ಕೊಟ್ಟ ಮಾತನ್ನು ಉಳಿಸಿಕೊಳ್ಳದೇ, ಐದು ಕೋಟಿ ಜನರ ಭರವಸೆಯನ್ನು ಹುಸಿ ಮಾಡಿ ಈಗ ನಮ್ಮ ರಾಜ್ಯಕ್ಕೆ ಆಗಮಿಸಲು ನಾಚಿಕೆಯಾಗುವುದಿಲ್ಲವೇ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅಮರಾವತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಕ್ ಪ್ರಹಾರ ಮುಂದುವರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸದೇ ಕಾಲಿ ಕೈಯಲ್ಲಿ ನಮ್ಮ ರಾಜ್ಯಕ್ಕೆ ಆಗಮಿಸಲು ನಾಚಿಕೆಯಾವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. 

ಮಾರ್ಚ್ 1 ರಂದು ವಿಶಾಖಪಟ್ಟಣಕ್ಕೆ ಮೋದಿ ಆಗಮಿಸುವ ನಿಟ್ಟಿನಲ್ಲಿ ಇಲ್ಲಿನ ಐದು ಕೋಟಿ ಜನಕ್ಕೆ ಸುಳ್ಳು ಆಶ್ವಾಸನೆ ನೀಡಿ ಈಗ ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಆಡಳಿತಕ್ಕೆ ಬಂದು ಐದು ವರ್ಷವಾದರೂ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ. ಐದು ವರ್ಷದಲ್ಲಿ ತಾವು 29 ಬಾರಿ ಭೇಟಿ ನೀಡಿ ತಮ್ಮ ರಾಜ್ಯಕ್ಕೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಕೇಳಿಕೊಂಡೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.

ಇದು ಟ್ರೇಲರ್‌, ಮುಂದಿದೆ ದೊಡ್ಡಾಟ!

ತಮ್ಮ ರಾಜ್ಯದ ಜನರಿಗೆ NDA ಮೈತ್ರಿಕೂಟದಿಂದ ಯಾವುದೇ ರೀತಿಯ ಅನುಕೂಲ ಸಿಗದ ಕಾರಣ ಮೈತ್ರಿಕೂಟವನ್ನೂ ತಾವು ತೊರೆದಿದ್ದಾಗಿ ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಸರ್ಜಿಕಲ್ ದಾಳಿಯಲ್ಲಿ ಹತರಾದವರೆಷ್ಟು? ವಿದೇಶಿ ಮೀಡಿಯಾ ನಂಬಿ ಸಾಕ್ಷಿ ಕೇಳಿದ ಮಮತಾ

ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ನೀಡಲು ಕೇಳಿಕೊಂಡಿದ್ದು, ಸಿಗಬೇಕಾದ ಅನುದಾನಗಳೂ ಕೂಡ ಸೂಕ್ತ ರೀತಿಯಲ್ಲಿ ಸಿಗಲಿಲ್ಲ. ಯಾವುದೇ ಅನುಕೂಲವನ್ನೂ ರಾಜ್ಯಕ್ಕೆ ಒದಗಿಸದೇ ಈಗ ರಾಜ್ಯಕ್ಕೆ ಬರುವ ಪ್ರಧಾನಿಗೆ ನಾಚಿಕೆಯಾಗಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.