ತಿರುವನಂತಪುರ[ಡಿ.22]: 30 ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದರಲ್ಲಿ ನಾಯರ್‌ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆ ಎಂಬ ಪ್ರಕರಣ ಸಂಬಂಧ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ಕೇರಳ ನ್ಯಾಯಾಲಯವೊಂದು ಬಂಧನ ವಾರಂಟ್‌ ಹೊರಡಿಸಿದೆ.

ಸಮನ್ಸ್‌ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ಹಾಗೂ ತಮ್ಮ ವಕೀಲರನ್ನೂ ಕೋರ್ಟಿಗೆ ಕಳುಹಿಸದ ಕಾರಣ ಈ ವಾರಂಟ್‌ ಅನ್ನು ನ್ಯಾಯಾಲಯ ಜಾರಿಗೊಳಿಸಿದೆ. 1989ರಲ್ಲಿ ತರೂರ್‌ ಅವರು ‘ದ ಗ್ರೇಟ್‌ ಇಂಡಿಯನ್‌ ನಾವಲ್‌’ ಎಂಬ ಪುಸ್ತಕ ಬರೆದಿದ್ದರು.

ಅದರಲ್ಲಿ ನಾಯರ್‌ ಸಮುದಾಯದ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶಗಳಿದ್ದವು ಎಂಬ ಸಂಬಂಧ ತಿರುವನಂತಪುರ ಕೋರ್ಟಲ್ಲಿ ವಿಚಾರಣೆ ನಡೆಯುತ್ತಿದೆ.

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ