇಲಾಖೆ ಅಮಾನತುಗೊಳಿಸಿತ್ತು. ಆದರೆ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಅಮಾನತು ಕುರಿತು  ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ತನ್ನ ಆದೇಶ ಹಿಂಪಡೆದಿದೆ.  

ಜಮ್ಮು ಕಾಶ್ಮೀರದ ಕಾನೂನು ಕಾಲೇಜೊಂದರ ಪೊಲಿಟಿಕಲ್‌ ಸೈನ್ಸ್‌ ಉಪನ್ಯಾಸಕ ಜಹೂರ್‌ ಅಹಮದ್‌ ಭಟ್‌ , ತಾವೇ ಸುಪ್ರೀಂಕೋರ್ಚ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠದ ಎದುರು ಹಾಜರಾಗಿ, ‘2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಾಲೇಜಿನಲ್ಲಿ ಪಾಠ ಮಾಡುವುದು ಕಷ್ಟವಾಗಿದೆ. ವಿದ್ಯಾರ್ಥಿಗಳು ನಾವು ನಿಜವಾಗಿಯೂ ಪ್ರಜಾಪ್ರಭುತ್ವದಲ್ಲಿ ಇದ್ದೇವಾ ಎಂದು ಕೇಳುತ್ತಾರೆ. ಭಾರತೀಯ ಸಂವಿಧಾನದ ನೈತಿಕತೆಗೆ ವಿರುದ್ಧವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಗಿದೆ’ ಎಂದು ವಾದಿಸಿದ್ದರು. ಎರಡು ದಿನಗಳ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು.

ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನ ಯಾವಾಗ ಕೊಡ್ತೀರಿ ಟೈಂ ಹೇಳಿ: ಕೇಂದ್ರಕ್ಕೆ ಸುಪ್ರೀಂ

ಇದನ್ನು ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಕೋರ್ಚ್‌ನ ಗಮನಕ್ಕೆ ತಂದರು. ಆಗ ನ್ಯಾಯಪೀಠ, ‘ಬೇರೆ ವಿಷಯಕ್ಕೆ ಸಸ್ಪೆಂಡ್‌ ಮಾಡಿದ್ದರೆ ನಮ್ಮ ಆಕ್ಷೇಪವಿಲ್ಲ. ಆದರೆ ಅವರು ಕೋರ್ಚ್‌ಗೆ ಬಂದಿದ್ದಕ್ಕೆ ಸಸ್ಪೆಂಡ್‌ ಮಾಡಿದ್ದರೆ ಅದು ದ್ವೇಷದ ಕ್ರಮವಾಗುತ್ತದೆ. ಅದು ಖಂಡಿತ ಸರಿಯಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಕೇಂದ್ರಕ್ಕೆ ಸೂಚನೆ ನೀಡಿತು.
 

Follow Us:
Download App:
  • android
  • ios