*ಮಾನದಂಡ ಪರಿಗಣಿಸದೇ ಅನುಕಂಪದ ನೌಕರಿ ನೀಡಿಕೆ ತಪ್ಪು*ತಿದ್ದುಪಡಿ ನಂತರ ನೇಮಕಾತಿಯ ಅರ್ಜಿಯನ್ನು ಪರಿಗಣನೆ*ಭೀಮೇಶ್‌ಗೆ ನೌಕರಿ ನೀಡಲು ಆಗದು: ಸುಪ್ರೀಂ ಕೋರ್ಟ್‌ 

ನವದೆಹಲಿ(ಡಿ. 17): ಅನುಕಂಪದ ಆಧಾರದ ಮೇಲೆ ನೌಕರಿ ನೀಡುವಾಗ (Compassionate Appointment), ವ್ಯಕ್ತಿಯ ಹಣಕಾಸು ಪರಿಸ್ಥಿತಿ, ಮೃತನ ಮೇಲೆ ಆತ/ಆಕೆ ಹೊಂದಿದ್ದ ಆರ್ಥಿಕ ಅವಲಂಬನೆ, ಕುಟುಂಬದಲ್ಲಿನ ಇತರರ ಕಸುಬು- ಇತ್ಯಾದಿ ಮಾನದಂಡಗಳನ್ನು ಪರಿಗಣಿಸಬೇಕು. ಈ ಸಂಗತಿಗಳನ್ನು ಪರಿಗಣಿಸದೇ ತನ್ನಿಂತಾನೇ ‘ಸ್ವಯಂಚಾಲಿತವಾಗಿ’ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಕರ್ನಾಟಕದ ಭೀಮೇಶ್‌ (Bheemesh) ಎಂಬುವರ ಅಕ್ಕ ಅವಿವಾಹಿತೆಯಾಗಿದ್ದು, ಶಿಕ್ಷಕ ವೃತ್ತಿಯಲ್ಲಿದ್ದಾಗ ತೀರಿಕೊಂಡಿದ್ದರು. ಆಕೆಯ ಅವಲಂಬಿತ ತಾನಾಗಿರುವ ಕಾರಣ ತನಗೆ ನೌಕರಿ ನೀಡಬೇಕು ಎಂದು ಭೀಮೇಶ್‌ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರ (Karnataka Government), ಈ ಅರ್ಜಿ ತಿರಸ್ಕರಿಸಿದ್ದರೂ ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ) ಹಾಗೂ ಕರ್ನಾಟಕ ಹೈಕೋರ್ಟ್‌ ಅರ್ಜಿ ಮಾನ್ಯ ಮಾಡಿದ್ದವು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಭೀಮೇಶ್‌ಗೆ ನೌಕರಿ ನೀಡಲು ಆಗದು: ಸುಪ್ರೀಂ ಕೋರ್ಟ್‌

ಗುರುವಾರ ಈ ಕುರಿತು ತೀರ್ಪು ಪ್ರಕಟಿಸಿ ಹೈಕೋರ್ಟ್‌ ಆದೇಶ ರದ್ದು ಮಾಡಿರುವ ಸುಪ್ರೀಂ ಕೋರ್ಟ್‌, ಮಾನದಂಡ ಪರಿಗಣಿಸದೇ ನೇಮಕ ಮಾಡಲಾಗಿದೆ ಎಂದು ಹೇಳಿದೆ. ಅಲ್ಲದೆ, ಭೀಮೇಶ್‌ ಅಕ್ಕ ತೀರಿಹೋಗಿದ್ದು 2010ರಲ್ಲಿ. ಆದರೆ ‘ಅವಿವಾಹಿತ ಮಹಿಳಾ ಉದ್ಯೋಗಿ ಸಾವನ್ನಪ್ಪಿದರೆ ಅವಲಂಬಿತ ಸೋದರನಿಗೆ ನೌಕರಿ ನೀಡಬಹುದು’ ಎಂಬ ಕರ್ನಾಟಕ ನಾಗರಿಕ ಸೇವಾ ನಿಯಮದ ತಿದ್ದುಪಡಿ ಜಾರಿಗೆ ಬಂದಿದ್ದು 2012ರಲ್ಲಿ. ಹೀಗಾಗಿ ತಿದ್ದುಪಡಿಯನ್ನು ಪೂರ್ವಾನ್ವಯಿಸಿ ಭೀಮೇಶ್‌ಗೆ ನೌಕರಿ ನೀಡಲು ಆಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಪ್ರಕರಣಕ್ಕೆ ಸಂಬಂಧಿಸದಂತೆ, ಉದ್ಯೋಗಿ ಡಿಸೆಂಬರ್ 8, 2010 ರಂದು ನಿಧನರಾದರು ಮತ್ತು ನಿಯಮಗಳಿಗೆ ತಿದ್ದುಪಡಿಯನ್ನು ಜೂನ್ 20, 2012 ರಂದು ಕರಡು ಅಧಿಸೂಚನೆಯ ಮೂಲಕ ಪ್ರಸ್ತಾಪಿಸಲಾಯಿತು. ಅಂತಿಮ ಅಧಿಸೂಚನೆಯನ್ನು ಜುಲೈ 11, 2012 ರಂದು ನೀಡಲಾಯಿತು"

"ತಿದ್ದುಪಡಿ ವಿಷಯದ ನಂತರ ನೇಮಕಾತಿಯ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡ ಕಾರಣ, ಪ್ರತಿವಾದಿಯು ತಿದ್ದುಪಡಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ" ಎಂದು ಆದೇಶ ನೀಡುವ ಮೂಲಕ ಸುಪ್ರಿಂ ಕೋರ್ಟ್ ಪೀಠವು ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ದೇಶದ ಎಲ್ಲಾ ನಗರಗಳು ಸ್ಲಮ್ ರೀತಿ ಆಗಿವೆ ಎಂದ ಸುಪ್ರೀಂ ಕೋರ್ಟ್

 ಭಾರತೀಯ ರೈಲ್ವೇ (Indian Railways) ತನ್ನ ಭೂಮಿಯ ಮೇಲಿನ ಅತಿಕ್ರಮಗಳ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಹಾಗೂ ಭೂಅತಿಕ್ರಮ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ (Supreme Court ) ಹೇಳಿದೆ. ಅದರೊಂದಿಗೆ ಗುಜರಾತ್ ನಲ್ಲಿ (Gujarat) 5 ಸಾವಿರ ಗುಡಿಸಲುಗಳು ರೈಲ್ವೇಸ್ ಗೆ ತನ್ನ ಜಾಗವನ್ನು ಮರಳಿ ನೀಡಬೇಕು ಎಂದು ಸೂಚನೆ ನೀಡಿದೆ. 

"ನಮ್ಮ ದೇಶ ಮುಂದಿನ ವರ್ಷ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಆದರೆ, ದುಃಖಕರ ಸಂಗತಿ ಏನೆಂದರೆ, ಇಂದು ದೇಶದ ಎಲ್ಲಾ ಪ್ರಮುಖ ನಗರಗಳು ಕೊಳೆಗೇರಿಗಳಾಗಿ ಮಾರ್ಪಟ್ಟಿದೆ ಹಾಗೂ 75 ವರ್ಷಗಳಿಂದಲೂ ಇದು ನಡೆಯುತ್ತಿದೆ ಎನ್ನುವುದು ಬೇಸರದ ಸಂಗತಿ' ಎಂದು ಅಭಿಪ್ರಾಯಪಟ್ಟಿದೆ. ಆ ಮೂಲಕ ಸ್ಲಮ್ ನಿವಾಸಿಗಳು (Slum Dwellers) ಗುಡಿಸಲುಗಳನ್ನು ಕೆಡವದೇ ಇರುವಂತೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ದೇಶದ ಯಾವುದೇ ನಗರವನ್ನು ಬೇಕಾದರೆ ನೋಡಿ, ಬಹುಶಃ ಚಂಡೀಗಢವೊಂದು (Chandigarh) ಹೊರತಾಗಿರಬಹುದು. ಅಲ್ಲಿಯೂ ಕೆಲವೊಂದು ಸಮಸ್ಯೆಗಳಿವೆ. ಭೂ ಅತಿಕ್ರಮ ಇಂದು ಎಲ್ಲೆಡೆ ನಡೆಯುತ್ತಿದೆ. ವಾಸ್ತವಕ್ಕೆ ಬಂದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸೋಣ' ಎಂದು ನ್ಯಾಯಮೂರ್ತಿಗಳಾದ ಎಎಂ ಖಾನ್ ವಿಲ್ಕರ್ (AM Khanwilkar), ದಿನೇಶ್ ಮಹೇಶ್ವರಿ (Dinesh Maheshwari) ಹಾಗೂ ಸಿಟಿ ರವಿಕುಮಾರ್ (CT Ravikumar) ಇದ್ದ ತ್ರಿಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿತು

ಇದನ್ನೂ ಓದಿ:

1) Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ : ಹೈಕೋರ್ಟ್

2) Kashiyatra: ಅಧ್ಯಯನಕ್ಕಾಗಿ ದೇಶದ 100 ಮೇಯರ್‌ಗಳ ಕಾಶಿಯಾತ್ರೆ

3) Bengaluru: ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು: ಸಿಎಂ ಬೊಮ್ಮಾಯಿ