ಬೆಂಗಳೂರು(ಆ.02): ಬೆಂಗಳೂರಿನ ಶಿಲ್ಪಿ ರಾಮಮೂರ್ತಿ ಅವರು ಕೆತ್ತಿದ ಕೋದಂಡ ರಾಮನ ಮೂರ್ತಿ ಹಾಗೂ ಲವ- ಕುಶರ ವಿಗ್ರಹಗಳನ್ನು ರಾಮ ಮಂದಿರ ಭೂಮಿ ಪೂಜೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ.

ಸಾಗವಾನಿ ಮರದಿಂದ ಕೆತ್ತಿದ ಒಂದೂವರೆ ಅಡಿ ಎತ್ತರದ ಮೂರ್ತಿಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಸ್ತಾಂತರಿಸಲಿದ್ದಾರೆ. ದಕ್ಷಿಣ ಭಾರತದ ವಾಸ್ತುಶಿಲ್ಪಿ ಹಾಗೂ ಚೋಳರ ಕಾಲದ ಕೆತ್ತನೆಗಳನ್ನು ಈ ಮೂರ್ತಿಗಳಲ್ಲಿ ಕಾಣಬಹುದಾಗಿದೆ.

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಈ ಮುನ್ನ 7.5 ಅಡಿ ಎತ್ತರದ ಕೋದಂಡ ರಾಮನ ಮೂರ್ತಿಯ ಕೆತ್ತನೆಗೆ 2016ರಲ್ಲಿ ರಾಮಮೂರ್ತಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈ ಮೂರ್ತಿಯನ್ನು ಇಷ್ಟಪಟ್ಟಯೋಗಿ ಆದಿತ್ಯನಾಥ್‌ ಮೋದಿ ಅವರಿಗೆ ಉಡುಗೊರೆ ನೀಡಲು ಮೂರ್ತಿಗಳನ್ನು ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದರು.