Min read

ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಮಂದಿರವಿತ್ತು: ಎಎಸ್‌ಐ ವರದಿಯಲ್ಲಿ ಬಹಿರಂಗ!

Archaeological Survey report says Hindu temple existed before Gyanvapi was built san

Synopsis

ಜ್ಞಾನವಾಪಿ ಮಸೀದಿ ಕಟ್ಟುವ ಮೊದಲು ಅದೇ ಸ್ಥಳದಲ್ಲಿ ಹಿಂದೂ ದೇವಾಲಯ ಇತ್ತು ಎಂದು ಪುರಾತತ್ವ ಸರ್ವೇಕ್ಷಣಾ ವರದಿಯಲ್ಲಿ ತಿಳಿಸಲಾಗಿದೆ. ಎಎಸ್‌ಐ ವರದಿಯನ್ನು ಬಹಿರಂಗ ಮಾಡುವಂತೆ ಈ ಹಿಂದೆ ಕೋರ್ಟ್‌ ಆದೇಶ ನೀಡಿತ್ತು.
 

ನವದೆಹಲಿ (ಜ.25): ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಇತ್ತೀಚಿನ ವರದಿಯು ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೊಡ್ಡ ಪ್ರಮಾಣದ ಹಿಂದೂ ದೇವಾಲಯದ ರಚನೆ ಇತ್ತು ಎನ್ನುವುವದನ್ನು ಬಲವಾಗಿ ಸೂಚಿಸಿದೆ ಎಂದು ಈ ಕೇಸ್‌ನಲ್ಲಿ ಹಿಂದು ಪರ ವಾದ ಮಂಡಿಸಿರುವ ವಕೀಲ ವಿಷ್ಣು ಶಂಕರ್ ಜೈನ್ ಗುರುವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈನ್, ಎಎಸ್‌ಐ ಸಮೀಕ್ಷೆಯು, ಈಗಿರುವ ರಚನೆಗಿಂತ ದೊಡ್ಡ ಪ್ರಮಾಣದ ಹಿಂದು ದೇವಾಲಯ ಅಲ್ಲಿತ್ತು ಎನ್ನುವುದನ್ನು ಸೂಚಿಸಿದೆ ಎಂದು ಹೇಳಿದ್ದಾರೆ. ಮಸೀದಿ ನಿರ್ಮಾಣಕ್ಕೂ ಮುನ್ನ ಮಂದಿರ ಇತ್ತು. ಚಿಕ್ಕ ಮಂದಿರವಲ್ಲ. ಅಲ್ಲಿ ದೊಡ್ಡ ಭವ್ಯ ಮಂದಿರ ನಿರ್ಮಾಣವಾಗಿತ್ತು. ಹಿಂದಿನ ಕಟ್ಟಡದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದ್ದು, 32 ಹಿಂದೂ ಮಂದಿರಗಳ  ಶಾಸನಗಳು ಇದರಲ್ಲಿ ಪತ್ತೆಯಾಗಿದೆ. ಈ ಮಂದಿರದಲ್ಲಿರುವ ಶಾಸನಗಳು ಕನ್ನಡ, ತೆಲುಗು ಹಾಗೂ ದೇವನಾಗರಿ ಲಿಪಿಯಲ್ಲಿವೆ ಎಂದು ವರದಿ ತಿಳಿಸಿದೆ.

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಸಮೀಕ್ಷೆಯನ್ನು ಸಹ ಎಎಸ್‌ ವರದಿ ಒಳಗೊಂಡಿದೆ. ಆ ಮೂಲಕ ಪ್ರದೇಶದಲ್ಲಿ ಐತಿಹಾಸಿಕ ಪದರಗಳ ಬಗ್ಗೆ ಇದ್ದ ಪ್ರಶ್ನೆಗಳಿಗೂ ಉತ್ತರ ಪಡೆಯಲಾಗಿದೆ. ವಿಷ್ಣು ಶಂಕರ್‌ ಜೈನ್‌ ಪ್ರಕಾರ ಪ್ರಸ್ತುತ ರಚನೆಯು ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆ ಎನ್ನುವುದು ಖಚಿತವಾಗಿ ತೋರುತ್ತಿದೆ ಎಂದಿದ್ದಾರೆ.

ಜ್ಞಾನವಾಪಿ ಮಸೀದಿ ಸರ್ವೇ ವರದಿ ಕೋರ್ಟ್‌ಗೆ ಸಲ್ಲಿಸಿದ ಪುರಾತತ್ವ ಇಲಾಖೆ: ರಿಪೋರ್ಟ್‌ನಲ್ಲೇನಿದೆ?

"ಎಎಸ್‌ಐ ಕಂಡುಕೊಂಡಿರುವ ಸಂಶೋಧನೆಗಳು ಮಸೀದಿಗೆ ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಣ್ಣ ಬದಲಾವಣೆಗಳೊಂದಿಗೆ ಕಂಬಗಳು ಮತ್ತು ಪ್ಲಾಸ್ಟರ್ ಅನ್ನು ಮರುಬಳಕೆ ಮಾಡಲಾಗಿದೆ ಎಂದು ಸೂಚಿಸುತ್ತದೆ. ಹಿಂದೂ ದೇವಾಲಯದ ಕೆಲವು ಕಂಬಗಳನ್ನು ಹೊಸ ರಚನೆಯಲ್ಲಿ ಬಳಸಲು ಸ್ವಲ್ಪ ಮಾರ್ಪಡಿಸಲಾಗಿದೆ. ಕಂಬಗಳ ಮೇಲಿನ ಕೆತ್ತನೆಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ," ಜೈನ್ ಎಎಸ್‌ಐ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ದೇವನಾಗರಿ, ತೆಲುಗು, ಕನ್ನಡ ಮತ್ತು ಇತರ ಲಿಪಿಗಳಲ್ಲಿ ಬರೆಯಲಾದ ಪ್ರಾಚೀನ ಹಿಂದೂ ದೇವಾಲಯಕ್ಕೆ ಸೇರಿದ ಶಾಸನಗಳನ್ನು ಸಹ ಸ್ಥಳದಲ್ಲಿ ಪತ್ತೆ ಮಾಡಲಾಗಿದೆ ಎಂದು ವಿಷ್ಣು ಶಂಕರ್‌ ಜೈನ್‌ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತು ಎಎಸ್‌ಐ ಸಮೀಕ್ಷೆಯ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೆ ನೀಡಬೇಕು ಎಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡಿದ ಒಂದು ದಿನದ ನಂತರ ಎಎಸ್‌ಈ ವರದಿ ಬಹಿರಂಗವಾಗಿದೆ. ಕಳೆದ ವರ್ಷ, ಎಎಸ್‌ಐ ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು, ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ಗುರುತಿಸುವ ಸಲುವಾಗಿ ಈ ಸಮೀಕ್ಷೆ ಮಾಡಲಾಗಿತ್ತು.

'ಜ್ಞಾನವಾಪಿಯನ್ನ ಮಸೀದಿ ಅಂತಾ ಕರೆಯೋದನ್ನ ಮೊದಲು ಬಿಡಿ..' ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್‌ ಮಾತು!

ಹಿಂದೂ ಅರ್ಜಿದಾರರು 17 ನೇ ಶತಮಾನದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ ನಂತರ ನ್ಯಾಯಾಲಯವು ಎಎಸ್ಐ ಸಮೀಕ್ಷೆಗೆ ಆದೇಶ ನೀಡಿತ್ತು.

 

 

Latest Videos