Asianet Suvarna News Asianet Suvarna News

ಸೇನೆಯಲ್ಲಿ ಸ್ತ್ರೀಯರಿಗೆ ಕಾಯಂ ನೌಕರಿಗೆ ತಾರತಮ್ಯ: ಸುಪ್ರೀಂ

ಸೇನೆಯಲ್ಲಿ ಸ್ತ್ರೀಯರಿಗೆ ಕಾಯಂ ನೌಕರಿಗೆ ತಾರತಮ್ಯ: ಸುಪ್ರೀಂ| ಸಾಧನೆ ನೋಡದೆ ಫಿಟ್‌ನೆಸ್‌ ಮಾತ್ರ ಏಕೆ ನೋಡುತ್ತೀರಿ?

Army criteria systemically discriminates against women Supreme Court pod
Author
Bangalore, First Published Mar 26, 2021, 9:29 AM IST

ನವದೆಹಲಿ(ಮಾ.26): ಭೂಸೇನೆ ಮತ್ತು ನೌಕಾಪಡೆಯಲ್ಲಿ ಮಹಿಳೆಯರಿಗೆ ಪರ್ಮನೆಂಟ್‌ ಕಮಿಷನ್‌ (ಕಾಯಂ ಉದ್ಯೋಗ) ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್‌, ಈ ಕುರಿತು ಅವಕಾಶವಂಚಿತರು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದೆ.

ಹೆಚ್ಚಿದ ಹಿಮಪಾತ: ಗರ್ಭಿಣಿ ಮಹಿಳೆಯನ್ನು ಹೊತ್ತು ಆಸ್ಪತ್ರೆಗೆ ನಡೆದ ಸೈನಿಕರು

ಸೇನಾಪಡೆಗಳಲ್ಲಿ ಮಹಿಳೆಯರಿಗೆ ಶಾರ್ಟ್‌ ಸರ್ವೀಸ್‌ ಕಮಿಷನ್‌ (ಎಸ್‌ಎಸ್‌ಸಿ: 14 ವರ್ಷ ಅಥವಾ 20 ವರ್ಷದ ಸೇವೆ) ಬದಲು ಕಾಯಂ ಉದ್ಯೋಗ ನೀಡಬೇಕೆಂದು ಕಳೆದ ವರ್ಷ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಅದರಂತೆ ಎಸ್‌ಎಸ್‌ಸಿಯಲ್ಲಿರುವ ಮಹಿಳೆಯರನ್ನು ಕಾಯಂ ಉದ್ಯೋಗಕ್ಕೆ ಆಯ್ಕೆ ಮಾಡಲು ವಾರ್ಷಿಕ ರಹಸ್ಯ ವರದಿ (ಎಸಿಆರ್‌) ಪಡೆಯುವ ಪದ್ಧತಿಯನ್ನು ಸೇನೆಯಲ್ಲಿ ಜಾರಿಗೆ ತರಲಾಗಿದೆ. ಈ ವರದಿಯಲ್ಲಿ ಮಹಿಳೆಯರ ದೈಹಿಕ ಕ್ಷಮತೆ ಮತ್ತು ಆರೋಗ್ಯವನ್ನು ಮಾತ್ರ ಪರಿಗಣಿಸಲಾಗುತ್ತದೆಯೇ ಹೊರತು ಅವರ ಸಾಧನೆಯನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ನಮಗೆ ತಾರತಮ್ಯವಾಗುತ್ತಿದೆ ಎಂದು ಕೆಲವರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ.

ಭಾರತ ಸೇನೆ ನಂ.4 ಶಕ್ತಿಶಾಲಿ: ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ!

ಈ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾ| ಡಿ.ವೈ.ಚಂದ್ರಚೂಡ್‌ ಅವರ ಪೀಠ, ಮಹಿಳೆಯರಿಗೆ ಕಾಯಂ ಉದ್ಯೋಗ ನೀಡಲು ಸೇನೆ ಅನುಸರಿಸುತ್ತಿರುವ ನಿಯಮ ಏಕಪಕ್ಷೀಯ ಹಾಗೂ ಅತಾರ್ಕಿಕವಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರದಿಂದಲೂ ಸಾಮಾಜಿಕ ವ್ಯವಸ್ಥೆಯನ್ನು ಪುರುಷರೇ ಪುರುಷರಿಗಾಗಿ ರೂಪಿಸುತ್ತಿದ್ದು, ಇಲ್ಲಿ ಸಮಾನತೆಯ ಬಗ್ಗೆ ಮಾತನಾಡುವುದು ಪ್ರಹಸನವಾಗುತ್ತದೆ. ಈ ತಾರತಮ್ಯ ಹೋಗಲಾಡಿಸಲು ಮತ್ತು ಮಹಿಳೆಯರಿಗೆ ಎಲ್ಲ ಅವಕಾಶಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು.

Follow Us:
Download App:
  • android
  • ios